ಕಾಲನ ಪಾಲಾದ ಕದೀಮ ಚಿರತೆ: ಮೂರು ದಿನದ ಭೀತಿ ಅಂತ್ಯ, ನಿಟ್ಟುಸಿರು ಬಿಟ್ಟ ಜನತೆ…
ಶಿರಾಳಕೊಪ್ಪ:23/3/2026 ಕಳೆದ ಎರಡು ಮೂರು ದಿನಗಳಿಂದ ಹತ್ತಿರದ ತಡಸನಹಳ್ಳಿ, ಅಡಗಂಟಿ ಮುತ್ತಗಿ ಹಾಗೂ ಬಿದರಿಕೊಪ್ಪ ಗ್ರಾಮಗಳ ಹೊರವಲಯದಲ್ಲಿ, ಗದ್ದೆ ತೋಟ ಗಳ ವ್ಯಾಪ್ತಿಯಲ್ಲಿ ರೈತರ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿಸಿದ ಕ್ರೂರ ಮೃಗ ಸೋಮವಾರ ಹೆಣವಾಗಿ ಪತ್ತೆ ಯಾಗಿದೆ. ಸುಮಾರು ಎರಡು ವರ್ಷ ಪ್ರಾಯದ ಹೆಣ್ಣು ಚಿರತೆ ತಡಸನಹಳ್ಳಿ ಗ್ರಾಮದ ಸರ್ವೇ ಸಂಖ್ಯೆ 74-75 ರಲ್ಲಿರುವ ಅಡಿಕೆ ತೋಟದಲ್ಲಿ ಸೋಮವಾರ ಹೆಣವಾಗಿ ಪತ್ತೆಯಾಗಿದೆ. ಶುಕ್ರವಾರ ಸಂಜೆ ಸುದೀಪ್ ಎಂಬುವವರ ಮೇಲೆ ದಾಳಿ ಮಾಡಿದ ಚಿರತೆ ಅದೇ…

