Education
ಜಾಹೀರಾತು ನೀತಿ 2026ಖಂಡಿಸಿ ತಾಲ್ಲೂಕು ಪತ್ರಕರ್ತರ ಸಂಘದಿಂದ ಪ್ರತಿಭಟನೆ… ಸರಕಾರಕ್ಕೆ ಮನವಿ..
ಶಿಕಾರಿಪುರ :23/3/2026 ರಾಜ್ಯ ಸರ್ಕಾರದಿಂದ ನೂತನವಾಗಿ ಜಾರಿಗೆ ಬಂದಂತಹ ಜಾಹೀರಾತು ನೀತಿ 2026 ದಿಂದಾಗಿ ಸಣ್ಣ ಮತ್ತು ಮಧ್ಯಮ ಪತ್ರಿಕೆ ಗಳು ತಮ್ಮ ಅಸ್ತಿತ್ವನ್ನೇ ಕಳೆದು ಕೊಳ್ಳುವ ಗಂಭೀರ ಅಪಾಯ ಎದುರಾಗಲಿದೆ. ಆದುದರಿಂದ ಸರ್ಕಾರ ನೂತನ ಜಾರಿ ಮಾಡಿದ ನೀತಿಯನ್ನು ತಾತ್ಕಾಲಿಕ ವಾಗಿ ಸ್ಥಗಿತಗೊಳಿಸಿ ವ್ಯಾಪಕ ಚರ್ಚೆ ಹಾಗೂ ಸಾಧ್ಯವಾದ ನೀತಿಯ ಮೂಲಕ ಮರು ನಿರೋಪಣೆ ಮಾಡಬೇಕೆಂದು ಆಗ್ರಹಿಸಿ ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ರವರ ಮುಖಾಂತರ ಸರ್ಕಾರಕ್ಕೆ ಮನವಿ…
ಬಡ ವೃದ್ಧೆಯ ಬಾಳಿಗೆ ಆಸರೆಯಾದ ಧರ್ಮಸ್ಥಳ ಸಂಘ: ಜಾವಗಟ್ಟಿಯಲ್ಲಿ ನೂತನ ಮನೆ ಹಸ್ತಾಂತರ…
ಶಿರಾಳಕೊಪ್ಪ :21/3/2026 ಹತ್ತಿರದ ತೊಗರ್ಸಿ ವಲಯ ಬಳ್ಳಿಗಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಜಾವಗಟ್ಟೆ ಗ್ರಾಮ ಕಾರ್ಯಕ್ಷೇತ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಕ್ಕೆ ವಾತ್ಸಲ್ಯ ಮನೆ ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಎಂ ಮಾತನಾಡಿ ಪ್ರಸ್ತುತ ಕಾಲದಲ್ಲಿ ಕೌಟುಂಬಿಕ ಸಂಬಂಧಗಳು ಹಳಸುತ್ತಿದ್ದು, ವೃದ್ಧಾಶ್ರಮಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ. ವೃದ್ಧಾಪ್ಯದಲ್ಲಿ ತಂದೆ-ತಾಯಿಯನ್ನು ಪ್ರೀತಿಯಿಂದ ಸಾಕಿ ಸಲಹುವುದು ಪ್ರತಿಯೊಬ್ಬ ಮಗನ…
ಶಿರಾಳಕೊಪ್ಪದಲ್ಲಿ ಚಿರತೆ ಅಟ್ಟಹಾಸ: ಮೂವರ ಮೇಲೆ ಭೀಕರ ದಾಳಿ, ಗ್ರಾಮಸ್ಥರಲ್ಲಿ ಮನೆಮಾಡಿದ ಭೀತಿ….
ಶಿರಾಳಕೊಪ್ಪ:21/3/2026 ಪ್ರತ್ಯೇಕವಾಗಿ ಮೂವರ ಮೇಲೆ ಚಿರತೆ ದಾಳಿ: ಅಪಾಯದಿಂದ ಪಾರು ಹತ್ತಿರದ ತಡಸನಹಳ್ಳಿ, ಮುತ್ತಗಿ ಹಾಗೂ ಅಡಗಂಟಿ ಗ್ರಾಮದ ಸುತ್ತಮುತ್ತ ಚಿರತೆ ಮೂರು ಜನ ರೈತರ ಮೇಲೆ ದಾಳಿಗೆ ಪ್ರಯತ್ನಿಸಿದ ಘಟನೆ ಶನಿವಾರ ನಡೆದು ರೈತರು ಹೊಲ ಗದ್ದೆಗಳಿಗೆ ತೆರಳಲು ಭಯ ಪಡುವ ವಾತಾವರಣ ಸೃಷ್ಟಿಯಾಗಿದೆ. ಶುಕ್ರವಾರ ಸಂಜೆ ಅಡಗಂಟಿ ಗ್ರಾಮದ ಸುದೀಪ್ ಎಂಬ ಯುವಕ ಗದ್ದಗೆ ಮೇವು ತರಲು ಹೋದಾಗ ಹಠಾತ್ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ. ಪ್ರಾಣಾಪಾಯದಿಂದ ಪಾರಾದ ಯುವಕನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ…
ಶಿರಾಳಕೊಪ್ಪದಲ್ಲಿ ಹೈಟೆಕ್ ಮೆಡಿಲೆನ್ಸ್ ಡಯಾಗ್ನೋಸ್ಟಿಕ್ ಸೆಂಟರ್ ಉದ್ಘಾಟನೆ: ಗ್ರಾಮೀಣ ಜನರಿಗೆ ಇನ್ಮುಂದೆ ಸ್ಥಳೀಯವಾಗಿಯೇ ಸಿಗಲಿದೆ ಗುಣಮಟ್ಟದ ವೈದ್ಯಕೀಯ ಸೇವೆ…
.ಶಿರಾಳಕೊಪ್ಪ:22/2/2026 ಗ್ರಾಮೀಣ ಪ್ರದೇಶದ ಜನರಿಗೆ ರೋಗನಿರ್ಣಯ ಪರೀಕ್ಷೆಗಿಂತ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರುವ ಪ್ರಯಾಣ ವೆಚ್ಚವೇ ಹೊರೆಯಾಗುತ್ತಿತ್ತು. ಇದನ್ನು ಮನಗಂಡು ಶಿರಾಳಕೊಪ್ಪದ ಗಾಂಧಿನಗರದಲ್ಲಿ ಆರಂಭವಾಗಿರುವ ‘ಮೆಡಿಲೆನ್ಸ್ ಡಯಾಗ್ನೋಸ್ಟಿಕ್ ಸೆಂಟರ್‘ ಗ್ರಾಮೀಣ ಜನರಿಗೆ ವರದಾನವಾಗಲಿದೆ,” ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು. ಪಟ್ಟಣದ ಗಾಂಧಿನಗರದಲ್ಲಿ ಅತ್ಯಾಧುನಿಕ ಉಪಕರಣಗಳನ್ನೊಳಗೊಂಡ ‘ಮೆಡಿಲೆನ್ಸ್ ಡಯಾಗ್ನೋಸ್ಟಿಕ್ ಸೆಂಟರ್’ ಉದ್ಘಾಟಿಸಿ ಮಾತನಾಡಿದ ಅವರು ಶಿರಾಳಕೊಪ್ಪ ಸೇರಿದಂತೆ ಆನವಟ್ಟಿ, ಸೊರಬ ಹಾಗೂ ಹಿರೇಕೆರೂರು ಚಿಕ್ಕೇರೂರು ಭಾಗದ ನಾಗರಿಕರು ಇನ್ನು ಮುಂದೆ ಸಣ್ಣಪುಟ್ಟ ಪರೀಕ್ಷೆಗಳಿಗೂ ದೂರದ ಜಿಲ್ಲಾ ಕೇಂದ್ರಗಳಿಗೆ…
ಬಳ್ಳಿಗಾವಿಯ ಸಿಂದಗಿ ಆಶ್ರಮದಲ್ಲಿ ಶ್ರೀ ಮ.ಘ.ಚ. ಶಾಂತವೀರ ಪಟ್ಟಾಧ್ಯಕ್ಷರ ಪುಣ್ಯ ಸ್ಮರಣೋತ್ಸವ: 5 ದಿನಗಳ ಧಾರ್ಮಿಕ ಸಂಭ್ರಮ…
ಶಿರಾಳಕೊಪ್ಪ:16/2/2026 ಸಮೀಪದ ಬಳ್ಳಿಗಾವಿ ಗ್ರಾಮದ ಸಿಂದಗಿ ಶ್ರೀ ಶಾಂತವೀರೇಶ್ವರ ಆಶ್ರಮದಲ್ಲಿ ಪರಮಪೂಜ್ಯ ಲಿಂಗೈಕ್ಯ ಶ್ರೀ ಮ.ಘ.ಚ. ಶಾಂತವೀರ ಪಟ್ಟಾಧ್ಯಕ್ಷರ ಪುಣ್ಯ ಸ್ಮರಣೋತ್ಸವವು ಫೆಬ್ರವರಿ 19ರಿಂದ 23ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ ಎಂದು ಆಶ್ರಮದ ಸಂಸ್ಥಾಪಕರಾದ ಶ್ರೀ ವೇ.ಬ್ರ. ವಾಗೀಶಯ್ಯ ಶಾಸ್ತ್ರಿಗಳು ಹಿರೇಮಠ ತಿಳಿಸಿದರು. ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಅವರು, ಐದು ದಿನಗಳ ಕಾಲ ನಡೆಯುವ ಈ ಸಂಭ್ರಮದ ಮುಖ್ಯಾಂಶಗಳನ್ನು ಹಂಚಿಕೊಂಡರು. ಶಿರಾಳಕೊಪ್ಪ ವಿರಕ್ತಮಠದ ಪೂಜ್ಯಶ್ರೀ ವೀರಬಸವ…
ಪುಸ್ತಕ ಮತ್ತು ಶಿಕ್ಷಣಕ್ಕೆ ಮಾತ್ರ ಬಡತನ ನಿರ್ಮೂಲನೆ ಮಾಡುವ ಶಕ್ತಿ ಇದೆ-ಪತ್ರಕರ್ತ ನವೀನ್ ಕುಮಾರ್ ಅಭಿಮತ…
ಶಿರಾಳಕೊಪ್ಪ:13/2/2026 ಪುಸ್ತಕ ಮತ್ತು ಶಿಕ್ಷಣಕ್ಕೆ ಮಾತ್ರ ಬಡತನ ನಿರ್ಮೂಲನೆ ಮಾಡುವಂತಹ ಶಕ್ತಿ ಇದೆ ಪ್ರತಿಯೊಬ್ಬರೂ ಶಿಕ್ಷಣವನ್ನು ಕಡ್ಡಾಯ ವಾಗಿ ಪಡೆಯುವುದರ ಮೂಲಕ ಸಾಮಾಜಿಕವಾಗಿ ಆರ್ಥಿಕವಾಗಿ ಹಾಗೂ ನೈತಿಕ ವಾಗಿ ಸದೃಢರಾಗಬೇಕೆಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ ನವೀನ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಮಠದ ಗದ್ದೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಡು ಬಡತನದಲ್ಲಿ ಹುಟ್ಟಿದರೂ ಶಿಕ್ಷಣ ಮತ್ತು ಪುಸ್ತಕಗಳ ಮೇಲಿನ ಅಚಲ ಪ್ರೀತಿಯಿಂದ ಡಾ….
ಭೋಗಿ ಗ್ರಾಮದ ಸರಕಾರಿ ಶಾಲೆಯಲ್ಲಿ ವಾರ್ಷಿಕೋತ್ಸವದ ಸಂಭ್ರಮ: ಮಕ್ಕಳಿಂದ ಸಾಂಸ್ಕೃತಿಕ ವೈಭವ….
ಶಿರಾಳಕೊಪ್ಪ:11/02/2026 ಹತ್ತಿರದ ಭೋಗಿ ಗ್ರಾಮದ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜೃಂಭಣೆಯ ಶಾಲಾ ವಾರ್ಷಿಕೋತ್ಸವ ಸೋಮವಾರ ನಡೆಯಿತು. ಅತೀ ಸಣ್ಣ ಗ್ರಾಮವಾದರೂ ಅಂದು ಅಲ್ಲಿ ಮಾತ್ರ ಹಬ್ಬದ ಸಡಗರ ಸಂಭ್ರಮ. ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲದ ರೀತಿಯಲ್ಲಿ ಪುಟ್ಟ ಪುಟಾಣಿಗಳ ಪುಟಿವ ಕಾರಂಜಿ ಕಾರ್ಯಕ್ರಮದ ಆಯೋಜನೆ, ಶಾಲೆ ಮತ್ತು ಶಾಲಾ ಆವರಣದ ಅಲಂಕಾರ, ಬ್ರಹತ್ ಗಾತ್ರದ ವೇದಿಕೆ, ಗ್ರಾಮಸ್ಥರಿಂದ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿ ಗಳಿಗೆ ಮನಸಾರೆ ಸ್ವಾಗತ ಕೋರಿದ ಪರಿ ಬಹಳ ಆಕರ್ಷಿತವಾಗಿತ್ತು. ಇಡೀ…
ಬುದ್ಧಿವಂತರು ಬಡವರಾಗುವುದು ಏಕೆ?’– ಲೇಖಕ ನವೀನ್ ಕುಮಾರ್ ಎಂ ಅವರ ಚೊಚ್ಚಲ ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಗೌರವ…
ಶಿಕಾರಿಪುರ/ಶಿರಾಳಕೊಪ್ಪ: 28/1/2026 ಶಿಕಾರಿಪುರದ ಲೇಖಕ ಹಾಗೂ ಪತ್ರಕರ್ತ ನವೀನ್ ಕುಮಾರ್ ಎಂ ಅವರು ಬರೆದಿರುವ “ಬುದ್ಧಿವಂತರು ಬಡವರಾಗುವುದು ಏಕೆ?” ಎಂಬ ಕನ್ನಡದ ಪ್ರಯೋಗಾತ್ಮಕ ಕೃತಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಡಿಯಲ್ಲಿ ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡುವ ಪ್ರೋತ್ಸಾಹ ಧನ (2025–26)ಕ್ಕೆ ಆಯ್ಕೆಯಾಗಿದೆ. ಈ ಕೃತಿ ಲೇಖಕರ ಮೊದಲ ಪುಸ್ತಕವಾಗಿದ್ದು, ಕನ್ನಡ ಸಾಹಿತ್ಯದಲ್ಲಿ ವಿರಳವಾದ ನ್ಯೂರೋ ಎಕನಾಮಿಕ್ಸ್ (Neuro Economics) ವಿಷಯವನ್ನು ಸರಳ ಭಾಷೆಯಲ್ಲಿ ಓದುಗರಿಗೆ ತಲುಪಿಸುವ ಉದ್ದೇಶ ಹೊಂದಿದೆ. ಹಣ ಮತ್ತು ಮಾನವ ಮನಸ್ಸಿನ ನಡುವಿನ…
ನಾಟಕಗಳು ಸಮಾಜದ ವಿವಿಧ ಸ್ತರದ ಜನರನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ-ರಂಗಾಯಣ ನಿರ್ದೇಶಕ ಪ್ರಸನ್ನ ಡಿ ಸಾಗರ್…
ಶಿಕಾರಿಪುರ:26/1/2026 ಇತ್ತೀಚಿನ ದಿನಗಳಲ್ಲಿ ಮನೋರಂಜನೆ ಎಂಬುವುದುದು ಪ್ರತಿ ಮನೆ ಮನೆಗೆ ಲಗ್ಗೆ ಇಟ್ಟಿದೆ. ಮನೆಯಲ್ಲೇ ಎಲ್ಲಾ ಮನೋರಂಜನೆ ಪಡೆಯುವಂತಹ ಈ ದಿನಗಳಲ್ಲಿ ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯುವ ಅವಕಾಶ ಗಳು ಕ್ಷೀಣಿಸುತ್ತಿದ್ದು ಜನಗಳಲ್ಲಿ ಸಂಕುಚಿತ ಮನೋಭಾವನೆ ಹೆಚ್ಚಾಗುತ್ತಿದೆ ಎಂದು ರಂಗಾಯಣ ಶಿವಮೊಗ್ಗದ ನಿರ್ದೇಶಕ ಪ್ರಸನ್ನ ಡಿ ಸಾಗರ್ ತಿಳಿಸಿದರು. ರಂಗಾಯಣ ಶಿವಮೊಗ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗುಡಿ ಸಾಂಸ್ಕೃತಿಕ ಕೇಂದ್ರ ಶಿಕಾರಿಪುರ ಹಾಗೂ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ “ನಮ್ಮೊಳಗೊಬ್ಬ ಗಾಂಧಿ” ಎಂಬ…
ಗುರು ಪರಂಪರೆ ಶಾಶ್ವತ :ಶಿರಹಟ್ಟಿ ಶ್ರೀ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮಿಗಳು…
ಶಿರಾಳಕೊಪ್ಪ :21/01/2026 ದೇಶದಲ್ಲಿ ಹಲವಾರು ರಾಜ ಪರಂಪರೆಗಳು ಆಳಿದರು-ಅಳಿದೂ ಹೋದರು. ಆದರೆ ಗುರು ಪರಂಪರೆಗಳು ಉಳಿದು ಬೆಳೆದುಕೊಂಡು ಬಂದಿವೆ. ಯಾವುದೇ ಕಾಲಕ್ಕೂ ಮಠಗಳಿಗೆ ಗುರು ಪರಂಪರೆಗಳಿಗೆ ಅಳಿವು ಎಂಬುದು ಇಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕೆಂದು ಶಿರಹಟ್ಟಿ ಶ್ರೀ ಜಗದ್ಗುರು ಫಕೀರೇಶ್ವರ ಭಾವೈಕ್ಯತಾ ಸಂಸ್ಥಾನಮಠದ ಶ್ರೀ ಮನ್ ಮಹಾರಾಜ ನಿರಂಜನ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ನುಡಿದರು. ಅವರು ಮಂಗಳವಾರ ಶಿಕಾರಿಪುರ ತಾಲೂಕ ಕಡೇನಂದಿಹಳ್ಳಿ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಪರಂಪರೆ ಜಾತ್ರೋತ್ಸವ,…

