Politics
ಶಿಕಾರಿಪುರ ತಾll ಅಡಿಕೆ ಅಭಿವೃದ್ಧಿ ಪರಿಷ್ಕರಣೆ ಮತ್ತು ಮಾರಾಟ ಸಂಘದ ಅಧ್ಯಕ್ಷರಾಗಿ ಬಿ. ಸಿದ್ದಪ್ಪ ಆಯ್ಕೆ…. ಸಂಸದರಿಂದ ಸನ್ಮಾನ.
ಶಿಕಾರಿಪುರ:9-1-2024 ತಾಲ್ಲೂಕು ಅಡಿಕೆ ಅಭಿವೃದ್ಧಿ ಪರಿಷ್ಕರಣೆ ಮತ್ತು ಮಾರಾಟ ಸಹಕಾರ ಸಂಘ ನಿ,ದ ನೂತನ ಅಧ್ಯಕ್ಷರಾಗಿ ತಾಳಗುಂದ ದ ಬಿ. ಸಿದ್ದಪ್ಪ ಆಯ್ಕೆಯಾಗಿದ್ದಾರೆ. ತಾಲ್ಲೂಕಿನ ತಾಳಗುಂದ ಗ್ರಾಮದವರಾದ ಶ್ರೀಯುತರು ಮಾದರಿ ರೈತರಾಗಿ ಗುರುತಿಸಿಕೊಂಡಿದ್ದು. ನೂತನ ಅಧ್ಯಕ್ಷರಿಗೆ ಸಂಸದ ಶ್ರೀ ಬಿ ವೈ ರಾಘವೇಂದ್ರ ರವರು ಸನ್ಮಾನಿಸಿ ಪ್ರೋತ್ಸಾಹ ನೀಡಿದ್ದಾರೆ. ಈ ಸಂಧರ್ಭದಲ್ಲಿ ಮಲೆನಾಡ ಅಭಿವೃದ್ಧಿ ಪ್ರತಿಷ್ಠಾನದ ಮಾಜಿ ಅಧ್ಯಕ್ಷ ಕೆ ಎಸ್ ಗುರುಮೂರ್ತಿ, ತಾಲ್ಲೂಕು ಬಿ ಜೆ ಪಿ ಕಾರ್ಯದರ್ಶಿ ಸತೀಶ್ ತಾಳಗುಂದ, ಸುಧೀರ ಮಾರವಳ್ಳಿ ಮತ್ತಿತರನ್ನು…
ಕರಾಟೆಯಲ್ಲಿ ಸಮಗ್ರ ಪ್ರಶಸ್ತಿ ಪಡೆದು ಕೀರ್ತಿ ತಂದ ಶ್ರೀಧರ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು….
ಶಿರಾಳಕೊಪ್ಪ:07/01/2025 ದಿನಾಂಕ 5/01/2025 ಭಾನುವಾರದಂದು ಶಿವಮೊಗ್ಗದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 2ನೇ ಆಲ್ ಇಂಡಿಯಾ ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ – 2025 ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ಮತ್ತು ಅಖಿಲ ಕರ್ನಾಟಕ ಕರಾಟೆ ಅಸೋಸಿಯೇಷನ್ ಇವರ ಸಹಯೋಗದೊಂದಿಗೆ ನಡೆದಂತಹ ಕ್ರೀಡಾಕೂಟದಲ್ಲಿ ಏಕಲವ್ಯ ಕರಾಟೆ ಕ್ಲಬ್ ನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದು ಕೀರ್ತಿಯನ್ನು ತಂದಿರುತ್ತಾರೆ. ಹತ್ತಿರದ ಶ್ರೀಧರ್ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳಾದ ಭಗತ್ ಎಂಎಸ್ . ಸಾಯೀಮ್ ಶುಂಠಿ, ಉದಯ .ಅವನೀಶ್ ವೇದಾಂತ್…
ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಪುರಸಭೆಗೆ ಸಾರ್ವಜನಿಕರಿಂದ ಮನವಿ…
ಶಿರಾಳಕೊಪ್ಪ:06/01/2024 ಪಟ್ಟಣದಲ್ಲಿ ಅಭಿವೃದ್ಧಿ ಆಗದೆ ಇರುವ ಕೆಲ ಪ್ರದೇಶಗಳಿಗೆ ಪ್ರಸಕ್ತ ವರ್ಷದ ಬಜೆಟ್ ನಲ್ಲಿ ಹಣ ಮೀಸಲಿಡಿಸಿ ಕಾಮಗಾರಿಗಳನ್ನು ಮಾಡುವಂತೆ ಆಗ್ರಹಿಸಿ ಸಾರ್ವಜನಿಕರಿಂದ ಪುರಸಭೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ಪಟ್ಟಣದ ಅನೇಕ ಪ್ರದೇಶಗಳು ಅಭಿವೃದ್ಧಿ ವಂಚಿತವಾಗಿರುವುದನ್ನು ಪ್ರಸ್ತಾಪ ಮಾಡಿ ಮನವಿ ಸಲ್ಲಿಸಿದ ಸ್ಥಳೀಯ ನಾಗರೀಕರು ಆದಷ್ಟು ಬೇಗ ಅಭಿವೃದ್ಧಿ ಕಾರ್ಯಗಳು ಮಾಡುವಂತೆ ಬೇಡಿಕೆ ಇಟ್ಟರು. ಈ ಸಂಧರ್ಭದಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಅಬ್ದುಲ್ ನವೀದ್ ಪಟ್ಟಣದಲ್ಲಿ ವಿಶೇಷವಾಗಿ ಅಲ್ಪ ಸಂಖ್ಯಾತ ಸಮುದಾಯ…
ಹಳ್ಳ ಹಿಡಿದು ಹೋದ ಐ ಲವ್ ಶಿರಾಳಕೊಪ್ಪ ಪಾರ್ಕ್….ಪುರಸಭೆ ಬೇಜವಾಬ್ದಾರಿತನ…. ಜನರಲ್ಲಿ ಆಕ್ರೋಶ.
ಶಿರಾಳಕೊಪ್ಪ:04/01/2025. ಪಟ್ಟಣದ ಬಸ್ಟ್ಯಾಂಡ್ ಸರ್ಕಲ್ ಹತ್ತಿರವಿರುವ ಪುರಸಭೆ ವ್ಯಾಪ್ತಿಗೆ ಒಳಪಟ್ಟ ವಾಣಿಜ್ಯ ಮಳಿಗೆಗಳ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ 2022-23 ನೇ ಸಾಲಿನಲ್ಲಿ ನಿರ್ಮಾಣವಾಗಿದ್ದ ಮಿನಿ ಪಾರ್ಕ್ ತಯಾರಾದ ಕೇವಲ 2ವರ್ಷಗಳ ಅವಧಿಯೊಳಗೆ ಹಾಳಾಗಿ ಹೋಗಿದ್ದು ಸ್ಥಳೀಯರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣದ ಸೌಂದರ್ಯಕ್ಕೆ ಮೆರಗು ನೀಡುವಂತೆ ನಿರ್ಮಾಣ ಮಾಡಲಾಗಿದ್ದ ಮಿನಿ ಪಾರ್ಕ್ ಜನರನ್ನು ಆಕರ್ಷಸುತ್ತಿದ್ದು ಮಹಿಳೆಯರು ಮಕ್ಕಳು ಮತ್ತು ಹೊಸದಾಗಿ ಪಟ್ಟಣಕ್ಕೆ ಬಂದಂತಹ ಪ್ರವಾಸಿಗರು ತುಸು ಹೊತ್ತು ಅಲ್ಲಿ ನಿಂತು ಸೆಲ್ಫಿ ಮತ್ತು ಫೋಟೋಗಳನ್ನು ತೆಗೆದುಕೊಂಡು ಮುಂದೆ…
ಆಗಲಿದ ಮಾಜಿ ಪ್ರಧಾನಿಗಳಿಗೆ ಯೂಥ್ ಕಾಂಗ್ರೆಸ್ ವತಿಯಿಂದ ಶ್ರದ್ದಾಂಜಲಿ…
ಶಿರಾಳಕೊಪ್ಪ: ಭಾರತ ಮಾಜಿ ಪ್ರಧಾನ ಮಂತ್ರಿ ಡಾಕ್ಟರ್ ಮನಮೋಹನ್ ಸಿಂಗ್ ರವರ ನಿಧನದ ಹಿನ್ನೆಲೆಯಲ್ಲಿ ಪಟ್ಟಣದ ಬಸ್ ಸ್ಟಾಂಡ್ ಸರ್ಕಲ್‌ನಲ್ಲಿ ಯೂಥ್ ಕಾಂಗ್ರೆಸ್ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಡಾಕ್ಟರ್ ಮನಮೋಹನ್ ಸಿಂಗ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ತುಸು ಹೊತ್ತು ಮೌನಾಚರಣೆ ಮಾಡುವ ಮೂಲಕ ಮೃತ ಸಾಧಕನಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ನ ಯುವ ಮುಖಂಡ, ಇರ್ಫಾನ್ ಮುಹೀಬ್ ಸಾಬ್ ದೇಶವು ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವ ಸಂದರ್ಭದಲ್ಲಿ ತಮ್ಮ ಬುದ್ಧಿವಂತಿಗೆ ಮತ್ತು…
ಅಂಬೇಡ್ಕರ್ ಮಾನವರೋಪದ ಪ್ರತ್ಯಕ್ಷ ದೇವರು-ಕಾಗಿನೆಲೆ ರಂಗಪ್ಪ….
ಶಿಕಾರಿಪುರ: 20-12-2024 ರಾಮ-ಕೃಷ್ಣ ನಿಮಗೆ ಕಾರಣದ ದೇವರಾದರೆ ಅಂಬೇಡ್ಕರ್ ನಮಗೆ ಪ್ರತ್ಯಕ್ಷ ಮಾನವ ರೂಪದ ದೇವರು ಅವರ ದೂರದೃಷ್ಠಿ ಪ್ರತಿಫಲ ನಾವಿಂದು ಎಲ್ಲ ಸೌಲಭ್ಯ ಅನುಭವಿಸುತ್ತಿದ್ದೇವೆ ಎಂದು ತಾಲೂಕು ಅಹಿಂದ ಒಕ್ಕೂಟದ ಅಧ್ಯಕ್ಷ ಕಾಗಿನಲ್ಲಿ ರಂಗಪ್ಪ ಹೇಳಿದರು. ಶುಕ್ರವಾರ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು ಅವರು ದೇಶದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯೇ ಅಂಬೇಡ್ಕರ್ ಕುರಿತು ಅವಹೇಳನ ಮಾತನ್ನಾಡುವ ಮೂಲಕ ಅವರ ಮನಸ್ಸಿನ ಕನ್ನಡಿ ಜನರೆದುರು ತೆರೆದಿಟ್ಟಿದ್ದಾರೆ ಅಂತಹವರ ಕುರಿತು ಜನತೆ ಎಚ್ಚರಿಕೆಯಿಂದ ಇರಬೇಕು ಎಂದರು. ಡಿಎಸ್‌ಎಸ್ ನ…
ಶಿರಾಳಕೊಪ್ಪದಲ್ಲಿ SDPI ಪಕ್ಷದ ನೂತನ ಕಛೇರಿ ಉದ್ಘಾಟನೆ…
ಶಿವಮೊಗ್ಗ:29/11/2024 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಪಕ್ಷದ ಶಿರಾಳಕೊಪ್ಪ ಘಟಕದ ಕಛೇರಿ ಉದ್ಘಾಟನೆ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾದ ರಿಯಾಜ್ ಫರಂಗಿಪೇಟೆ ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು. ಶಿರಾಳಕೊಪ್ಪ ಪಟ್ಟಣದ ಹಿರೇಕೆರೂರು ಮುಖ್ಯ ರಸ್ತೆಯಲ್ಲಿ ನಡೆದ ಪಕ್ಷದ ಕಛೇರಿ ಉದ್ಘಾಟನೆ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಎಸ್ ಡಿ ಪಿ ಐ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ವಾಗ್ಮಿ ರಿಯಾಜ್ ಫರಂಗಿಪೇಟೆ ನೇತೃತ್ವದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಸುಮಾರು 50ಕಿಂತ ಹೆಚ್ಚು ಜನ…
ಭದ್ರಾಪುರದ ಶ್ರೀಧರ್ ಇಂಟರ್ನ್ಯಾಷನಲ್ ಸ್ಕೂಲ್‍ನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹಾಗೂ ಸಮಾಜ ಸೇವಕ ಡಿ.ಎಸ್. ಶಂಕರ್ ಶೇಟ್ ಉದ್ಘಾಟಿಸಿದರು.
ಶಿಕಾರಿಪುರ/ಶಿರಾಳಕೊಪ್ಪ:16-11-2024 ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆದಿರುವ ಕನ್ನಡ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಕನ್ನಡ ಭಾಷೆಯ ಮೇಲೆ ಪ್ರತಿಯೊಬ್ಬರು ಅಭಿಮಾನ ಹೊಂದಬೇಕು ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹಾಗೂ ಸಮಾಜ ಸೇವಕ ಡಿ.ಎಸ್. ಶಂಕರ್ ಶೇಟ್ ಹೇಳಿದರು. ತಾಲೂಕಿನ ಶಿರಾಳಕೊಪ್ಪ ಸಮೀಪದ ಭದ್ರಾಪುರದ ಶ್ರೀಧರ್ ಇಂಟರ್ನ್ಯಾಷನಲ್ ಸ್ಕೂಲ್‍ನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನುಡಿದಿದ್ದನ್ನು ಬರೆಯುವ ಮತ್ತು ಬರೆದಂತೆ ನುಡಿಯುವ ಭಾಷೆ ಕನ್ನಡ ಮಾತ್ರ. ಅಂತಹ ಅಗಾಧವಾದ ಶಕ್ತಿ ಕನ್ನಡಕ್ಕಿದೆ. ಜೊತೆಗೆ…
ಶ್ರೀ ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್. ನಿ ಶಿರಾಳಕೊಪ್ಪದ ನೂತನ ಶಾಖೆ ಆನವಟ್ಟಿ ಯಲ್ಲಿ ಪ್ರಾರಂಭ…
ಶಿರಾಳಕೊಪ್ಪ:16/11/2024 ಬ್ಯಾಂಕು ಎಂದೊಡನೆ ಬಡವ, ಬಲ್ಲಿದ, ವರ್ತಕ – ನೌಕರ-ಚಾಕರ, ಪಂಡಿತ-ಪಾಮರರೆಲ್ಲರಿಗೂ ಹಣಕಾಸಿನ ವ್ಯವಹಾರ ಮಾಡಲು ಅನುಕೂಲವಾದ ಅತ್ಯಂತ “ವಿಶ್ವಾಸಾರ್ಹ ಸ್ಥಾನ” ಎಂಬ ಭಾವನೆ ಥಟ್ಟನೆ ನಮ್ಮ ಮನಸ್ಸಿನಲ್ಲಿ ಮೂಡಿ ನಿಲ್ಲುತ್ತದೆ. ಅದರಲ್ಲೂ ಸಹಕಾರ ತತ್ವದ ತಳಹದಿಯೊಂದಿಗೆ ಸ್ಥಾಪಿತವಾದ ಬ್ಯಾಂಕು ಸಕಲ ಜನರ ಮೆಚ್ಚುಗೆಗೆ ಪಾತ್ರವಾಗಿರುವುದಲ್ಲದೆ ಎಲ್ಲರಲ್ಲೂ “ಇದು ನಮ್ಮ ಬ್ಯಾಂಕು” ಎಂಬ ಭಾವನೆಯನ್ನು ಒಡಮೂಡಿಸುತ್ತದೆ. ಒಂದು ಸಂಸ್ಥೆ ಜನ್ಮ ತಳೆದು ಬೆಳಕು ಕಾಣಲು ಹತ್ತಾರು ವ್ಯಕ್ತಿಗಳ ತ್ಯಾಗ , ಪರಿಶ್ರಮ ಹಾಗೂ ಪ್ರಾಮಾಣಿಕ ಪ್ರಯತ್ನಗಳೇ ಕಾರಣ…
ಬಡ ಕುಟುಂಬಕ್ಕೆ ಸೂರು ಭಾಗ್ಯ ನೀಡಿದ ಇತ್ತೇಹಾದ್ ಫೌಂಡೇಶನ್ ಸಂಸ್ಥೆ…..
ಶಿರಾಳಕೊಪ್ಪ: 14/11/2024 ಪಟ್ಟಣದ ಇತ್ತೇಹಾದ್ ಫೌಂಡೇಶನ್ ಸಂಸ್ಥೆ ವತಿಯಿಂದ ಬಡ ಕುಟುಂಬಕ್ಕೆ ಮನೆ ಕಟ್ಟಿ ಕೊಡಲಾಯಿತು. ಪಟ್ಟಣದ ಖಾನ್ಕೇರಿ ಪ್ರದೇಶದಲ್ಲಿ ತನ್ನ ಸ್ವಂತ ಖಾಲಿ ಜಾಗ ಇದ್ದು ಆ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಪರದಾಡುತ್ತಿದ್ದ ವಿಧವೆ ಹೆಣ್ಣುಮಗಳಿಗೆ ಆಸರೆ ನೀಡಿದ ಇತ್ತೇಹಾದ್ ಸಂಸ್ಥೆ ತಮ್ಮ ಸ್ವಂತ ಖರ್ಚಿನಿಂದ ಮನೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ. ಪಟ್ಟಣದಲ್ಲಿ ಕಳೆದ 5ವರ್ಷಗಳಿಂದ ಬಡವರ ಪರ, ನಿರ್ಗತಿಕರ ಪರ ಕೆಲಸ ಮಾಡುತ್ತಿರುವ ಇತ್ತೇಹಾದ್ ಸಂಸ್ಥೆ ಬಡ ರೋಗಿಗಳ ಚಿಕಿತ್ಸೆ, ರಂಜಾನ್ ಕಿಟ್, ಸೇರಿದಂತೆ ಅನೇಕ…

