ಮಕ್ಕಳ ಭವಿಷ್ಯ ರೂಪಿಸಲು ಪೋಷಕರ ಪಾತ್ರ ಮಹತ್ವದ್ದು – ನಟ ತ್ರಿವಿಕ್ರಮ್…
ಶಿರಾಳಕೊಪ್ಪ:30/12/2025 ಮಕ್ಕಳು ಸರಿದಾರಿಯಲ್ಲಿ ಬೆಳೆಯಬೇಕಾದರೆ ಮೊದಲು ತಂದೆ–ತಾಯಿಗಳು ಸರಿಯಾದ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ಮಕ್ಕಳು ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರಗಳನ್ನೂ ಪಡೆದುಕೊಳ್ಳಲು ಸಾಧ್ಯ ಎಂದು ಬಿಗ್‌ಬಾಸ್ ಖ್ಯಾತಿಯ ನಟ ತ್ರಿವಿಕ್ರಮ್ ಹೇಳಿದರು. ಪಟ್ಟಣದ ವೈಭವ ಫ್ರೀ ಯುನಿವರ್ಸಿಟಿ ಕಾಲೇಜು ಹಾಗೂ ರೆಸಿಡೆನ್ಷಿಯಲ್ ಸ್ಕೂಲ್ ವತಿಯಿಂದ ಆಯೋಜಿಸಲಾಗಿದ್ದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ತಂತ್ರಜ್ಞಾನಯುಗದಲ್ಲಿ ಸಮಾಜದ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಅಗತ್ಯವಾಗಿದೆ ಎಂದರು.ಗ್ರಾಮೀಣ ಪ್ರದೇಶವಾದ ಶಿರಾಳಕೊಪ್ಪದಲ್ಲಿಯೇ ಇಂತಹ ಅತ್ಯುತ್ತಮ ಶಿಕ್ಷಣ ಸಂಸ್ಥೆ…

