Health
ಕಾಲನ ಪಾಲಾದ ಕದೀಮ ಚಿರತೆ: ಮೂರು ದಿನದ ಭೀತಿ ಅಂತ್ಯ, ನಿಟ್ಟುಸಿರು ಬಿಟ್ಟ ಜನತೆ…
ಶಿರಾಳಕೊಪ್ಪ:23/3/2026 ಕಳೆದ ಎರಡು ಮೂರು ದಿನಗಳಿಂದ ಹತ್ತಿರದ ತಡಸನಹಳ್ಳಿ, ಅಡಗಂಟಿ ಮುತ್ತಗಿ ಹಾಗೂ ಬಿದರಿಕೊಪ್ಪ ಗ್ರಾಮಗಳ ಹೊರವಲಯದಲ್ಲಿ, ಗದ್ದೆ ತೋಟ ಗಳ ವ್ಯಾಪ್ತಿಯಲ್ಲಿ ರೈತರ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿಸಿದ ಕ್ರೂರ ಮೃಗ ಸೋಮವಾರ ಹೆಣವಾಗಿ ಪತ್ತೆ ಯಾಗಿದೆ. ಸುಮಾರು ಎರಡು ವರ್ಷ ಪ್ರಾಯದ ಹೆಣ್ಣು ಚಿರತೆ ತಡಸನಹಳ್ಳಿ ಗ್ರಾಮದ ಸರ್ವೇ ಸಂಖ್ಯೆ 74-75 ರಲ್ಲಿರುವ ಅಡಿಕೆ ತೋಟದಲ್ಲಿ ಸೋಮವಾರ ಹೆಣವಾಗಿ ಪತ್ತೆಯಾಗಿದೆ. ಶುಕ್ರವಾರ ಸಂಜೆ ಸುದೀಪ್ ಎಂಬುವವರ ಮೇಲೆ ದಾಳಿ ಮಾಡಿದ ಚಿರತೆ ಅದೇ…
ಶಿರಾಳಕೊಪ್ಪದಲ್ಲಿ ಚಿರತೆ ಅಟ್ಟಹಾಸ: ಮೂವರ ಮೇಲೆ ಭೀಕರ ದಾಳಿ, ಗ್ರಾಮಸ್ಥರಲ್ಲಿ ಮನೆಮಾಡಿದ ಭೀತಿ….
ಶಿರಾಳಕೊಪ್ಪ:21/3/2026 ಪ್ರತ್ಯೇಕವಾಗಿ ಮೂವರ ಮೇಲೆ ಚಿರತೆ ದಾಳಿ: ಅಪಾಯದಿಂದ ಪಾರು ಹತ್ತಿರದ ತಡಸನಹಳ್ಳಿ, ಮುತ್ತಗಿ ಹಾಗೂ ಅಡಗಂಟಿ ಗ್ರಾಮದ ಸುತ್ತಮುತ್ತ ಚಿರತೆ ಮೂರು ಜನ ರೈತರ ಮೇಲೆ ದಾಳಿಗೆ ಪ್ರಯತ್ನಿಸಿದ ಘಟನೆ ಶನಿವಾರ ನಡೆದು ರೈತರು ಹೊಲ ಗದ್ದೆಗಳಿಗೆ ತೆರಳಲು ಭಯ ಪಡುವ ವಾತಾವರಣ ಸೃಷ್ಟಿಯಾಗಿದೆ. ಶುಕ್ರವಾರ ಸಂಜೆ ಅಡಗಂಟಿ ಗ್ರಾಮದ ಸುದೀಪ್ ಎಂಬ ಯುವಕ ಗದ್ದಗೆ ಮೇವು ತರಲು ಹೋದಾಗ ಹಠಾತ್ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ. ಪ್ರಾಣಾಪಾಯದಿಂದ ಪಾರಾದ ಯುವಕನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ…
ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ…
ಶಿರಾಳಕೊಪ್ಪ : ಪಟ್ಟಣದ ಆನವಟ್ಟಿ ರಸ್ತೆ ನಿವಾಸಿಗಳಾದ ಶೋಭಾ ಕುಮಾರ್ ಎಂಬುವವರ ಪುತ್ರ ಗಿರೀಶ (16) ಇವರು ಹಿರೆಕೇರೂರು ತಾಲ್ಲೂಕು ತಾವರಗಿ ಗ್ರಾಮದ ಬಳಿ ಫ್ರೆ 24 ರಂದು ಬೈಕ್ ಮತ್ತು ಟ್ರ್ಯಾಕ್ಟರ್ ಮುಖಾಮುಖಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದು ಇವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ಕಳಿಸಿಕೊಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿರುತ್ತಾರೆ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಂಟುಂಬ ಅವರ ಅಂಗಾಂಗವನ್ನು ದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ, ಕುಟುಂಬದ ಆಕ್ರಂದನ…
ಚುನಾಯಿತ ಸದಸ್ಯರಿಲ್ಲದಿದ್ದರೇನು?ಶಿರಾಳಕೊಪ್ಪದ ಸ್ವಚ್ಛತೆಗೆ ಹೆಣ್ಣು ಮಕ್ಕಳೇ “ಸಾರಥಿ”…ಬಜೆಟ್ ಪೂರ್ವ ಭಾವಿ ಸಭೆಯಲ್ಲಿ ಅಧಿಕಾರಿಗಳಿಗೆ ಸ್ವಚ್ಛತೆಯ ಪಾಠ ಹೇಳಿದಗೃಹಿಣಿಯರು…
ಶಿರಾಳಕೊಪ್ಪ:06/03/2026 ಪುರಸಭೆಯಲ್ಲಿ ಪ್ರಸ್ತುತ ಚುನಾಯಿತ ಸದಸ್ಯರಿಲ್ಲದೆ, ಅಧಿಕಾರಿಗಳ ಆಡಳಿತ ನಡೆಯುತ್ತಿರುವ ಈ ಸಂದರ್ಭದಲ್ಲಿ ಬಜೆಟ್ 2026-27 ನೇ ಸಾಲಿನ ಪೂರ್ವಭಾವಿ ಸಭೆಯು ಶುಕ್ರವಾರ ಪುರಸಭೆಯ ಬಿ ಎಸ್ ಯಡಿಯೂರಪ್ಪ ಸಭಾಂಗಣದಲ್ಲಿ ಮುಖ್ಯಾಧಿಕಾರಿ ಪರಶುರಾಮಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಬಾರಿಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾರಿ ಸಂಖ್ಯೆಯಲ್ಲಿ ಭಾಗವಹಿಸಿದ ಊರಿನ ಮಹಿಳೆಯರ ಉಪಸ್ಥಿತಿ ಗಮನ ಸೆಳೆಯಿತು. ಮುಂಬರುವ ವರ್ಷದ ಬಜೆಟ್ ನಲ್ಲಿ ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿ ಮತ್ತು ನೈರ್ಮಲ್ಯ ಸುಧಾರಣೆಗೆ ವಿಶೇಷ ಒತ್ತು ಕೊಡಲು ಅಧಿಕಾರಿಗಳಿಗೆ ಸಲಹೆ…
ಶಿರಾಳಕೊಪ್ಪದಲ್ಲಿ ಹೈಟೆಕ್ ಮೆಡಿಲೆನ್ಸ್ ಡಯಾಗ್ನೋಸ್ಟಿಕ್ ಸೆಂಟರ್ ಉದ್ಘಾಟನೆ: ಗ್ರಾಮೀಣ ಜನರಿಗೆ ಇನ್ಮುಂದೆ ಸ್ಥಳೀಯವಾಗಿಯೇ ಸಿಗಲಿದೆ ಗುಣಮಟ್ಟದ ವೈದ್ಯಕೀಯ ಸೇವೆ…
.ಶಿರಾಳಕೊಪ್ಪ:22/2/2026 ಗ್ರಾಮೀಣ ಪ್ರದೇಶದ ಜನರಿಗೆ ರೋಗನಿರ್ಣಯ ಪರೀಕ್ಷೆಗಿಂತ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರುವ ಪ್ರಯಾಣ ವೆಚ್ಚವೇ ಹೊರೆಯಾಗುತ್ತಿತ್ತು. ಇದನ್ನು ಮನಗಂಡು ಶಿರಾಳಕೊಪ್ಪದ ಗಾಂಧಿನಗರದಲ್ಲಿ ಆರಂಭವಾಗಿರುವ ‘ಮೆಡಿಲೆನ್ಸ್ ಡಯಾಗ್ನೋಸ್ಟಿಕ್ ಸೆಂಟರ್‘ ಗ್ರಾಮೀಣ ಜನರಿಗೆ ವರದಾನವಾಗಲಿದೆ,” ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು. ಪಟ್ಟಣದ ಗಾಂಧಿನಗರದಲ್ಲಿ ಅತ್ಯಾಧುನಿಕ ಉಪಕರಣಗಳನ್ನೊಳಗೊಂಡ ‘ಮೆಡಿಲೆನ್ಸ್ ಡಯಾಗ್ನೋಸ್ಟಿಕ್ ಸೆಂಟರ್’ ಉದ್ಘಾಟಿಸಿ ಮಾತನಾಡಿದ ಅವರು ಶಿರಾಳಕೊಪ್ಪ ಸೇರಿದಂತೆ ಆನವಟ್ಟಿ, ಸೊರಬ ಹಾಗೂ ಹಿರೇಕೆರೂರು ಚಿಕ್ಕೇರೂರು ಭಾಗದ ನಾಗರಿಕರು ಇನ್ನು ಮುಂದೆ ಸಣ್ಣಪುಟ್ಟ ಪರೀಕ್ಷೆಗಳಿಗೂ ದೂರದ ಜಿಲ್ಲಾ ಕೇಂದ್ರಗಳಿಗೆ…
ಬೈಕ್-ಟ್ರ್ಯಾಕ್ಟರ್ ನಡುವೆ ಭೀಕರ ಡಿಕ್ಕಿ: ಸ್ಥಳದಲ್ಲೇ ರೈತ ಸಾವು
ಶಿರಾಳಕೊಪ್ಪ:15/2/2026. ಪಟ್ಟಣ ಸಮೀಪದ ಜಾವಗಟ್ಟಿಯ ಬಳಿ ಬೈಕ್ ಮತ್ತು ಟ್ಯಾಕ್ಟರ್ ಡಿಕ್ಕಿಯಾಗಿ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಮೃತ ಬೈಕ್ ಸವಾರ ಬಸವನಂದಿಹಳ್ಳಿ ಗ್ರಾಮದ ಕೃಷಿಕ ಮಲ್ಲಿಕಾರ್ಜುನಪ್ಪ ಕಂಡೇರ (56) ಎಂದು ಗುರುತಿಸಲಾಗಿದೆ. ಪತ್ನಿ ಪಾರ್ವತಮ್ಮ ಅವರ ಜತೆ ಸೊರಬ ತಾಲೂಕಿನ ಗಂಗವಳ್ಳಿ ಗ್ರಾಮಕ್ಕೆ ವಿವಾಹಿತ ಮಗಳನ್ನು ನೋಡುವ ಸಲುವಾಗಿ ಶಿರಾಳಕೊಪ್ಪದ ಕಡೆಯಿಂದ ಹೊರಟಿದ್ದರು, ಎದುರಿಗೆ ಬಂದ ಟ್ಯಾಕ್ಟರ್ ಮುಖ್ಯ ರಸ್ತೆಯಲ್ಲಿ ಜಾವಗಟ್ಟಿಯ ಬಳಿ ಮಳೂರಿಗೆ ತೆರಳುವ ರಸ್ತೆಗೆ ಬಲಕ್ಕೆ…
ಶಿವಾಚಾರ್ಯ ಸ್ವಾಮೀಜಿಗಳ ಸದ್ಬೋಧನಾ ಪಾದಯಾತ್ರೆ: ಧಾರ್ಮಿಕ ಜಾಗೃತಿಗಾಗಿ ಸ್ವಾಮೀಜಿಗಳ ನಡಿಗೆ…
ಶಿರಾಳಕೊಪ್ಪ: 19/01/2026 ಧರ್ಮದ ಮೂಲ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮತ್ತು ಸಾಮಾಜಿಕ ಸಾಮರಸ್ಯವನ್ನು ಎತ್ತಿಹಿಡಿಯುವ ಉದ್ದೇಶದಿಂದ ‘ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ’ ಹಾಗೂ ‘ಕಡೆನಂದಿಹಳ್ಳಿಯ ಶ್ರೀ ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮ‘ದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಕಡೆನಂದಿಹಳ್ಳಿ ಗ್ರಾಮದಲ್ಲಿ ಅದ್ಧೂರಿ ‘ ಶಿವಾಚಾರ್ಯರ ಸದ್ಬೋಧನಾ ಪಾದಯಾತ್ರೆ’ ನಡೆಯಿತು. ಕಡೆನಂದಿಹಳ್ಳಿಯ ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಆರಂಭವಾದ ಈ ಪಾದಯಾತ್ರೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಪಾದಯಾತ್ರೆಯ ಉದ್ದಕ್ಕೂ ವಿವಿಧ ಜಿಲ್ಲೆಗಳ ಮಠಾಧೀಶರು ಮತ್ತು ನೂರಾರು ಭಕ್ತಾದಿಗಳು…
ಡಿ19ಕ್ಕೆ ನಡೆಯಲಿದೆ ಬಜ್ಮೆ ಉಮ್ಮೀದ್ ಅದೀಬಿ ಶಿರಾಳಕೊಪ್ಪ ವತಿಯಿಂದ ಮೂರನೇ ಬಾರಿ ರಾಷ್ಟ್ರೀಯ ಕವಿ ಸಮ್ಮೇಳನ….
ಶಿರಾಳಕೊಪ್ಪ:13/12/2025 ಪಟ್ಟಣದ ಸಾಂಸ್ಕೃತಿಕ ವೇದಿಕೆ ಬಜ್ಮೆ ಉಮ್ಮೀದ್ ಅದೀಬಿ ವತಿಯಿಂದ ಪ್ರತಿ ವರ್ಷ ನಡೆಯುವ ಕವಿ ಸಮ್ಮೇಳನ ಇದೇ ಡಿಸೆಂಬರ್ 19 ರ ಶುಕ್ರವಾರ ರಾತ್ರಿ ನಡೆಯಲಿದೆ ಎಂದು ವೇದಿಕೆ ಅಧ್ಯಕ್ಷ ಮುಹಮ್ಮದ್ ಅಯೂಬ್ ಕೆ ಜಿ ಎನ್ ತಿಳಿಸಿದರು. ಊರಿನ ಮಧ್ಯ ಭಾಗದಲ್ಲಿರುವ ಹಜರತ್ ಟಿಪ್ಪು ಸುಲ್ತಾನ್ ಮ್ಯಾರೇಜ್ ಹಾಲ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಕವಿ ಸಮ್ಮೇಳನದಲ್ಲಿ ದೇಶ ಹಾಗೂ ರಾಜ್ಯದ ವಿವಿಧ ಕಡೆಗಳಿಂದ ಪ್ರಖ್ಯಾತ ಕವಿ ಗಳು ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸ್ಥಳೀಯ ಮಕ್ಕಳಿಗೆ…
ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳಿಂದ ಮಧುಮೇಹ ಜಾಗೃತಿ…
ಶಿರಾಳಕೊಪ್ಪ:14/11/2025 ಲಯನ್ಸ್ ಕ್ಲಬ್ ಶಿರಾಳಕೊಪ್ಪ, ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ, ಸ್ವಾಮಿ ವಿವೇಕಾನಂದ ಶಾಲೆ, ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಮತ್ತುವಿಶ್ವ ಮಧುಮೇಹ ದಿನಾಚರಣೆಯನ್ನು ವಿಶೇಷ ವಾಗಿ ಆಚರಿಸಲಾಯಿತು. ಮಕ್ಕಳೇ ಜಾಗೃತಿ ರಾಯಭಾರಿಗಳಾಗಿ ವಾಕಥಾನ್ ಮೂಲಕ ಮಧುಮೇಹ ಅರಿವು ಮೂಡಿಸುವ ಘೋಷಣೆಯೊಂದಿಗೆ ಬಿತ್ತಿ ಪತ್ರ ವಿತರಿಸಿ ವಿಶಿಷ್ಟ ವಾಗಿ ಎರಡೂ ದಿನಾಚರಣೆಗಳನ್ನು ವಿನೂತನ ವಾಗಿ ಆಚರಿಸಿದರು. ವಾಕಥಾನ್ ನಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಲಯನ್ಸ್ ಕ್ಲಬ್ ಸದಸ್ಯರು, ಶಂಕರ ಕಣ್ಣಿನ ಆಸ್ಪತ್ರೆ…
ಮಕ್ಕಳ ದಿನಾಚರಣೆದಂದು ಮಕ್ಕಳಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ…
ಶಿರಾಳಕೊಪ್ಪ:14/11/2025 ಪಟ್ಟಣದ ಅಸ್-ಸುಫಾ ಪಬ್ಲಿಕ್ ಶಾಲೆಯ ಮಕ್ಕಳು ಇಂದು ಮಕ್ಕಳ ದಿನಾಚರಣೆ ಅಂಗವಾಗಿ ಪ್ರಾಥಮಿಕ ಸಮುದಾಯ ಕೇಂದ್ರದ ರೋಗಿಗಳಿಗೆ ಹಣ್ಣು ಹಂಪಲು ನೀಡಿ “ಮಕ್ಕಳ ದಿನ” ಆಚರಣೆ ಮಾಡಿದರು. ಶಾಲೆಯ ಮುಖ್ಯ ಶಿಕ್ಷಕ ಇಮ್ರಾನ್ ಮಾತನಾಡಿ ಈ ದಿನ ನಮ್ಮ ಶಾಲೆಯ ಮಕ್ಕಳು ತಮ್ಮ ಇಚ್ಛೆ ಮತ್ತು ಸ್ವಂತ ಖರ್ಚಿನಿಂದ ರೋಗಿ ಗಳಿಗೆ ಹಣ್ಣು ಹಂಪಲು ನೀಡಿದ್ದು ಖುಷಿ ತಂದಿದೆ. ಸಮಾಜದಲ್ಲಿನ ಆಗು ಹೋಗು ಮತ್ತು ಬಡವರ, ನಿರ್ಗತಿಕರ ಮತ್ತು ರೋಗಿಗಳ ಬಗ್ಗೆ ಸಣ್ಣ ವಯಸ್ಸಿನಿಂದಲೇ ಮಕ್ಕಳಲ್ಲಿ…

