Politics
ಬ್ರೇಕಿಂಗ್ ನ್ಯೂಸ್: ಶಿರಾಳಕೊಪ್ಪದಲ್ಲಿ ವಿದ್ಯುತ್ ವ್ಯತ್ಯಯದ ಬಿಸಿ! ಯುವ ಕಾಂಗ್ರೆಸ್ ಘರ್ಜನೆ – ಅಧಿಕಾರಿಗಳಿಗೆ ಸವಾಲು!”
ಶಿರಾಳಕೊಪ್ಪ:3/4/2026 ಪಟ್ಟಣದ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಿಯಾಗಿ ಪೋರೈಸುತ್ತಿಲ್ಲ ಇದರಿಂದಾಗಿ ಜನಸಾಮನ್ಯರಿಗೆ, ವಿದ್ಯಾರ್ಥಿ ಗಳಿಗೆ ಹಾಗೂ ಸಣ್ಣ ಉದ್ಯಮಾದಾರರಿಗೆ ತೊಂದರೆಯಾಗುತ್ತಿದೆ ಎಂದು ಟೌನ್ ಯುವ ಕಾಂಗ್ರೆಸ್ ವತಿಯಿಂದ ಪಟ್ಟಣದ ವಿದ್ಯುತ್ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದ್ದು ಬೆಳ್ಳಿಗಾವಿ ಮಾತ್ನಾಡಿ ಇತ್ತೀಚಿಗೆ ಎಲ್ ಪಿ ಜಿ ಕೊರತೆ ಯಿಂದಾಗಿ ಸುಮಾರಷ್ಟು ಕುಟುಂಬಗಳು ವಿದ್ಯುತ್ ಮೋರೆ ಹೋಗಿದ್ದು ದಿನನಿತ್ಯದ ಜೀವನ ನಿರ್ವಹಣೆಗೆ ವಿದ್ಯುತ್ ಇಲ್ಲದೆ ಭಾರೀ ಸಮಸ್ಯೆ ಆಗುತ್ತಿದೆ. ವಿದ್ಯಾರ್ಥಿ ಗಳು ಸೇರಿದಂತೆ…
ಕಾಲನ ಪಾಲಾದ ಕದೀಮ ಚಿರತೆ: ಮೂರು ದಿನದ ಭೀತಿ ಅಂತ್ಯ, ನಿಟ್ಟುಸಿರು ಬಿಟ್ಟ ಜನತೆ…
ಶಿರಾಳಕೊಪ್ಪ:23/3/2026 ಕಳೆದ ಎರಡು ಮೂರು ದಿನಗಳಿಂದ ಹತ್ತಿರದ ತಡಸನಹಳ್ಳಿ, ಅಡಗಂಟಿ ಮುತ್ತಗಿ ಹಾಗೂ ಬಿದರಿಕೊಪ್ಪ ಗ್ರಾಮಗಳ ಹೊರವಲಯದಲ್ಲಿ, ಗದ್ದೆ ತೋಟ ಗಳ ವ್ಯಾಪ್ತಿಯಲ್ಲಿ ರೈತರ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿಸಿದ ಕ್ರೂರ ಮೃಗ ಸೋಮವಾರ ಹೆಣವಾಗಿ ಪತ್ತೆ ಯಾಗಿದೆ. ಸುಮಾರು ಎರಡು ವರ್ಷ ಪ್ರಾಯದ ಹೆಣ್ಣು ಚಿರತೆ ತಡಸನಹಳ್ಳಿ ಗ್ರಾಮದ ಸರ್ವೇ ಸಂಖ್ಯೆ 74-75 ರಲ್ಲಿರುವ ಅಡಿಕೆ ತೋಟದಲ್ಲಿ ಸೋಮವಾರ ಹೆಣವಾಗಿ ಪತ್ತೆಯಾಗಿದೆ. ಶುಕ್ರವಾರ ಸಂಜೆ ಸುದೀಪ್ ಎಂಬುವವರ ಮೇಲೆ ದಾಳಿ ಮಾಡಿದ ಚಿರತೆ ಅದೇ…
ಜಾಹೀರಾತು ನೀತಿ 2026ಖಂಡಿಸಿ ತಾಲ್ಲೂಕು ಪತ್ರಕರ್ತರ ಸಂಘದಿಂದ ಪ್ರತಿಭಟನೆ… ಸರಕಾರಕ್ಕೆ ಮನವಿ..
ಶಿಕಾರಿಪುರ :23/3/2026 ರಾಜ್ಯ ಸರ್ಕಾರದಿಂದ ನೂತನವಾಗಿ ಜಾರಿಗೆ ಬಂದಂತಹ ಜಾಹೀರಾತು ನೀತಿ 2026 ದಿಂದಾಗಿ ಸಣ್ಣ ಮತ್ತು ಮಧ್ಯಮ ಪತ್ರಿಕೆ ಗಳು ತಮ್ಮ ಅಸ್ತಿತ್ವನ್ನೇ ಕಳೆದು ಕೊಳ್ಳುವ ಗಂಭೀರ ಅಪಾಯ ಎದುರಾಗಲಿದೆ. ಆದುದರಿಂದ ಸರ್ಕಾರ ನೂತನ ಜಾರಿ ಮಾಡಿದ ನೀತಿಯನ್ನು ತಾತ್ಕಾಲಿಕ ವಾಗಿ ಸ್ಥಗಿತಗೊಳಿಸಿ ವ್ಯಾಪಕ ಚರ್ಚೆ ಹಾಗೂ ಸಾಧ್ಯವಾದ ನೀತಿಯ ಮೂಲಕ ಮರು ನಿರೋಪಣೆ ಮಾಡಬೇಕೆಂದು ಆಗ್ರಹಿಸಿ ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ರವರ ಮುಖಾಂತರ ಸರ್ಕಾರಕ್ಕೆ ಮನವಿ…
ಬಡ ವೃದ್ಧೆಯ ಬಾಳಿಗೆ ಆಸರೆಯಾದ ಧರ್ಮಸ್ಥಳ ಸಂಘ: ಜಾವಗಟ್ಟಿಯಲ್ಲಿ ನೂತನ ಮನೆ ಹಸ್ತಾಂತರ…
ಶಿರಾಳಕೊಪ್ಪ :21/3/2026 ಹತ್ತಿರದ ತೊಗರ್ಸಿ ವಲಯ ಬಳ್ಳಿಗಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಜಾವಗಟ್ಟೆ ಗ್ರಾಮ ಕಾರ್ಯಕ್ಷೇತ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಕ್ಕೆ ವಾತ್ಸಲ್ಯ ಮನೆ ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಎಂ ಮಾತನಾಡಿ ಪ್ರಸ್ತುತ ಕಾಲದಲ್ಲಿ ಕೌಟುಂಬಿಕ ಸಂಬಂಧಗಳು ಹಳಸುತ್ತಿದ್ದು, ವೃದ್ಧಾಶ್ರಮಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ. ವೃದ್ಧಾಪ್ಯದಲ್ಲಿ ತಂದೆ-ತಾಯಿಯನ್ನು ಪ್ರೀತಿಯಿಂದ ಸಾಕಿ ಸಲಹುವುದು ಪ್ರತಿಯೊಬ್ಬ ಮಗನ…
ಶಿರಾಳಕೊಪ್ಪದಲ್ಲಿ ಚಿರತೆ ಅಟ್ಟಹಾಸ: ಮೂವರ ಮೇಲೆ ಭೀಕರ ದಾಳಿ, ಗ್ರಾಮಸ್ಥರಲ್ಲಿ ಮನೆಮಾಡಿದ ಭೀತಿ….
ಶಿರಾಳಕೊಪ್ಪ:21/3/2026 ಪ್ರತ್ಯೇಕವಾಗಿ ಮೂವರ ಮೇಲೆ ಚಿರತೆ ದಾಳಿ: ಅಪಾಯದಿಂದ ಪಾರು ಹತ್ತಿರದ ತಡಸನಹಳ್ಳಿ, ಮುತ್ತಗಿ ಹಾಗೂ ಅಡಗಂಟಿ ಗ್ರಾಮದ ಸುತ್ತಮುತ್ತ ಚಿರತೆ ಮೂರು ಜನ ರೈತರ ಮೇಲೆ ದಾಳಿಗೆ ಪ್ರಯತ್ನಿಸಿದ ಘಟನೆ ಶನಿವಾರ ನಡೆದು ರೈತರು ಹೊಲ ಗದ್ದೆಗಳಿಗೆ ತೆರಳಲು ಭಯ ಪಡುವ ವಾತಾವರಣ ಸೃಷ್ಟಿಯಾಗಿದೆ. ಶುಕ್ರವಾರ ಸಂಜೆ ಅಡಗಂಟಿ ಗ್ರಾಮದ ಸುದೀಪ್ ಎಂಬ ಯುವಕ ಗದ್ದಗೆ ಮೇವು ತರಲು ಹೋದಾಗ ಹಠಾತ್ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ. ಪ್ರಾಣಾಪಾಯದಿಂದ ಪಾರಾದ ಯುವಕನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ…
ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ…
ಶಿರಾಳಕೊಪ್ಪ : ಪಟ್ಟಣದ ಆನವಟ್ಟಿ ರಸ್ತೆ ನಿವಾಸಿಗಳಾದ ಶೋಭಾ ಕುಮಾರ್ ಎಂಬುವವರ ಪುತ್ರ ಗಿರೀಶ (16) ಇವರು ಹಿರೆಕೇರೂರು ತಾಲ್ಲೂಕು ತಾವರಗಿ ಗ್ರಾಮದ ಬಳಿ ಫ್ರೆ 24 ರಂದು ಬೈಕ್ ಮತ್ತು ಟ್ರ್ಯಾಕ್ಟರ್ ಮುಖಾಮುಖಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದು ಇವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ಕಳಿಸಿಕೊಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿರುತ್ತಾರೆ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಂಟುಂಬ ಅವರ ಅಂಗಾಂಗವನ್ನು ದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ, ಕುಟುಂಬದ ಆಕ್ರಂದನ…
ಚುನಾಯಿತ ಸದಸ್ಯರಿಲ್ಲದಿದ್ದರೇನು?ಶಿರಾಳಕೊಪ್ಪದ ಸ್ವಚ್ಛತೆಗೆ ಹೆಣ್ಣು ಮಕ್ಕಳೇ “ಸಾರಥಿ”…ಬಜೆಟ್ ಪೂರ್ವ ಭಾವಿ ಸಭೆಯಲ್ಲಿ ಅಧಿಕಾರಿಗಳಿಗೆ ಸ್ವಚ್ಛತೆಯ ಪಾಠ ಹೇಳಿದಗೃಹಿಣಿಯರು…
ಶಿರಾಳಕೊಪ್ಪ:06/03/2026 ಪುರಸಭೆಯಲ್ಲಿ ಪ್ರಸ್ತುತ ಚುನಾಯಿತ ಸದಸ್ಯರಿಲ್ಲದೆ, ಅಧಿಕಾರಿಗಳ ಆಡಳಿತ ನಡೆಯುತ್ತಿರುವ ಈ ಸಂದರ್ಭದಲ್ಲಿ ಬಜೆಟ್ 2026-27 ನೇ ಸಾಲಿನ ಪೂರ್ವಭಾವಿ ಸಭೆಯು ಶುಕ್ರವಾರ ಪುರಸಭೆಯ ಬಿ ಎಸ್ ಯಡಿಯೂರಪ್ಪ ಸಭಾಂಗಣದಲ್ಲಿ ಮುಖ್ಯಾಧಿಕಾರಿ ಪರಶುರಾಮಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಬಾರಿಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾರಿ ಸಂಖ್ಯೆಯಲ್ಲಿ ಭಾಗವಹಿಸಿದ ಊರಿನ ಮಹಿಳೆಯರ ಉಪಸ್ಥಿತಿ ಗಮನ ಸೆಳೆಯಿತು. ಮುಂಬರುವ ವರ್ಷದ ಬಜೆಟ್ ನಲ್ಲಿ ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿ ಮತ್ತು ನೈರ್ಮಲ್ಯ ಸುಧಾರಣೆಗೆ ವಿಶೇಷ ಒತ್ತು ಕೊಡಲು ಅಧಿಕಾರಿಗಳಿಗೆ ಸಲಹೆ…
ದುರ್ಗಾ ದೇವಿ ನೂತನ ದೇವಸ್ಥಾನದ ಗುದ್ದಲಿ ಪೂಜೆ… ಸಂಸದ ಬಿ ವೈ ರಾಘವೇಂದ್ರ ಭಾಗಿ…
ಶಿರಾಳಕೊಪ್ಪ:5/3/2026 ಮದ್ಯೆ ಪ್ರಾಚ್ಯ ದೇಶಗಳಲ್ಲಿ ಯುದ್ದದ ಕಾರ್ಮೋಡ ಕವಿದಿದೆ ಆದರೆ ಭಾರತ ಮಾತ್ರ ಶಾಂತಿಯಿಂದ ಇದೆ ಅದಕ್ಕೆ ಕಾರಣ ನಮ್ಮ ಭೂಮಿಗಿರುವ ಆಧ್ಮಾತ್ಮಿಕ ಶಕ್ತಿ ಅದು ಕಾಪಾಡುತ್ತಿದ್ದು ನಾವು ಮಾಡುತ್ತಿರುವ ದೇವತಾ ಆಚರಣೆಗಳು ನೆಮ್ಮದಿಯಿಂದ ಇರಲು ಸಹಕಾರಿಯಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಪಟ್ಟಣದ ದುರ್ಗಮ್ಮನ ಕೇರಿಯಲ್ಲಿರುವ ದುರ್ಗಾ ದೇವಿ ದೇವಸ್ಥಾನದ ಆವರಣದಲ್ಲಿ ಗುರುವಾರ ಸುಮಾರು 2.50. ಕೋಟಿ ವೆಚ್ಚದ ದುರ್ಗಾದೇವಿ ನೂತನ ದೇವಸ್ಥಾನದ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ನಮ್ಮ ನೆಲದಲ್ಲಿನ ಆಧ್ಮಾತಿಕ ಶಕ್ತಿ,…
ಶಿರಾಳಕೊಪ್ಪದಲ್ಲಿ ಹೈಟೆಕ್ ಮೆಡಿಲೆನ್ಸ್ ಡಯಾಗ್ನೋಸ್ಟಿಕ್ ಸೆಂಟರ್ ಉದ್ಘಾಟನೆ: ಗ್ರಾಮೀಣ ಜನರಿಗೆ ಇನ್ಮುಂದೆ ಸ್ಥಳೀಯವಾಗಿಯೇ ಸಿಗಲಿದೆ ಗುಣಮಟ್ಟದ ವೈದ್ಯಕೀಯ ಸೇವೆ…
.ಶಿರಾಳಕೊಪ್ಪ:22/2/2026 ಗ್ರಾಮೀಣ ಪ್ರದೇಶದ ಜನರಿಗೆ ರೋಗನಿರ್ಣಯ ಪರೀಕ್ಷೆಗಿಂತ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರುವ ಪ್ರಯಾಣ ವೆಚ್ಚವೇ ಹೊರೆಯಾಗುತ್ತಿತ್ತು. ಇದನ್ನು ಮನಗಂಡು ಶಿರಾಳಕೊಪ್ಪದ ಗಾಂಧಿನಗರದಲ್ಲಿ ಆರಂಭವಾಗಿರುವ ‘ಮೆಡಿಲೆನ್ಸ್ ಡಯಾಗ್ನೋಸ್ಟಿಕ್ ಸೆಂಟರ್‘ ಗ್ರಾಮೀಣ ಜನರಿಗೆ ವರದಾನವಾಗಲಿದೆ,” ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು. ಪಟ್ಟಣದ ಗಾಂಧಿನಗರದಲ್ಲಿ ಅತ್ಯಾಧುನಿಕ ಉಪಕರಣಗಳನ್ನೊಳಗೊಂಡ ‘ಮೆಡಿಲೆನ್ಸ್ ಡಯಾಗ್ನೋಸ್ಟಿಕ್ ಸೆಂಟರ್’ ಉದ್ಘಾಟಿಸಿ ಮಾತನಾಡಿದ ಅವರು ಶಿರಾಳಕೊಪ್ಪ ಸೇರಿದಂತೆ ಆನವಟ್ಟಿ, ಸೊರಬ ಹಾಗೂ ಹಿರೇಕೆರೂರು ಚಿಕ್ಕೇರೂರು ಭಾಗದ ನಾಗರಿಕರು ಇನ್ನು ಮುಂದೆ ಸಣ್ಣಪುಟ್ಟ ಪರೀಕ್ಷೆಗಳಿಗೂ ದೂರದ ಜಿಲ್ಲಾ ಕೇಂದ್ರಗಳಿಗೆ…
ಸಾಗವಾನಿ ಮರ ಅಕ್ರಮ ಕಡಿತಲೆ ಕ್ರಮಕ್ಕೆ ಅಗ್ರಹ…
ಶಿರಾಳಕೊಪ್ಪ:20/2/2026 ಹತ್ತಿರದ ತೊಗರ್ಸಿ ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ಘಟಕ ಸ್ಥಾಪಿಸುವ ಸ್ಥಳದಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಸುಮಾರು 30ಕ್ಕೂ ಹೆಚ್ಚು ಸಾಗುವಾನಿ ಮರಗಳನ್ನು ಗ್ರಾಮ ಪಂಚಾಯಿತಿ ಆಡಳಿತ ಅಕ್ರಮವಾಗಿ ಕಡಿತಲ ಮಾಡಿದ್ದು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಯುವ ಘಟಕದ ಉಪಾಧ್ಯಕ್ಷ ಕೌಲಿ ಹರೀಶ್ ಆಗ್ರಹಿಸಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ತೊಗರ್ಸಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 75 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಸ ವಿಲೇವಾರಿ ಘಟಕ ಮಂಜೂರು…

