ಶಿರಾಳಕೊಪ್ಪ:04/01/2025.
ಪಟ್ಟಣದ ಬಸ್ಟ್ಯಾಂಡ್ ಸರ್ಕಲ್ ಹತ್ತಿರವಿರುವ ಪುರಸಭೆ ವ್ಯಾಪ್ತಿಗೆ ಒಳಪಟ್ಟ ವಾಣಿಜ್ಯ ಮಳಿಗೆಗಳ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ 2022-23 ನೇ ಸಾಲಿನಲ್ಲಿ ನಿರ್ಮಾಣವಾಗಿದ್ದ ಮಿನಿ ಪಾರ್ಕ್ ತಯಾರಾದ ಕೇವಲ 2ವರ್ಷಗಳ ಅವಧಿಯೊಳಗೆ ಹಾಳಾಗಿ ಹೋಗಿದ್ದು ಸ್ಥಳೀಯರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದ ಸೌಂದರ್ಯಕ್ಕೆ ಮೆರಗು ನೀಡುವಂತೆ ನಿರ್ಮಾಣ ಮಾಡಲಾಗಿದ್ದ ಮಿನಿ ಪಾರ್ಕ್ ಜನರನ್ನು ಆಕರ್ಷಸುತ್ತಿದ್ದು ಮಹಿಳೆಯರು ಮಕ್ಕಳು ಮತ್ತು ಹೊಸದಾಗಿ ಪಟ್ಟಣಕ್ಕೆ ಬಂದಂತಹ ಪ್ರವಾಸಿಗರು ತುಸು ಹೊತ್ತು ಅಲ್ಲಿ ನಿಂತು ಸೆಲ್ಫಿ ಮತ್ತು ಫೋಟೋಗಳನ್ನು ತೆಗೆದುಕೊಂಡು ಮುಂದೆ ಸಾಗುತ್ತಿದ್ದದ್ದು ಈಗ ಇತಿಹಾಸ.

ಪಾರ್ಕ್ ತಯಾರಾದ ಕೇವಲ ಎರಡು ವರ್ಷ ಅವಧಿಯೊಳಗಡೆ ಸ್ಥಳೀಯ ಪುರಸಭೆಯ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ತನದಿಂದಾಗಿ ಲಕ್ಷ ಗಟ್ಟಲೆ ಪಬ್ಲಿಕ್ ಹಣದಲ್ಲಿ ನಿರ್ಮಾಣ ಗೊಂಡ ಪಾರ್ಕ್ ಈಗ ತನ್ನ ನೈಜತೆ ಮತ್ತು ಸೌಂದರ್ಯತೆ ಕಳೆದುಕೊಂಡಿದೆ.
ಪುರಸಭೆಯಲ್ಲಿ ನಮ್ಮ ಆಸ್ತಿಗಳಿಗೆ ಸಂಭಂಧಿಸಿದಂತೆ ಸಣ್ಣ ಪುಟ್ಟ ಕಾರ್ಯಕ್ಕೂ ಮುಂಚೆ ಮೊದಲು

ಕಂದಾಯ ಕಟ್ಟಿ ರಸೀದಿ ತನ್ನಿ ಎಂದು ಬಡವರಿಗೆ ಸುಖ ಸುಮ್ಮನೆ ತೊಂದರೆ ಕೊಡುವ ಸಿಬ್ಬಂದಿಗಳು ಈ ತರ ನಮ್ಮಗಳ ತೆರಿಗೆ ಹಣವನ್ನು ತಮ್ಮ ಬೇಜವಾಬ್ದಾರಿ ಮತ್ತು ನಿರ್ಲಕ್ಷತನ ದಿಂದ ಬೇಕಾಬಿಟ್ಟೀಯಾಗಿ ಪೋಲು ಮಾಡಿ ಹಾಳು ಮಾಡಿತ್ತಿರುವುದು ನೋಡಿದರೆ ಬಹಳ ಬೇಜಾರು ಆಗುತ್ತದೆ ಎನ್ನುತ್ತಾರೆ ಒಬ್ಬ ಸ್ಥಳೀಯ ನಿವಾಸಿ.
ಪಟ್ಟಣದಲ್ಲಿ ಇನ್ನೂ ಅನೇಕ ಗಲ್ಲಿ ಮೊಹಲ್ಲಾ ಗಳಲ್ಲಿ ರಸ್ತೆಗಳು ಅಭಿವೃದ್ಧಿಯಾಗ ಬೇಕಾಗಿದೆ. ಇನ್ನೂ ಅನೇಕ ಬೀದಿ ಗಳಿಗೆ ಸುಸಜ್ಜಿತವಾದ ಪಾರ್ಕಿಂಗ್ ಟೈಲ್ಸ್ ಗಳ ಅಳವಡಿಕೆ ಕಾರ್ಯ ಆಗಬೇಕಾಗಿದೆ. ಇನ್ನೂ ಅನೇಕ ಜನಪರ ಅಭಿವೃದ್ಧಿ ಕಾರ್ಯಗಳ ಅವಶ್ಯಕತೆ, ಮೂಲ ಸೌಲಭ್ಯಗಳ ಕೊರತೆ ನಿವಾರಣೆ ಆಗಬೇಕಾಗಿರುವ ಸಂಧರ್ಭದಲ್ಲಿ ಕೋಟಿ ಗಟ್ಟಲೆ ಜನಗಳ ಹಣ ಸುರಿದು ಉಪಯೋಗಕ್ಕೆ ಬಾರದ ಫುಡ್ ಕೋರ್ಟ್ ಮಾಡುವುದು, ಈ ರೀತಿ ನಿರ್ಲಕ್ಷ್ಯ ವಹಿಸುವುದರ ಮೂಲಕ ಹಣವನ್ನು ಹಾಳು ಮಾಡುವುದು ಸಮಂಜಸವೇ ಎಂಬುದೇ ಈ ಹೊತ್ತಿನ ಮಿಲಯನ್ ಡಾಲರ್ ಪ್ರಶ್ನೆಯಾಗಿದೆ ...???
ಅಧಿಕಾರಿಗಳು, ರಾಜಕಾರಣಿಗಳು ಎಚ್ಚತ್ತುಕೊಂಡು ನಿಜ ಅರ್ಥದಲ್ಲಿ ಊರಿನ ಅಭಿವೃದ್ಧಿ ಮಾಡುವಲ್ಲಿ ಕಾರ್ಯಪ್ರವ್ರತ್ತರಾಗಬೇಕೆಂದು ಜನ ಸಾಮಾನ್ಯರ ಬೇಡಿಕೆ ಯಾಗಿದೆ.
ವರದಿ: ನವೀದ್ ಶಿರಾಳಕೊಪ್ಪ

