ಶಿರಾಳಕೊಪ್ಪ :21/3/2026
ಹತ್ತಿರದ ತೊಗರ್ಸಿ ವಲಯ ಬಳ್ಳಿಗಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಜಾವಗಟ್ಟೆ ಗ್ರಾಮ ಕಾರ್ಯಕ್ಷೇತ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಕ್ಕೆ ವಾತ್ಸಲ್ಯ ಮನೆ ಹಸ್ತಾಂತರಿಸಲಾಯಿತು.
ಈ ಸಂಧರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಎಂ ಮಾತನಾಡಿ ಪ್ರಸ್ತುತ ಕಾಲದಲ್ಲಿ ಕೌಟುಂಬಿಕ ಸಂಬಂಧಗಳು ಹಳಸುತ್ತಿದ್ದು, ವೃದ್ಧಾಶ್ರಮಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ. ವೃದ್ಧಾಪ್ಯದಲ್ಲಿ ತಂದೆ-ತಾಯಿಯನ್ನು ಪ್ರೀತಿಯಿಂದ ಸಾಕಿ ಸಲಹುವುದು ಪ್ರತಿಯೊಬ್ಬ ಮಗನ ಮತ್ತು ಮಗಳ ಪ್ರಥಮ ಕರ್ತವ್ಯವಾಗಿದೆ. ಇದನ್ನು ಸಮಾಜದ ಪ್ರತಿಯೊಬ್ಬರೂ ಮನಗಾಣಬೇಕು ಎಂದು ಅವರು ಆಗ್ರಹಿಸಿದರು.

ಬಳ್ಳಿಗಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಮಾತನಾಡಿ ವಾತ್ಸಲ್ಯ ಯೋಜನೆ ಅತ್ಯಂತ ಪ್ರಶಂಸನೀಯ ಕಾರ್ಯಕ್ರಮವಾಗಿದ್ದು ಬಡ ಕುಟುಂಬದವರು ಇದರ ಪ್ರಯೋಜನ ಪಡೆಯಬೇಕು ಎಂದು ಕರೆ ನೀಡಿದರು.
ಶಿವಳ್ಳಿ ಗ್ರಾಮದ ಹನುಮಾನಂದ ಆಶ್ರಮದ ಹನುಮಂತಪ್ಪ ಸ್ವಾಮೀಜಿ ಆಶೀರ್ವಚನ ನೀಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಜಾವಗಟ್ಟಿಯ ವೃದ್ಧೆ ದುರ್ಗಮ್ಮ ಉಳವಿ ಅವರಿಗೆ ವಾತ್ಸಲ್ಯ ಮನೆ ಹಸ್ತಾಂತರ ಮಾಡಲಾಯಿತು.

ತೊಗರ್ಸಿ ವಲಯ ಮೇಲ್ವಿಚಾರಕ ಚವೀಶ್ ಜೈನ್, ತಾಲ್ಲೂಕು ಯೋಜನಾಧಿಕಾರಿ ನಂಜುಂಡಿ, ಕರ್ನಾಟಕ ರಾಜ್ಯ ಭೋವಿ ನಿಗಮದ ಮಾಜಿ ನಿರ್ದೇಶಕ ತೊಗರ್ಸಿ ಸಣ್ಣ ಹನುಮಂತಪ್ಪ, ಬಳ್ಳಿಗಾವಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಿವಪ್ಪ, ಜಾವಗಟ್ಟೆ ಶಿಕ್ಷಕ ಕೃಷ್ಣಪ್ಪ, ತಾಳಗುಂದ ಮಾಜಿ ಉಪಾಧ್ಯಕ್ಷ ತೋಟಪ್ಪ, ಸಹಸ್ರವಳ್ಳಿಯ ಪ್ರಗತಿಪರ ರೈತ ದುರ್ಗಪ್ಪ, ಕಾರ್ಯಕ್ಷೇತ್ರ ಒಕ್ಕೂಟದ ಅಧ್ಯಕ್ಷ ಗಣಪತಿ, ಜಾವಗಟ್ಟೆ ಒಕ್ಕೂಟದ ಅಧ್ಯಕ್ಷೆ ಜ್ಯೋತಿ, ಮೇಲ್ವಿಚಾರಕರಾದ ಅಮಿತಾ, ಮೋಹನ್‌ರಾಜ್, ಮಂಜುನಾಥ್, ಸೇವಾ ಪ್ರತಿನಿಧಿಗಳಾದ ಗೀತಾ, ಸುಧಾ, ದೀಪ, ಸುಮಾ ಹಾಗೂ ಎಲ್ಲ ಒಕ್ಕೂಟದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

