ಬ್ರೇಕಿಂಗ್ ನ್ಯೂಸ್: ಶಿರಾಳಕೊಪ್ಪದಲ್ಲಿ ವಿದ್ಯುತ್ ವ್ಯತ್ಯಯದ ಬಿಸಿ! ಯುವ ಕಾಂಗ್ರೆಸ್ ಘರ್ಜನೆ – ಅಧಿಕಾರಿಗಳಿಗೆ ಸವಾಲು!”

The Siasat News - Images

ಶಿರಾಳಕೊಪ್ಪ:3/4/2026

ಪಟ್ಟಣದ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಿಯಾಗಿ ಪೋರೈಸುತ್ತಿಲ್ಲ ಇದರಿಂದಾಗಿ ಜನಸಾಮನ್ಯರಿಗೆ, ವಿದ್ಯಾರ್ಥಿ ಗಳಿಗೆ ಹಾಗೂ ಸಣ್ಣ ಉದ್ಯಮಾದಾರರಿಗೆ ತೊಂದರೆಯಾಗುತ್ತಿದೆ ಎಂದು ಟೌನ್ ಯುವ ಕಾಂಗ್ರೆಸ್ ವತಿಯಿಂದ ಪಟ್ಟಣದ ವಿದ್ಯುತ್ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದ್ದು ಬೆಳ್ಳಿಗಾವಿ ಮಾತ್ನಾಡಿ ಇತ್ತೀಚಿಗೆ ಎಲ್ ಪಿ ಜಿ ಕೊರತೆ ಯಿಂದಾಗಿ ಸುಮಾರಷ್ಟು ಕುಟುಂಬಗಳು ವಿದ್ಯುತ್ ಮೋರೆ ಹೋಗಿದ್ದು ದಿನನಿತ್ಯದ ಜೀವನ ನಿರ್ವಹಣೆಗೆ ವಿದ್ಯುತ್ ಇಲ್ಲದೆ ಭಾರೀ ಸಮಸ್ಯೆ ಆಗುತ್ತಿದೆ. ವಿದ್ಯಾರ್ಥಿ ಗಳು ಸೇರಿದಂತೆ ಸಣ್ಣ ಪುಟ್ಟ ಉದ್ಯಮಿ ಗಳು ಹಾಗೂ ಜನ ಸಾಮಾನ್ಯರು ವಿದ್ಯುತ್ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದು ಮೆಸ್ಕಾಂ ಅಧಿಕಾರಿಗಳು ತಡೆ ರಹಿತವಾಗಿ ವಿದ್ಯುತ್ ಪೋರೈಕೆಮಾಡಬೇಕೆಂದು ಕೋರಿದರು.

ಈ ಸಂಧರ್ಭದಲ್ಲಿ ಕಾಂಗ್ರೆಸ್ ಕಾರ್ಯ ಕರ್ತರಾದ ಸಫೀರ್ಅಹ್ಮದ್, ಯುವರಾಜ ನಾಯಕ್, ಜಬಿ, ಮಧು, ಗಣೇಶ್ ಮತ್ತಿತರರು ಇದ್ದರು.

ವರದಿ: ನವೀದ್ ಶಿರಾಳಕೊಪ್ಪ

Share the news!

Leave a Reply

Your email address will not be published. Required fields are marked *