ಶಿಕಾರಿಪುರ:3/1/2026.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಶಿಕಾರಿಪುರ ಹಾಗೂ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಮೂಡುಬಿದ್ರೆ ಇವರ ಸಂಯುಕ್ತಾಶ್ರಯದಲ್ಲಿ ಮಾಜಿ ಮುಖ್ಯ ಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ರವರ ಹುಟ್ಟುಹಬ್ಬದ ಅಂಗವಾಗಿ ದಿನಾಂಕ 20 ಹಾಗೂ 21ನೇ ಫೆಬ್ರವರಿ 2026 ರಂದು ಬ್ರಹತ್ ಉದ್ಯೋಗ ಮೇಳ ನಡೆಯಲಿದೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಹಾಗೂ ಶಿಕಾರಿಪುರದ ಶಾಸಕ ಬಿ.ವೈ ವಿಜಯೇಂದ್ರ ಹೇಳಿದರು.
ಪಟ್ಟಣದ ಕುಮದ್ವತಿ ವಸತಿ ಶಾಲೆಯಲ್ಲಿ ಶನಿವಾರ ನಡೆದ ಪತ್ರಿಕಾಘೋಷ್ಟಿ ಯಲ್ಲಿ ಮಾತನಾಡಿದ ಅವರು ಶ್ರೀಯುತ ಯಡಿಯೂರಪ್ಪ ರವರಿಗೆ ರಾಜಕೀಯ ಜನ್ಮ ನೀಡಿದಂತಹ ಶಿಕಾರಿಪುರ ತಾಲ್ಲೂಕಿನಲ್ಲಿ ಸ್ಥಳೀಯ ವಿದ್ಯಾವಂತ ಯುವಕ ಯುವತಿಯರಿಗೆ ಅನುಕೊಲ ಆಗಿಲಿ ಎಂಬ ಸದುದ್ದೇಶದಿಂದ ಬ್ರಹತ್ ಉದ್ಯೋಗ ಮೇಳ ನಡೆಯಲಿದ್ದು ಈ ವಿಚಾರವಾಗಿ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಪೂರ್ವಭಾವಿಯಾಗಿ ಮಾಹಿತಿ ಕಾರ್ಯಗಾರ ಗಳು ನಡೆಯಲಿವೆ.

ಜನವರಿ 17 ಹಾಗೂ ಫೆಬ್ರವರಿ 2 ರಂದು ಶಿಕಾರಿಪುರ ಪಟ್ಟಣ ಹಾಗೂ ಅಂಜನಾಪುರ ಹೋಬಳಿ, ಜನವರಿ 24ಹಾಗೂ ಫೆಬ್ರವರಿ 16ಕ್ಕೆ ಹೊಸೂರು ಹೋಬಳಿ, ಜನವರಿ 31 ಹಾಗೂ ಫೆಬ್ರವರಿ 14ಕ್ಕೆ ಉಡುಗಣಿ ಹೋಬಳಿ,ತಾಳಗುಂದ ಹೋಬಳಿ ಹಾಗೂ ಶಿರಾಳಕೊಪ್ಪ ಪಟ್ಟಣದಲ್ಲಿ ಮಾಹಿತಿ ಶಿಬಿರ ಗಳು ನಡೆಯಲಿವೆ. ಉದ್ಯೋಗ ಮೇಳಕ್ಕೆ ಪೂರ್ವಕವಾಗಿ ನಡೆಯಲಿರುವ ಶಿಬಿರಗಳಲ್ಲಿ ಭಾಗವಹಿಸಿ ಯುವಕ, ಯುವತಿಯರು ಇದರ ಸದುಪಯೋಗ ಪಡೆದು ಕೊಳ್ಳಲು ಕೋರಿದರು.

ಆಳ್ವಾಸ್ ವಿದ್ಯಾ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವಾಸ್ ಮಾತನಾಡಿ ಸಂಸದ ಬಿ ವೈ ರಾಘವೇಂದ್ರ ಹಾಗೂ ಬಿಜೆಪಿ ರಾಜಾಧ್ಯಕ್ಷ ರಾದ ಬಿ ವೈ ವಿಜಯೇಂದ್ರ ರವರ ಅಪೇಕ್ಷೆಯ ಮೇರೆಗೆ ನಾವುಗಳು ಶಿಕಾರಿಪುರ ತಾಲ್ಲೂಕಿನಲ್ಲಿ ಬ್ರಹತ್ ಉದ್ಯೋಗ ಮೇಳ ವನ್ನು ಹಮ್ಮಿಕೊಂಡಿದ್ದು ಕಳೆದ 17ವರ್ಷಗಳಿಂದ ಹಲವಾರು ಉದ್ಯೋಗ ಮೇಳಗಳನ್ನು ನಡೆಸಿದ ಅನುಭವ ಹೊಂದಿದ್ದೇವೆ. ಇಲ್ಲಿಯ ತನಕ ಸುಮಾರು 36ಸಾವಿರ ಜನರಿಗೆ ಉದ್ಯೋಗ ಲಭಿಸಿದೆ.

ವಿಶೇಷವಾಗಿ ಗ್ರಾಮೀಣ ಭಾಗದ ಯುವಕರಿಗೆ ಕಾಳಜಿ ವಹಿಸಿ ಉದ್ಯೋಗ ಗಳು ಕೊಡಿಸುವ ಉದ್ದೇಶ ನಮ್ಮ ಸಂಸ್ಥೆ ಹೊಂದಿದೆ.ಫೆಬ್ರವರಿ 20ಹಾಗೂ 21ರಂದು ನಡೆಯುವ ಉದ್ಯೋಗ ಮೇಳಕ್ಕಿಂತ ಮುಂಚಿತವಾಗಿ ನಡೆಯುವ ಮಾಹಿತಿ ಕಾರ್ಯಗಾರ ಗಳಲ್ಲಿ ಭಾಗವಹಿಸಿದ್ದಲ್ಲಿ ಮೇಳದಲ್ಲಿ ಪಾಲ್ಗೊಳ್ಳುವುದಕ್ಕೆ ಅನುಕೊಲ ವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಹಾಗೂ ಆಳ್ವಾಸ್ ವಿದ್ಯಾಸಂಸ್ಥೆ ಮೂಡಬಿದ್ರೆ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ:ನವೀದ್ ಶಿರಾಳಕೊಪ್ಪ

