ಶಿಕಾರಿಪುರ:3/1/2026
ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಕರೆಯಲ್ಪಡುವ ಪತ್ರಿಕೋದ್ಯಮವು ಸರ್ಕಾರ ಮತ್ತು ವ್ಯವಸ್ಥೆಯನ್ನು ಎಚ್ಚರಿಸಿ ಸರಿದಾರಿಗೆ ತರುವ ಶಕ್ತಿ ಹೊಂದಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ತಾಲ್ಲೂಕಿನ ಶಾಸಕ ಬಿ ವೈ ವಿಜಯೇಂದ್ರ ನುಡಿದರು.
ಶನಿವಾರ ಶಿಕಾರಿಪುರ ತಾಲ್ಲೂಕು ಕಾರ್ಯ ನಿರತ ಪತ್ರ ಕರ್ತರ ಸಂಘದ ನೂತನ ಪಧಾಧಿ ಕಾರಿಗಳ ಪದ ಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ವರ್ತಮಾನ ಕಾಲದಲ್ಲಿ ಪತ್ರಕರ್ತರ ಮೇಲಿನ ಜವಾಬ್ದಾರಿ ಹೆಚ್ಚಾಗಿದೆ. ದೃಶ್ಯ ಮಾಧ್ಯಮಗಳ ಆರ್ಭಟದ ನಡುವೆ ಇವತ್ತಿಗೂ ಮುದ್ರಣ ಮಾಧ್ಯಮವು ತನ್ನ ಎಂದಿನ ಗೌರವ ವನ್ನು ಉಳಿಸಿಕೊಂಡು ಬಂದಿದೆ. ಈ ಬೆಲೆಯನ್ನು ಹೀಗೇ ಉಳಿಸಿಕೊಂಡು ಮುನ್ನಡೆಯಬೇಕಾಗಿದೆ ಎಂದು ಕರೆ ನೀಡಿದರು.

ಸಂಸದ ಬಿ ವೈ ರಾಘವೇಂದ್ರ ಮಾತನಾಡಿ, ಯಡಿಯೂರಪ್ಪ ನವರಿಗೆ ಯಾವಾಗಲೂ ಪತ್ರಕರ್ತರೆಂದರೆ ಮಮತೆ, ಪ್ರೀತಿ ಪ್ರತಿದಿನ ಪತ್ರಿಕೆ ಗಳನ್ನು ಓದಲೆಂದೇ ಸಮಯ ಮೀಸಲಿಡುತ್ತಾರೆ. ಒಂದೇ ವಿಷಯ ಹಲವಾರು ಮತ್ತು ವಿಭಿನ್ನ ಮನಸ್ಥಿತಿಯ ಪತ್ರಕರ್ತರ ಕೈಗೆ ಸಿಕ್ಕರೆ ಅದು ವಿಶೇಷವಾಗಿ ಮೂಡಿ ಬರುತ್ತದೆ.ಪತ್ರಕರ್ತರಿಗೆ ಅಧ್ಯಯ ನದ ಅಗತ್ಯವಿದೆ. ಪೂರ್ವಾಗ್ರಹವಿಲ್ಲದ ಬರಹಗಳು ಸಮಾಜ ವನ್ನು ತಟ್ಟುತ್ತದೆ ಎಂದರು.
ಸಂಘದ ರಾಜ್ಯ ಚುನಾವಣಾಧಿಕಾರಿ ರವಿಕುಮಾರ್ ಟೆಲೆಕ್ಸ್ ಮಾತನಾಡಿ

ಸಂಸದರು ಹಾಗೂ ಶಾಸಕರು ರಾಜ್ಯ ಸರ್ಕಾರದ ಗಮನ ಸೆಳೆದು ಪತ್ರಕರ್ತರಿಗೆ ಆರೋಗ್ಯ ವಿಮೆ ಮಾಡಿಸುವ ಜೊತೆಗೆ ಕ್ಯಾಶ್ ಲೆಸ್ ಆರೋಗ್ಯ ಯೋಜನೆ ತರಲು ಪ್ರಯತ್ನಿಸಬೇಕು. ಕರೋನಾ ಸಂದರ್ಭದಲ್ಲಿ 56 ಜನ ಪತ್ರಕರ್ತರು ಮೃತ ಪಟ್ಟ ಸಂದರ್ಭದಲ್ಲಿ ಅಂದಿನ ಮುಖ್ಯ ಮಂತ್ರಿ ಯಾಗಿದ್ದ ಮಾನ್ಯ ಬಿ ಎಸ್ ಯಡಿಯೂರಪ್ಪನವರು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೊ ಗಳು ನೀಡಿ ಪತ್ರಕರ್ತರ ಪರವಾಗಿದ್ದ ಅವರ ಕಾಳಜಿ ತೋರಿದ್ದು ನಿಜಕ್ಕೂ ಹೆಮ್ಮೆ ಅನಿಸುತ್ತದೆ ಎಂದರು.

ತಾಲ್ಲೂಕು ಸಂಘದ ನೂತನ ಅಧ್ಯಕ್ಷ ನವೀನ್ ಕುಮಾರ್ ಮಾತನಾಡಿ. ಶಿರಾಳಕೊಪ್ಪ ಭಾಗದ ಪತ್ರಕರ್ತರಿಗೂ ಕೊಡ ಅಧ್ಯಕ್ಷ ಸ್ಥಾನ ನೀಡಬೇಕೆಂಬುವ ಈ ಭಾಗದ ಪತ್ರಕರ್ತರ ಬೇಡಿಕೆ ಈಗ ಈಡೇರಿದೆ. ಸಂಘದ ಎಲ್ಲಾ ಸದಸ್ಯರ ಒಮ್ಮತ ದ ತೀರ್ಮಾನ ಕ್ಕೆ ಚಿರಋಣಿ.
ಪತ್ರಕರ್ತರ ಸಂಘ ಲಾಭದಾಯಕವಲ್ಲದ ಸಂಸ್ಥೆ. ಸಮಾಜದ ಕನ್ನಡಿಯಾಗಿ ಕೆಲಸ ಮಾಡುವ ಪತ್ರಕರ್ತರವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಅನುಕೊಲ ವಾಗುವ ನಿಟ್ಟಿನಲ್ಲಿ ಸಂಸದರು ಮತ್ತು ಶಾಸಕರು ಆಲೋಚನೆ ನಡೆಸಬೇಕೆಂದು ಕೇಳಿಕೊಂಡರು.
ಜಿಲ್ಲಾ ಉಪಾಧ್ಯಕ್ಷ ಕೆ. ಎಸ್ ಹುಚ್ರಾಯಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು. ಪತ್ರಕರ್ತ ರಘು ಎಚ್ ಎಸ್ ನಿರೋಪಿಸಿದರು, ನವೀದ್ ಶಿರಾಳಕೊಪ್ಪ ಸ್ವಾಗತ ಕೋರಿದರು.
ನೂತನ ಕಾರ್ಯದರ್ಶಿ ಮಂಜುನಾಥ್ ಮಠದ್ , ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೈದ್ಯ, ದೀಪಕ್ ಸಾಗರ್. ಪ್ರಧಾನಕಾರ್ಯದರ್ಶಿ ಹಾಲಸ್ವಾಮಿ, ಕಾರ್ಯದರ್ಶಿ ಗಾ,ರಾ ಶ್ರೀನಿವಾಸ್, ಜಿಲ್ಲಾ ನಿರ್ದೇಶಕ ರಾಜ ರಾವ್ ಜಾಧವ್, ನಿಕಟಪೂರ್ವ ಅಧ್ಯಕ್ಷ ಬಿ ಎಲ್ ರಾಜು, ಸಂಘದ ಸಂಸ್ಥಾಪಕ ಅಧ್ಯಕ್ಷ ಬಿ ಸಿ ವೇಣುಗೋಪಾಲ್, ಪ್ರೆಸ್ ಟ್ರಸ್ಟ್ ಅಧ್ಯಕ್ಷ ಈ.ಎಚ್ ಬಸವರಾಜ್, ಪದಾಧಿಕಾರಿಗಳಾದ ಹಿರಿಯ ಪತ್ರಕರ್ತರಾದ ಅರುಣ್ ಕುಮಾರ್ ಎಸ್. ಬಿ,ಪ್ರಕಾಶ್ ಎಚ್. ಕೆ, ಸೇರಿದಂತೆ ಶಿರಾಳಕೊಪ್ಪದ ಅರುಣ್ ಕುಮಾರ್ ಜಿ. ಎನ್, ಸತೀಶ್ ರಮ್ಯ,ಶಿವಣ್ಣ ವೈಭವ, ಚಂದ್ರ ಶೇಖರ ಮಠದ್, ಬಗನಕಟ್ಟೆ ಮಂಜಪ್ಪ, ವಿನಯ್ ವಾಲಿ, ಇಮಾಮ್ ಸಾಬ್ ಮಾಳಗಿ, ಬಾಲಕೃಷ್ಣ ಜೋಯಿಸ್, ಕೋಟೇಶ್ವರ ಹಾಗೂ ನೂರಾರು ಸಂಖ್ಯೆಯಲ್ಲಿ ಸ್ಥಳೀಯರು ಇದ್ದರು..
ವರದಿ:ನವೀದ್ ಶಿರಾಳಕೊಪ್ಪ

