ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ…

The Siasat News - Images

ಶಿರಾಳಕೊಪ್ಪ : ಪಟ್ಟಣದ ಆನವಟ್ಟಿ ರಸ್ತೆ ನಿವಾಸಿಗಳಾದ ಶೋಭಾ ಕುಮಾರ್ ಎಂಬುವವರ ಪುತ್ರ ಗಿರೀಶ (16) ಇವರು ಹಿರೆಕೇರೂರು ತಾಲ್ಲೂಕು ತಾವರಗಿ ಗ್ರಾಮದ ಬಳಿ ಫ್ರೆ 24 ರಂದು ಬೈಕ್ ಮತ್ತು ಟ್ರ್ಯಾಕ್ಟರ್ ಮುಖಾಮುಖಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದು ಇವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ಕಳಿಸಿಕೊಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿರುತ್ತಾರೆ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಂಟುಂಬ ಅವರ ಅಂಗಾಂಗವನ್ನು ದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ, ಕುಟುಂಬದ ಆಕ್ರಂದನ ಗೋಳಾಟ ನೋಡತೀರದಾಗಿತ್ತು ಶನಿವಾರ ಇವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ತಂದು ಸಾರ್ವಜನಿಕ ಮೆರವಣಿಗೆ ಮೂಲಕ ಸೊರಬ ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಲಾಯಿತು.

Share the news!

Leave a Reply

Your email address will not be published. Required fields are marked *