ಶಿರಾಳಕೊಪ್ಪದ ಹಳಿಯೂರು ಸರ್ಕಾರಿ ಉರ್ದು ಶಾಲೆಯಲ್ಲಿ ಕಲಿಕಾ ಹಬ್ಬ…
ಶಿರಾಳಕೊಪ್ಪ:14/1/2026 ಪಟ್ಟಣದ ಹಳಿಯೂರು ಪ್ರದೇಶದಲ್ಲಿರುವ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಿರಾಳಕೊಪ್ಪ ಉರ್ದು 3 ಕ್ಲಸ್ಟರ್ ಮಟ್ಟದ ಶಾಲೆಗಳ ಮಕ್ಕಳ ಕಲಿಕಾ ಹಬ್ಬ (ಎಫ್‌ಎಲ್‌ಎನ್) ಕಾರ್ಯಕ್ರಮ ನಡೆಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಪಟ್ಟಣದ ಉರ್ದು 3 ವಿಭಾಗದ ಕ್ಲಸ್ಟರ್ ಲೆವೆಲ್ ಅಧಿಕಾರಿ ನಾಸಿರ್ ಅಹ್ಮದ್ ‘ಪ್ರಾಥಮಿಕ ಹಂತದಲ್ಲೇ ಮಕ್ಕಳಲ್ಲಿ ಓದು, ಬರವಣಿಗೆ ಮತ್ತು ಗಣಿತದ ಮೂಲಭೂತ ಕೌಶಲ್ಯ ಗಳನ್ನು ಬಲಪಡಿಸುವುದೇ ಎಫ್‌ಎಲ್‌ಎನ್ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.ಇಂತಹ ಕಲಿಕಾ ಹಬ್ಬಗಳು ಮಕ್ಕಳಲ್ಲಿ ಕಲಿಕೆಗೆ ಆಸಕ್ತಿ ಮೂಡಿಸಲು…

