ಶಿರಾಳಕೊಪ್ಪ:12/1/2026
ರಾಜ್ಯದ ಮುಖ್ಯ ಮಂತ್ರಿ ಶ್ರೀ ಸಿದ್ದರಾಮಯ್ಯ ನವರು ದೀರ್ಘ ಕಾಲ ಪ್ರದೇಶದ ಮುಖ್ಯ ಮಂತ್ರಿಯಾಗಿ ಕಾರ್ಯ ನಿರ್ವಹಿಸಿ ದಾಖಲೆನಿರ್ಮಿಸಿದ ಅಂಗವಾಗಿ ಪಟ್ಟಣದ. ಬಸ್ಟ್ಯಾಂಡ್ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕ್ರತರು, ಸಿದ್ದರಾಮಯ್ಯ ಅಭಿಮಾನಿಗಳು ಮುಖ್ಯ ಮಂತ್ರಿ ಗಳ ಭಾವ ಚಿತ್ರಕ್ಕೆ ಪುಷ್ಪಾ ರ್ಚನೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು.
ಶಿರಾಳಕೊಪ್ಪ ಟೌನ್ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಟೌನ್ ಕಾಂಗ್ರೆಸ್ ಅಧ್ಯಕ್ಷ ನಯಾಜ್ ಅಹ್ಮದ್ ಖುರೇಶಿ ರವರ ನೇತೃತ್ವದಲ್ಲಿ ನಡೆದ ಸಂಭ್ರಮಾಚರಣೆ ಯಲ್ಲಿ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಸಿದ್ದರಾಮಯ್ಯನವರ ಅಭಿಮಾನಿಗಳು ಪಾಲ್ಗೊಂಡು ಹಬ್ಬದ ರೀತಿಯಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿ ಖುಷಿ ಪಟ್ಟರು.

ಈ ಸಂಧರ್ಭದಲ್ಲಿ ಕೆ ಪಿ ಸಿ ಸಿ ಸದಸ್ಯಹಾಗೂ ವಿಧಾನ ಸಭೆಯ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಧಿ ಗೋಣಿ ಮಾಲತೇಶ್ ಮಾತನಾಡಿ ಸಿದ್ದರಾಮಯ್ಯ ನವರು ಏಳು ವರ್ಷ ಗಳ ಕಾಲ ನಾಡಿನ ಮುಖ್ಯ ಮಂತ್ರಿಯಾಗಿ ಅಪಾರ ಹೆಗ್ಗಳಿಕೆಗೆ ಪಾತ್ರ ರಾಗಿದ್ದಾರೆ. ಅವರು ನೀಡಿದಂತಹ ಜನ ಕಲ್ಯಾಣ ಯೋಜನೆಗಳಿಂದಾಗಿ ರಾಜ್ಯದ ಬಡವರು, ಮಹಿಳೆಯರು ಮತ್ತು ವಿದ್ಯಾರ್ಥಿ ಗಳಿಗೆ ಆಸರೆ ಯಾಗಿದೆ ಎಂದರು.
ಟೌನ್ ಕಾಂಗ್ರೆಸ್ ಅಧ್ಯಕ್ಷ ನಯಾಜ್ ಅಹ್ಮದ್ ಖುರೇಶಿ ಮಾತನಾಡಿ ಸಣ್ಣ ಹಳ್ಳಿಯಿಂದ ಚಿಕ್ಕ ರಾಜಕೀಯ ಹುದ್ದೆಯೊಂದಿಗೆ ತಮ್ಮ ರಾಜಕೀಯ ಪ್ರಯಾಣ ವನ್ನು ಪ್ರಾರಂಭಿಸಿದ ಶ್ರೀಯುತ ಸಿದ್ದರಾಮಯ್ಯ ನವರು ರಾಜ್ಯದಲ್ಲಿ ಅತೀ ಹೆಚ್ಚು ಬಾರಿ ರಾಜ್ಯದ ಬಜೆಟ್ ಮಂಡನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. 7ವರ್ಷ 239ಕ್ಕಿಂತ ಹೆಚ್ಚು ದಿನ ರಾಜ್ಯದ ಮುಖ್ಯ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ನಮ್ಮ ನಾಯಕ ಸಿದ್ದರಾಮಯ್ಯ ನವರು ರಾಜ್ಯದ ಜನರಿಗೆ ಅನುಕೊಲ ವಾಗುವ ವಿವಿಧ ರೀತಿಯ ಜನ ಪರ ಯೋಜನೆಗಳನ್ನು ನೀಡಿ ಜನ ಸಾಮಾನ್ಯರು ಸ್ವಾಲಂಬಿಯಾಗಿ ಜೀವನ ನಡೆಸುವಂತೆ ಮಾಡಿದ್ದಾರೆ ಭಗವಂತ ಅವರಿಗೆ ಹೆಚ್ಚು ಆಯುಷ್ಯ, ಆರೋಗ್ಯ ನೀಡಿ ಇನ್ನಷ್ಟು ಜನಾನುರಾಗಿ ಕಾರ್ಯಗಳು ಮಾಡುವ ಶಕ್ತಿ ನೀಡಬೇಕೆಂದು ಹರಸಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ಸದ್ದು ಬೆಳ್ಳಿಗಾವಿ, ಪಕ್ಷದ ಮುಖಂಡರಾದ ಬಂಡಾರಿ ಮಾಲತೇಶ್, ಶಿವಾನಂದ ಸ್ವಾಮಿ ಮಾತನಾಡಿದರು.
ಬಸ್ಟ್ಯಾಂಡ್ ವೃತ್ತದಲ್ಲಿ ಸಂಭ್ರಮಾಚರಣೆ ನಡೆಯುತ್ತಿರುವ ವೇಳೆಯಲ್ಲಿ ಪಟ್ಟಣ ಹಾಗೂ ಅಕ್ಕ ಪಕ್ಕದ ಹಳ್ಳಿಗಳಿಂದ ಬೇರೆ ಬೇರೆ ಕಡೆಗಳಿಗೆ ತೆರಳಲು ಬಸ್ಟ್ಯಾಂಡ್ ಗೆ ಆಗಮಿಸಿದ ಮಹಿಳೆಯರು ಸ್ವಯಂ ಪ್ರೇರಿತರಾಗಿ ಕಾರ್ಯಕ್ರಮ ನೆಡೆಯುತ್ತಿರುವ ಸ್ಥಳಕ್ಕೆ ಬಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರ ಭಾವಚಿತ್ರಕ್ಕೆ ಕುಸುಮಾರ್ಚನೆ ಸಲ್ಲಿಸಿ ಕೈ ಮುಗಿದು ನಮಸ್ಕರಿಸಿದ ದೃಶ್ಯ ಗಮನ ಸೆಳೆಯಿತು.
ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರಾಘವೇಂದ್ರ ಗಂಗೊಳ್ಳಿ, ಗಣೇಶ್ ಭಂಡಾರಿ, ತೇಜಪ್ಪ ತಡಗಣಿ, ಶ್ರೀಮತಿ ನಿರ್ಮಲ ಪ್ರಕಾಶ್. ಯುವ ಕಾಂಗ್ರೆಸ್ ನ ಸಾಜೀದ್ ಅಲಿ, ವಸೀಮ್, ತಾಹ, ರವಿ ಹಿರೇಜಂಬೂರು ಸೇರಿದಂತೆ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.
ವರದಿ:ನವೀದ್ ಶಿರಾಳಕೊಪ್ಪ.

