ಶಿಕಾರಿಪುರ: 6/1/2026
ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿನ ಎಲ್ಲಾ 23 ವಾರ್ಡ್ ಗಳಲ್ಲಿ ನೆರೆ ಹೊರೆ ಗುಂಪು, ಪ್ರದೇಶಸಭಾ, ವಾರ್ಡ್ ಸಮಿತಿ ರಚನೆ ಮಾಡಲು ಕ್ರಮವಹಿಸಲಾಗಿದೆ ಎಂದು ಪುರಸಭೆಯ ವ್ಯವಸ್ಥಾಪಕ ರಾಜಕುಮಾರ್ ಹೇಳಿದರು.

ಪುರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 22 ರಲ್ಲಿ ವಾರ್ಡ್ ನಿವಾಸಿಗಳ ಸಭೆ ನಡೆಸಿ ಮಾತನಾಡಿದ ಅವರು ಪಟ್ಟಣದ ಪುರಸಭೆಯ ವಾರ್ಡ್ ಗಳಲ್ಲಿನ ಚುನಾಯಿತ ಜನಪ್ರತಿನಿಧಿಗಳ ಅವಧಿ ಮುಕ್ತಾಯಗೊಂಡಿರುವ ಕಾರಣ ಸಧ್ಯ ವಾರ್ಡ್ ಗಳಲ್ಲಿ ಯಾರೋ ಚುನಾಯಿತ ಪ್ರತಿನಿಧಿಗಳು ಇಲ್ಲದೆ ಇರುವುದರಿಂದ ಅಧಿಕಾರಿಗಳ ನೇತೃತ್ವದಲ್ಲಿ ಸದರಿ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ.
ಘನ ಸರ್ಕಾರದ ಸೂಚನೆಯಂತೆ ಶಿಕಾರಿಪುರ ಪುರಸಭಾ ವ್ಯಾಪ್ತಿಯ ಪ್ರತಿ ವಾರ್ಡ್/ ಮತದಾರರ ಬೂತ್ ಗಳಿಗೆ ಪುರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಆದೇಶ ಮಾಡಲಾಗಿದ್ದು ಸದರಿ ಅಧಿಕಾರಿಗಳು ಪ್ರತಿ ವಾರ್ಡ್ ಗಳಿಗೆ ಭೇಟಿ ನೀಡಿದಾಗ ವಾರ್ಡ್ ವ್ಯಾಪ್ತಿಯಲ್ಲಿನ ನಿವಾಸಿಗಳು ಒಂದೆಡೆ ಸೇರಿ ನೆರೆಹೊರೆ ಸಮಿತಿಗಳನ್ನು ರಚಿಸಲು ಸಹಕರಿಸುವಂತೆ ಮನವಿ ಮಾಡಿದರು.
ಹೀಗೆ ರಚಿಸಲಾದ ವಿವಿಧ ಸಮಿತಿಗಳ ಪ್ರತಿನಿಧಿಗಳ ಅಧಿಕಾರವಧಿಯು 30 ತಿಂಗಳುಗಳಾಗಿದ್ದು ತದನಂತರ ಪ್ರತಿನಿಧಿಗಳನ್ನು ಬದಲಾಯಿಸುವ ಅಧಿಕಾರ ಸಮಿತಿಯ ಸದಸ್ಯರುಗಳಿಗೆ ಇರುತ್ತದೆ. ಸದರಿ ಪ್ರಕ್ರಿಯೆಯಲ್ಲಿ ವಾರ್ಡ್ ಗಳ ನಿವಾಸಿಗಳು ಸಹಕರಿಸುವ ಮೂಲಕ ಸಾರ್ವಜನಿಕರು ವಾಸಿಸುವ ವ್ಯಾಪ್ತಿಯಲ್ಲಿನ ವಾರ್ಡ್ ಗೆ ಸಂಬಂಧಿಸಿದ ಮೂಲಭೂತ ಸೌಲಭ್ಯಗಳ ಬಗ್ಗೆ ಹಾಗೂ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ಸರ್ಕಾರದ ಸೌಲಭ್ಯಗಳು ಸಿಗುವಂತೆ ಮಾಡಲು ಅನುಕೂಲವಾಗಲಿದ್ದು ಸಾರ್ವಜನಿಕರು ಪಾಲ್ಗೊಳ್ಳುವಂತೆ ಕೋರಿದರು.
ಈ ಸಂದರ್ಭದಲ್ಲಿ ಪುರಸಭೆಯ ಆರೋಗ್ಯ ನಿರೀಕ್ಷಕರಾದ ಸೈಯದ್ ನವಾಜ್ ಸೇರಿದಂತೆ ಸಿಬ್ಬಂದಿಗಳಾದ ನಾಗಭೂಷಣ್, ಶ್ರೀನಿವಾಸ್, ಚೌಡಯ್ಯ, ಪೂಜಾ, ಪ್ರಿಯಾಂಕ, ಅಶ್ವಿನಿ ,ಕವಿತಾ ಸೇರಿದಂತೆ ವಾರ್ಡ್ ನಂಬರ್ 22 ರಲ್ಲಿನ ಸಾರ್ವಜನಿಕರು ಇದ್ದರು.
ವರದಿ:ನವೀದ್ ಶಿರಾಳಕೊಪ್ಪ 9538633929

