Politics
ಮುಸ್ಲಿಂ ಯುವಕನಿಂದ ಲಕ್ಷ್ಮೀ ಪೂಜೆ; ಮೆಚ್ಚುಗೆ!
ಮುಸ್ಲಿಂ ಯುವಕ ಹಾಗೂ ಆತನ ಸ್ನೇಹಿತರು ಹಿಂದೂ ಸಂಪ್ರದಾಯದಂತೆ ಲಕ್ಷ್ಮಿ ಪೂಜೆ ನೆರವೇರಿಸಿದ್ದಾರೆ.
ರಾಜ್ಯದಾದ್ಯಂತ ಇ -ಆಸ್ತಿ ತಂತ್ರಾಂಶ ಲೋಪ ಬಡವರಿಗೆ ಪ್ರಾಣ ಸಂಕಟ….
ಬೆಂಗಳೂರು. ಈ ಆಸ್ತಿ ಪ್ರಮಾಣ ಪತ್ರದಿಂದಾಗಿ ರಾಜ್ಯದ ಜನತೆ ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿರುವುದು ಸುಳ್ಳಲ್ಲ. ಸುಳ್ಳು ಹೇಳಿಕೊಂಡು ಆಸ್ತಿಯನ್ನು ಪರಭಾರೆ ಮಾಡುವವರ ವಿರುದ್ಧ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗ ಬೇಕೇ ಹೊರತು ಸಾಮಾನ್ಯ ಜನರ ಮೇಲೆ ಅಲ್ಲ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ. ಈ ನಡುವೆ ಈ ಆಸ್ತಿ ಪ್ರಮಾಣ ಪತ್ರ ಪಡೆದುಕೊಳ್ಳುವುದಕ್ಕೆ ತೀವ್ರ ಪ್ರಮಾಣದಲ್ಲಿ ಹಲವು ಮಂದಿ ಸಮಸ್ಯೆಯನ್ನು ಎದುರಿಸುತ್ತಾ ಇರುವುದು ಕಂಡು ಬಂದಿದ್ದು ಕಂದಾಯ ಇಲಾಖೆಯಲ್ಲಿರುವ ಲೋಪಗಳನ್ನು, ತಪ್ಪುಗಳನ್ನು ಮುಚ್ಚಿ ಹಾಕುವ ನಿಟ್ಟಿನಲ್ಲಿ ಸಚಿವರ ಕ್ರಮವನ್ನು…
ಹೊನಲುಬೆಳಕಿನ ವಾಲಿಬಾಲ್ ಪಂದ್ಯಾವಳಿ…..
ಶಿರಾಳಕೊಪ್ಪ:29-10-2024 ಪಟ್ಟಣದ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಭಾನುವಾರ ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಯೂಥ್ ಕ್ಲಬ್ ವತಿಯಿಂದ ನಡೆಸಲಾಯಿತು. ಪಂದ್ಯಾವಳಿಗೆ ಶಿಕಾರಿಪುರ ತಾಲೂಕು ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಟಾ ಶಿವಕುಮಾರ್ ಚಾಲನೆ ನೀಡಿ ಮಾತನಾಡಿದರು. ಮನುಷ್ಯ ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳಲು ಮಾನಸಿಕ ಮತ್ತು ದೈಹಿಕ ಸಾಧನೆ ಮುಖ್ಯ. ಈ ಕಪ್ಯೂಟರ್ ಮತ್ತು ಮೊಬೈಲ್ ಯುಗದಲ್ಲಿ ಕ್ರೀಡೆ ಎನ್ನುವುದು ಮಾಯವಾಗಿದೆ. ಇಂತಹ ಸಂದರ್ಭದಲ್ಲಿ ಯೂಥ್ ಕ್ಲಬ್ ನಂತಹ ಸಂಘಟನೆಯ ಯುವಕರು…
ಕನ್ನಡ ರಥಕ್ಕೆ ವೈಭವದ ಸ್ವಾಗತ ಕೋರಿದ ಶಿಕಾರಿಪುರ ತಾ// ಜನತೆ….
ಶಿಕಾರಿಪುರ: 26-10-2024 ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ಯಾತ್ರೆ ಇಂದು ಶಿಕಾರಿಪುರ ತಾಲ್ಲೂಕಿಗೆ ಆಗಮಿಸಿತು. ತಾಲ್ಲೂಕಿನ ವಿವಿಧ ಸರಕಾರಿ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಪರ ಸಂಘಟನೆಗಳಿಂದ ರಥಕ್ಕೆ ಅದ್ದೂರಿ ಸ್ವಾಗತ ಕೋರಲಾಯಿತು. ಶಿರಾಳಕೊಪ್ಪದ ವಾಲ್ಮೀಕಿ ಭವನ ಹತ್ತಿರ ಪಟ್ಟಣದ ಗಡಿ ಭಾಗಕ್ಕೆ ಆಗಮಿಸಿದ ಕನ್ನಡದ ರಥವನ್ನು ಸ್ಥಳೀಯ ಪುರಸಭೆ ಮುಖ್ಯ ಅಧಿಕಾರಿಗಳು,…
ಶಿರಾಳಕೊಪ್ಪಕ್ಕೆ ಆಗಮಿಸಲಿರುವ ಕನ್ನಡ ರಥ ಯಾತ್ರೆ….ಅದ್ದೂರಿ ಸ್ವಾಗತಕ್ಕೆ ಕ ಸಾ ಪ ಹೋಬಳಿ ಘಟಕ ತಯಾರಿ….
ಶಿರಾಳಕೊಪ್ಪ: 25-10-2024 ಡಿಸೇಂಬರ್ 20, 21 ಹಾಗೂ 22 ರಂದು ಮಂಡ್ಯ ದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯ ದಾದ್ಯಂತ ಜಾಗೃತಿ ಮೋಡಿಸುವ ಸಲುವಾಗಿ ಆಗಮಿಸಲಿರುವ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ಯಾತ್ರೆಯೂ ದಿನಾಂಕ 26-10-2024 ರಂದು ಮಧ್ಯಾಹ್ನ 12:30 ಕ್ಕೆ ಪಟ್ಟಣಕ್ಕೆ ಆಗಮಿಸಲಿದ್ದು ಅದ್ದೂರಿ ಸ್ವಾಗತಕ್ಕೆ ಕ ಸಾ ಪ ಹೋಬಳಿ ಘಟಕ ತಯಾರಿ ನಡೆಸಿದೆ ಎಂದು ಕರ್ನಾಟಕ ಸಾಹಿತ್ಯ ಪರಿಷತ್ತು ಶಿರಾಳಕೊಪ್ಪ ಹೋಬಳಿ ಘಟಕದ ಕಾರ್ಯದರ್ಶಿ…
ಚಂದ್ರಕಾಂತ್ ರೇವಣ್ ಕರ್ ದೂರಿನ ಆಧಾರದ ಮೇಲೆ ಕೊಳತು ನಾರುವ ಯಾತ್ರ ನಿವಾಸ ಕ್ಕೆ ಭೇಟಿ ಕೊಟ್ಟ ಲೋಕಾಯುಕ್ತ ಅಧಿಕಾರಿ ಸುರೇಶ್….
ಯಾತ್ರಿನಿವಾಸ ಹೋಗಿ ಕೊಳಚೆ ನಿವಾಸವಾಗಿದೆ. ಶಿಕಾರಿಪುರ:24-10-2024 ಪಟ್ಟಣದ ಶ್ರೀಹುಚ್ಛರಾಯಸ್ವಾಮಿ ಕೆರೆ ಪಕ್ಕದಲ್ಲಿ 15 ವರ್ಷದ ಹಿಂದೆ ಸಾವಿರಾರು ಕೋಟಿ ಹಣ ಖರ್ಚುಮಾಡಿ ಕೆರೆ ಅಭಿವೃದ್ದಿ ಜೊತೆಗೆ ನೂರಾರು ಕೋಟಿ ಹಣ ಖರ್ಚುಮಾಡಿ ಸುಮಾರು 3 ಎಕರೆ ಭೂಮಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ವಸತಿ ಗೃಹ ಕಟ್ಟಿರುತ್ತಾರೆ. ಈ ಯಾತ್ರಿನಿವಾಸದಲ್ಲಿ ಸುಮಾರು 10 ರಿಂದ 15 ದೊಡ್ಡ ದೊಡ್ಡ ಹೈಟೆಕ್ ರೂಮ್ ಹಾಲ್, ಐಷಾರಾಮಿ ಮಂಚ ಬೆಡ್, ಹೈಟೆಕ್ ಬಾತ್ ರೂಮ್ ಇರುವಂತಹ ಯಾತ್ರಿನಿವಾಸ ಕೇವಲ 2 ವರ್ಷ…
ಹಿರಿಯ ಪತ್ರಕರ್ತ, ಮಾಧ್ಯಮ ಮಿತ್ರ ಜಿ.ಕೆ ಹೆಬ್ಬಾರ್…ಅನಾರೋಗ್ಯ ವಿಚಾರಿಸಿದ ಗಣ್ಯರು….
ಶಿಕಾರಿಪುರ:24-10-2024 ತಾಲ್ಲೂಕಿನ ಹಿರಿಯ ಮತ್ತು ಸಕ್ರಿಯ ಪತ್ರಕರ್ತ, ಸಮಾಜಸೇವಕ ಗೋಪಾಲ್ ಕೃಷ್ಣ ಹೆಬ್ಬಾರ್ ರವರು ಇತ್ತೀಚಿಗೆ ಅನಾರೋಗ್ಯದಿಂದ ಬಳಲುತ್ತಿದ್ದು ಶ್ರೀಯುತರನ್ನು ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಮೊನ್ನೆಯಷ್ಟೇ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ಶ್ರೀಯುತರನ್ನು ಸಂಪೂರ್ಣ ಬೇಗ ಗುಣ ಮುಖರಾಗಿ ಹಿಂದಿನಂತೆ ಓಡಾಡಿ ಲವಲವಿಕೆಯಿಂದ ಸಮಾಜ ಸೇವೆಯಲ್ಲಿ ಮತ್ತೆ ಬೇಗ ತೊಡಗಿಸಿಕೊಳ್ಳಬೇಕೆಂದು ತೊಗರ್ಸಿಯ ಶ್ರೀ ಮಲ್ಲಿಕಾರ್ಜುನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದವನ್ನು ನೀಡಿ ತೊಗರ್ಸಿಯ ಮಳೆಮಠದ ಶ್ರೀ ಮಹಾಂತದೇಶಿಕೇಂದ್ರ ಸ್ವಾಮಿಗಳು…
ನೇರ ನಗದು ಹಣ ಬದಲಿಗೆ ಆಹಾರ ಕಿಟ್ ಗಳು ನೀಡುವ ಕುರಿತು ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ: ಮುನಿಯಪ್ಪ…..
ಬೆಂಗಳೂರು:22-10-2024 ಡಿ ಬಿ ಟಿ ಪ್ರಾರಂಭವಾದ 2023ರ ಜುಲೈಯಿಂದ 2024ರ ಜುಲೈವರೆಗೆ 8433.11 ಕೋಟಿ ಹಣ ವರ್ಗಾವಣೆ ಫಲಾನುಭವಿಗಳಿಗೆ ಮಾಡಲಾಗಿದೆ. ಡಿಬಿಟಿ ಮೂಲಕ ಪ್ರತಿಯೊಬ್ಬರಿಗೆ 170 ರೂ ಗಳನ್ನು ಕೊಡುತ್ತಿದ್ದೇವೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಡಿಬಿಟಿ ಹಣ ಬಾಕಿ ಇದೆ. ಶೀಘ್ರವೇ ಹಣ ಫಲಾನುಭವಿಗಳ ಖಾತೆಗಳಿಗೆ ವರ್ಗಾವಣೆ ಮಾಡಲಾಗುವುದು. ಪಡಿತರ ಚೀಟಿ ಪರಿಷ್ಕರಣೆ ಪ್ರಗತಿ ಪರಿಶೀಲನೆ ಸಭೆ ವೇಳೆ ಮಾತನಾಡಿದ ಆಹಾರ ಸಚಿವ ಕೆ. ಎಚ್ ಮುನಿಯಪ್ಪ ಸರ್ವರ್ ಸಮಸ್ಯೆ ಇದೆ ಇಂದಿನಿಂದ ಆ ಸಮಸ್ಯೆಯೂ…
ರಾಜ್ಯಕ್ಕೆ ಬೆಳಕು ನೀಡಿದವರ ಬದುಕು ಹಸನಾಗಿಸುವ ಸಂಕಲ್ಪ ನನ್ನದಾಗಿದೆ”
ರಾಜ್ಯಕ್ಕೆ ಬೆಳಕು ನೀಡಿದವರ ಬದುಕು “ರಾಜ್ಯಕ್ಕೆ ಬೆಳಕು ನೀಡಿದವರ ಬದುಕು ಹಸನಾಗಿಸುವ ಸಂಕಲ್ಪ ನನ್ನದಾಗಿದೆ” ಶರಾವತಿ ಮುಳುಗಡೆ ಪ್ರದೇಶದ ನಿರಾಶ್ರಿತ ಸಂತ್ರಸ್ತ ಕುಟುಂಬಗಳು ಒಗ್ಗೂಡಿ ಸಂಯುಕ್ತ ವೇದಿಕೆ ಮೂಲಕ ಸಾಗರದ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಇಂದು ಭೇಟಿ ನೀಡಿ ಅವರ ಸಮಗ್ರ ಬೇಡಿಕೆಗಳನ್ನು ಸ್ವೀಕರಿಸಲಾಯಿತು. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಹಾಗೂ ಕೇಂದ್ರದಲ್ಲಿ ಪ್ರಸ್ತುತ ಮತ್ತು ಹಿಂದಿನ ಅವಧಿಯ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ಮುಳುಗಡೆ…
ಪಡಿತರಕ್ಕಾಗಿ ಪರದಾಡುತ್ತಿರುವ ಪ್ರಜೆಗಳು….ನ್ಯಾಯಬೆಲೆ ಅಂಗಡಿಗಳ ಮುಂದೆ ಕ್ಯೂವೊ ಕ್ಯೂ.
ಬೆಂಗಳೂರು:21-10-2024 ರಾಜ್ಯದಲ್ಲಿ ಪಡಿತರ ವಿತರಣೆಗಾಗಿ ಹಿಂದಿದ್ದ ಕೇಂದ್ರ ಸರ್ಕಾರದ ಎನ್ಐಸಿ ಸರ್ವರ್ ಗಳನ್ನು ಬದಲಾಯಿಸಿ ರಾಜ್ಯಸರಕಾರದ ವತಿಯಿಂದ ಹೊಸ ಸರ್ವರಗಳನ್ನು ಅಳವಡಿಸುವ ಕಾರ್ಯ ಅಕ್ಟೊಬರ್ ತಿಂಗಳ ಪ್ರಾರಂಭದಿಂದ ನಡೆದ ಕಾರಣ ಅಕ್ಟೊಬರ್ ತಿಂಗಳ 18ತಾರೀಕಿನವರೆಗೂ ರಾಜ್ಯದಾದ್ಯಂತ ಪಡಿತರ ವಿತರಣೆಯಲ್ಲಿ ವಿಳಂಬ ಆಯಿತು. ಬಡವರ, ಹಸಿದ ಜನರ ಹೊಟ್ಟೆಗೆ ಅನ್ನ ವನ್ನು ನೀಡುವ ರಾಜ್ಯ ಸರಕಾರದ ಮಹತ್ವಕಾಂಕ್ಷಿ ಯೋಜನೆ ಅನ್ನಭಾಗ್ಯಕ್ಕೆ ಸರ್ವರ್ ಕಾಟ ಕೊಡುತ್ತಿರುವುದು ಜನರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಜನಸಾಮಾನ್ಯರು ರಾಜಕಾರಣಿ ಗಳು ಮತ್ತು ಅಧಿಕಾರಿಗಳಿಗೆ ಹಿಡಿ…

