Politics
ಶಿರಾಳಕೊಪ್ಪದ ಎಂ. ಆರ್ ಲೇಔಟ್ ನಲ್ಲಿ ಪ್ರಥಮ ಬಾರಿಯ ಗಣೇಶನ ಮೂರ್ತಿ ಪ್ರತಿಷ್ಠಾಪನೆ….
ಶಿರಾಳಕೊಪ್ಪ:29-8-2025 ಪಟ್ಟಣದ ಎಂ.ಆರ್ ಲೇಔಟ್, ಅರುಣೋದಯ ಲೇಔಟ್ ನಲ್ಲಿ ಪ್ರಥಮ ಬಾರಿಗೆ ಶೀ ಮಹಾಗಣಪತಿ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಯಿತು. ಕಲಾವಿದ ರತ್ನಾಕರ ಭಂಡಾರಿಯವರು ನಿರ್ಮಿಸಿದ ಕೇದಾರನಾಥ ದೇವಸ್ಥಾನ ಹಿನ್ನೆಲೆಯುಳ್ಳ ಮನಮೋಹಕ ಸ್ತಬ್ದ ಚಿತ್ರ ಜನರ ಆಕರ್ಷಣೆಗೆ ಕಾರಣವಾಗಿದೆ. ಸುಮಾರು 150 ಮನೆಗಳು ಇರುವ ಎಂ ಆರ್ ಲೇಔಟ್, ಅರುಣೋದಯ ಲೇಔಟ್ ನಲ್ಲಿ ರಸ್ತೆ ಸೇರಿದಂತೆ, ಚಿರಂಡಿ, ನೀರು, ಬೆಳಕಿನ ಸೌಕರ್ಯವಿಲ್ಲದ ಕಾರಣ ಸ್ಥಳೀಯರು, ವೃದ್ಧರು, ಮಕ್ಕಳು ಪರದಾಡುವ ಪರಿಸ್ಥಿತಿ ಎದುರಾಗಿದ್ದು ಸಂಭಂದ ಪಟ್ಟವರು ಗಮನ ಹರಿಸಬೇಕಾಗಿ ಸ್ಥಳೀಯರ…
ಶಿರಾಳಕೊಪ್ಪದ ಶ್ರೀ ಬಸವೇಶ್ವರ ದೇವಸ್ಥಾನ ವತಿಯಿಂದ 62ನೇ ವರ್ಷದ ಮಹಾಗಣಪತಿ ಪ್ರತಿಷ್ಠಾಪನೆ…..
ಶಿರಾಳಕೊಪ್ಪ:29-8-2025 ಪಟ್ಟಣದ ಪ್ರಸಿದ್ಧ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ 62ನೇ ವರ್ಷದ ಶ್ರೀ ಗೌರಿ ಹಾಗೂ ಶ್ರೀ ಮಹಾ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಯಿತು. ಶ್ರೀ ಮಹಾ ಗಣಪತಿ ಉತ್ಸವ ಸಮಿತಿ ಶಿರಾಳಕೊಪ್ಪ ದ ಅಧ್ಯಕ್ಷರಾದ ಎಂ. ಜೆ ವಿಜಯ ಕುಮಾರ ರವರ ಸಾರತ್ಯ ದಲ್ಲಿ ನಿತ್ಯವೂ ವಿಭಿನ್ನ ಕಾರ್ಯಕ್ರಮ ಗಳು ಜರುಗಲಿದ್ದು ದಿನಾಂಕ 3-9-2025 ರಂದು ಬುಧವಾರ ಕಡೇನಂದಿಹಳ್ಳಿಯ ದುಗ್ಲಿ ಮಠದ ಶ್ರೀ ಷ. ಬ್ರ. ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ…
ಮತ್ತೊಂದು ಹಂತದ ಟೋಲ್ ಹೋರಾಟಕ್ಕೆ ಮುಹೂರ್ತ ಫಿಕ್ಸ್….. ಸೆಪ್ಟೆಂಬರ್ 18ಕ್ಕೆ ಬ್ರಹತ್ ಪ್ರತಿಭಟನೆ ಘೋಷಿಸಿದ ಹೋರಾಟ ಸಮಿತಿ.
ಶಿರಾಳಕೊಪ್ಪ: 23-8-2025 ರಾಜ್ಯ ಹೆದ್ದಾರಿ 57 ರಲ್ಲಿ ಶಿವಮೊಗ್ಗ ಜಿಲ್ಲೆ ಕಲ್ಲಾಪುರ ಮತ್ತು ಕುಟ್ರ ಹಳ್ಳಿಯಲ್ಲಿ ನಿರ್ಮಿಸಲಾದ ಟೂಲ್ ಗಳ ವಿರುದ್ದ ನಡೆಯುತ್ತಿರುವ ಹೋರಾಟವು ವಿಧಾನ ಸಭೆ ಅಧಿವೇಶನದಲ್ಲಿ ಶಿಕಾರಿಪುರದ ಶಾಸಕ ಬಿ ವೈ ವಿಜಯೇಂದ್ರ ವಿಷಯ ಪ್ರಸ್ತಾಪ ಮಾಡಿದ ನಂತರ ಮತ್ತೊಂದು ತಿರುವು ಪಡೆದು ಕೊಂಡಿದೆ. ಶನಿವಾರ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನ ದಲ್ಲಿ ನಡೆದ ಸಮಿತಿಯ ಸಭೆಯ ನಂತರ ಮತ್ತೊಂದು ಬ್ರಹತ್ ಹೋರಾಟ ಮಾಡುವ ವಿಚಾರವಾಗಿ ಸಮಿತಿ ವತಿಯಿಂದ ನಿರ್ಮಾಣ ಕೈ ಗೊಳ್ಳಲಾಗಿದೆ. ಸಭೆಯ…
ಶಿರಾಳಕೊಪ್ಪ ದಲ್ಲಿ ವಿವಿಧಡೆ ಸ್ವಾತಂತ್ರೋತ್ಸವ ಆಚರಣೆ….
ಶಿರಾಳಕೊಪ್ಪ:15-8-2025 ದೇಶದ 79 ನೇ ಸ್ವಾತಂತ್ರೋತ್ಸವವನ್ನು ಪಟ್ಟಣದ ವಿವಿಧ ಕಡೆ ಸಾರ್ವಜನಿಕರಿಂದ ಆಚರಣೆ ಮಾಡಲಾಯಿತು. ಪಟ್ಟಣದ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಪುರಸಭೆ ಅಧ್ಯಕ್ಷೆ ಶ್ರೀಮತಿ ಮಮತಾ ನಿಂಗಪ್ಪ ಧ್ವಜಾರೋಹಣೆ ನೆರವೇರಿಸಿದರು. ಪುರಸಭೆ ಮುಖ್ಯಾಧಿಕಾರಿ ಪರಶುರಾಮ್, ಇಂಜಿನಿಯರ್ ಶೇಖರ್ ನಾಯಕ್ ಸೇರಿದಂತೆ ಪುರಸಭೆ ಸದಸ್ಯರು, ಸಿಬ್ಬಂದಿಗಳು ಹಾಗೂ ಊರಿನ ವಿವಿಧ ಶಾಲಾ ಮಕ್ಕಳು, ಶಿಕ್ಷಕರು ಇದ್ದರು. ಟೂಲ್ ಪ್ಲಾಜಾದಲ್ಲಿ ಸ್ವಾತಂತ್ರೋತ್ಸವ ಆಚರಣೆ: ಕುಟ್ರ ಹಳ್ಳಿ ಟೂಲ್ ಪ್ಲಾಜಾ ದಲ್ಲಿ ಪ್ಲಾಜಾದ ವ್ಯವಸ್ಥಾಪಕ ನಿತಿನ್ ರವರ ನೇತೃತ್ವ ದಲ್ಲಿ ಸ್ವಾತಂತ್ರೋತ್ಸವ…
ಟೂಲ್ ಗೇಟ್ ವಿಚಾರವಾಗಿ ಕಲಾಪದಲ್ಲಿ ಸ್ಥಳೀಯ ರಾಜಕೀಯ ಪ್ರತಿನಿಧಿಗಳು ಧ್ವನಿ ಎತ್ತಲಿ – ಪ್ಯಾಟಿ ಈರಣ್ಣ…
ಶಿರಾಳಕೊಪ್ಪ:14-8-2025 ತಡಸ- ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ರಾಜ್ಯ ಸರಕಾರದ ವತಿಯಿಂದ ಕುಟ್ರಹಳ್ಳಿ ಮತ್ತು ಕಲ್ಲಾಪುರ ಬಳಿ ಅಳವಡಿಸಿರುವ ಟೂಲ್ ಗಳ ವಿಚಾರವಾಗಿ ನಡಿಯುತ್ತಿರುವ ಕರ್ನಾಟಕ ವಿಧಾನಸಭೆ ಆಧಿವೇಶನದಲ್ಲಿ ಸಂಬಂಧ ಪಟ್ಟ ಸ್ಥಳೀಯ ರಾಜಕೀಯ ಪ್ರತಿನಿಧಿ ಗಳು ಧ್ವನಿ ಎತ್ತ ಬೇಕು, ಚರ್ಚೆ ನಡೆಸಿ ಸ್ಥಳೀಯ ಜನ ಸಾಮಾನ್ಯರಿಗೆ ಆಗುತ್ತಿರುವ ತೊಂದರೆಯ ನಿವಾರಣೆ ಮಾಡಬೇಕೆಂದು ರಾಜ್ಯ ರೈತ ಸಂಘದ ಜಿಲ್ಲಾ ಗೌರವಾಧಕ್ಷ ಈರಣ್ಣ ಪ್ಯಾಟಿ ಆಗ್ರಹಿಸಿದರು. ಪತ್ರಿಕಾಘೋಷ್ಟಿ ಯಲ್ಲಿ ಮಾತನಾಡಿದ ಅವರು ಶಿಕಾರಿಪುರ ತಾಲ್ಲೂಕು ಟೂಲ್ ವಿರೋಧಿ ಹೋರಾಟ…
3%ಲಂಚಕ್ಕೆ ಬೇಡಿಕೆ ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್ ಲೋಕಾಯುಕ್ತ ಬಲೆಗೆ….
ಶಿರಾಳಕೊಪ್ಪ:16-06-2025 ಪಿ ಡಬ್ಲ್ಯೂ ಡಿ ಗುತ್ತಿಗೆದಾರನಿಗೆ 3%ಲಂಚಕ್ಕೆ ಬೇಡಿಕೆ ಇಟ್ಟ ಸೊರಬ ತಾಲ್ಲೂಕು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಆಫೀಸರ್ ಪರಶುರಾಮ ಎಚ್ ನಾರಾಳ ಎಂಬುವ ಅಧಿಕಾರಿಯನ್ನು ಲೋಕಾ ಯುಕ್ತ ಪೂಲೀಸರು ಇಂದು ಸಂಜೆ ಬಲೆಗೆ ಬೀಳಿಸಿದ್ದಾರೆ. ದೋರುದಾರರಾದ ಗುತ್ತಿಗೆ ದಾರ ಲಿಂಗರಾಜ ಉಳ್ಳಾಗಡ್ಡಿರವರುಸೊರಬ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ದಾಂಬರೀಕರಣ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಂಭಂಧಿಸಿದಂತೆ ಒಟ್ಟು 77,59,437ರೊ ಗಳ ಕಾಮಗಾರಿಗಳನ್ನು ಮುಗಿಸಿ ಸದರಿ ಕಾಮಗಾರಿಗಳ ಹಣವನ್ನು ಮಂಜೂರು…
ಹಸಿವು ಮುಕ್ತ ಭಾರತ ಇಂದಿರಾ ಗಾಂಧಿಯವರು ಕಂಡ ಕನಸು- ಮಧು ಬಂಗಾರಪ್ಪ. ಶಿರಾಳಕೊಪ್ಪದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಿದ ಸಚಿವರು
ಶಿರಾಳಕೊಪ್ಪ:25/5/2025. ಸರಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಕಡಿಮೆ ದರದಲ್ಲಿ ಬಡವರ ಹಸಿವನ್ನು ನೀಗಿಸುವ ಕಾರ್ಯಕ್ರಮ ಇಂದಿರಾ ಕ್ಯಾಂಟೀನ್ ನ ಉದ್ಘಾಟನೆಯು ಭಾನುವಾರ ಶಾಲಾ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ನೆರವೇರಿಸಿದರು. ಪಟ್ಟಣದ ಹೃದಯ ಭಾಗ, ಹಿರೇಕೆರೂರು ರಸ್ತೆಯ ನಾಡಕಛೇರಿ ಹತ್ತಿರ ಪುರಸಭೆ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಉಪಹಾರ ಸೇವಿಸುವ ಮೂಲಕ ಉದ್ಘಾಟನೆ ಮಾಡಿದ ಸಚಿವರು ಶ್ರೀಮತಿ ಇಂದಿರಾಗಾಂಧಿಯವರ ಅವಧಿಯಲ್ಲಿ 20ಪಾಯಿಂಟ್ ಕಾರ್ಯಕ್ರಮದಡಿಯಲ್ಲಿ ಸುಮಾರಷ್ಟು ಜನಕಲ್ಯಾಣ ಕಾರ್ಯಕ್ರಮಗಳು ರೂಪಗೊಂಡಿದ್ದು ಅದರಲ್ಲೇ ಮಹತ್ವದ ಕಾರ್ಯಕ್ರಮ…
ಅಭಿಮಾನಿಗಳಿಂದ ಜಾನಪದ ಕಲೆ ಜೀವಂತ- ಗುರುರಾಜ್ ಹೊಸಕೋಟಿ…
ಶಿರಾಳಕೊಪ್ಪ:30-03-2025 ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜರುಗುವ ಮನೊರಂಜನೆ ಸಂಸ್ಕಾರ ನೀಡುವಂತಿರಬೇಕು ಎಂದು ಜಾನಪದ ಕಲಾವಿದ ಗುರುರಾಜ್ ಹೊಸಕೋಟೆ ಅಭಿಪ್ರಾಯಪಟ್ಟರು. ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಭಾನುವಾರ ದಸರಾ ಉತ್ಸವ ಸಮಿತಿಯವರು ಆಯೋಗಿಸಿದ್ದ ಯುಗಾದಿ ಉತ್ಸವ ಕಾರ್ಯಕ್ರಮ ನೀಡಿ ಮಾತನಾಡಿದರು. ಇದುವರೆಗೂ ರಾಜ್ಯಾತ್ಯಂತ 13ಸಾವಿರ ಕಾರ್ಯಕ್ರಮ ನೀಡಿದ್ದೇವೆ. ನಿಮ್ಮ ಮಕ್ಕಳ ಕಲೆ ಬೆಳೆಸಿ, ಜನಪದ ಹಾಡಿಗೆ ಕಲೆಗೆ ಬೆಲೆ ಕೊಡಿ. ಜನಪದ ಸಾಹಿತ್ಯ ನಿಮ್ಮಂತಹ ಅಭಿಮಾನಿಗಳಿಂದ ಜೀವಂತವಾಗಿದೆ ಎಂದರು. ಐ.ಎಂ ಶಿವಾನಂದ ಸ್ವಾಮಿ ಪ್ರಾಸ್ತಾವಿಕ ಮಾತನಾಡಿ, 1989-90 ರಲ್ಲಿ ಶಿರಾಳಕೊಪ್ಪದಲ್ಲಿ…
ಶಿವಮೊಗ್ಗ ಜಿಲ್ಲೆಗೆ ಖಾಯಂ ವಕ್ಫ್ ಅಧಿಕಾರಿ ನೇಮಕ ಮಾಡಲು ಒತ್ತಾಯಿಸಿ ಮುಸ್ಲಿಂ ಮುಖಂಡರಿಂದ ಪ್ರತಿಭಟನೆ…
ಶಿವಮೊಗ್ಗ:04-03-2025 ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ವಕ್ಫ್ ಬೋರ್ಡ್ ಕಚೇರಿಯಲ್ಲಿ ಖಾಯಂ ಅಧಿಕಾರಿ ಇಲ್ಲದ ಕಾರಣ ಜಿಲ್ಲೆಯಾದ್ಯಂತ ಅನೇಕ ಕಡೆ ಸಮಸ್ಯ ಗಳು ಎದುರಾಗಿರುವ ಪ್ರಸಂಗ ಗಳು ನಡೆದಿದೆ. ಕಚೇರಿಯ ಪ್ರಥಮ ದರ್ಜೆ ಸಹಾಯಕ ಮೆಹತಾಬ್ ರವರು ಖಾಯಂ ಅಧಿಕಾರಿ ಇಲ್ಲದ ಕಾರಣ ಹಂಗಾಮಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಸರಿಯಾಗಿ ಕೆಲಸ ಮಾಡುತ್ತಿಲ್ಲ ಸಾರ್ವಜನಿಕರು ಮತ್ತು ವಿದ್ಯಾರ್ಥಿ ಗಳು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ ಆದಷ್ಟು ಬೇಗ ಖಾಯಂ ಆಗಿ ವಖ್ಫ್ ಅಧಿಕಾರಿಯನ್ನು ಸರಕಾರ ನೇಮಕ ಮಾಡಬೇಕೆಂದು…
ಮುಸ್ಲಿಂ ಹಾಸ್ಟೆಲ್ ನಲ್ಲಿ ಸಿಗುತ್ತಿಲ್ಲ ಗುಣಮಟ್ಟದ ಆಹಾರ – ವಿದ್ಯಾರ್ಥಿ ಗಳಿಂದ ಸಚಿವರಿಗೆ ದೊರು…
ಶಿವಮೊಗ್ಗ:25-02-2025. ಜಿಲ್ಲೆಯ ವಕ್ಫ್ ಬೋರ್ಡ್ ಅಡಿಯಲ್ಲಿ ಸ್ಥಳೀಯ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ, ವಿದ್ಯಾಭ್ಯಾಸದ ಪ್ರಯುಕ್ತ ಅನುಕೂಲವಾಗಲೆಂದು ನಿರ್ಮಾಣಗೊಂಡಿರುವ ಮುಸ್ಲಿಂ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ಗಳಿಗೆ ಗುಣ ಮಟ್ಟ ಇಲ್ಲದ ಊಟ ಸೇರಿದಂತೆ ಅನೇಕ ಸಮಸ್ಯೆ ಗಳು ಎದುರಾಗಿದ್ದು ಇದನ್ನೆಲ್ಲಾ ಬಗೆ ಹರಿಸಿ ಮತ್ತು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಖ್ಫ್ ಮತ್ತು ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಬಿ ಜೆಡ್ ಜಮೀರ್ ಅಹ್ಮದ್ ಗೆ ವಿದ್ಯಾರ್ಥಿ ಗಳಿಂದ ಮನವಿ ಸಲ್ಲಿಸಲಾಯಿತು. ಇಂದು ನಗರಕ್ಕೆ ಆಗಮಿಸಿದ…

