ಶಿರಾಳಕೊಪ್ಪದಲ್ಲಿ ಹೈಟೆಕ್ ಮೆಡಿಲೆನ್ಸ್ ಡಯಾಗ್ನೋಸ್ಟಿಕ್ ಸೆಂಟರ್ ಉದ್ಘಾಟನೆ: ಗ್ರಾಮೀಣ ಜನರಿಗೆ ಇನ್ಮುಂದೆ ಸ್ಥಳೀಯವಾಗಿಯೇ ಸಿಗಲಿದೆ ಗುಣಮಟ್ಟದ ವೈದ್ಯಕೀಯ ಸೇವೆ…

The Siasat News - Images

.ಶಿರಾಳಕೊಪ್ಪ:22/2/2026

ಗ್ರಾಮೀಣ ಪ್ರದೇಶದ ಜನರಿಗೆ ರೋಗನಿರ್ಣಯ ಪರೀಕ್ಷೆಗಿಂತ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರುವ ಪ್ರಯಾಣ ವೆಚ್ಚವೇ ಹೊರೆಯಾಗುತ್ತಿತ್ತು. ಇದನ್ನು ಮನಗಂಡು ಶಿರಾಳಕೊಪ್ಪದ ಗಾಂಧಿನಗರದಲ್ಲಿ ಆರಂಭವಾಗಿರುವ ‘ಮೆಡಿಲೆನ್ಸ್ ಡಯಾಗ್ನೋಸ್ಟಿಕ್ ಸೆಂಟರ್‘ ಗ್ರಾಮೀಣ ಜನರಿಗೆ ವರದಾನವಾಗಲಿದೆ,” ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

ಪಟ್ಟಣದ ಗಾಂಧಿನಗರದಲ್ಲಿ ಅತ್ಯಾಧುನಿಕ ಉಪಕರಣಗಳನ್ನೊಳಗೊಂಡ ‘ಮೆಡಿಲೆನ್ಸ್ ಡಯಾಗ್ನೋಸ್ಟಿಕ್ ಸೆಂಟರ್’ ಉದ್ಘಾಟಿಸಿ ಮಾತನಾಡಿದ ಅವರು ಶಿರಾಳಕೊಪ್ಪ ಸೇರಿದಂತೆ ಆನವಟ್ಟಿ, ಸೊರಬ ಹಾಗೂ ಹಿರೇಕೆರೂರು ಚಿಕ್ಕೇರೂರು ಭಾಗದ ನಾಗರಿಕರು ಇನ್ನು ಮುಂದೆ ಸಣ್ಣಪುಟ್ಟ ಪರೀಕ್ಷೆಗಳಿಗೂ ದೂರದ ಜಿಲ್ಲಾ ಕೇಂದ್ರಗಳಿಗೆ ತೆರಳಿ ಸಮಯ ಹಾಗೂ ಹಣ ವ್ಯಯಿಸುವ ಅಗತ್ಯವಿಲ್ಲ. ಸ್ಥಳೀಯವಾಗಿ ಗುಣಮಟ್ಟದ ವೈದ್ಯಕೀಯ ಸೇವೆ ಲಭ್ಯವಾಗುತ್ತಿರುವುದು ಶ್ಲಾಘನೀಯ ಬೆಳವಣಿಗೆ ಎಂದರು.

ಗ್ರಾಮೀಣ ಆರೋಗ್ಯ ವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗಬೇಕು ಎಂಬುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಶಯವಾಗಿದೆ. ಈ ಭಾಗದ ಜನತೆಗೆ ಉತ್ತಮ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಇಷ್ಟು ದೊಡ್ಡ ಮೊತ್ತದ ಬಂಡವಾಳ ಹೂಡಿ ಕೇಂದ್ರವನ್ನು ಆರಂಭಿಸಿರುವ ಮೆಡಿಲೆನ್ಸ್ ತಂಡದ ಕಾರ್ಯ ಮೆಚ್ಚುವಂತದ್ದು ಎಂದು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ತೊಗರ್ಸಿ ಮಳೆ ಹಿರೇಮಠದ ಕಿರಿಯ ಸ್ವಾಮೀಜಿ, ಕಡೆ ನಂದಿಹಳ್ಳಿ ಪುಣ್ಯಶ್ರಮದ ಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಎಂ.ಎನ್. ಪಿಕಲ್ಸ್ ಮಾಲೀಕರಾದ ರಾಮಚಂದ್ರ ಶೆಟ್ಟಿ, ಸೊರಬ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭು ಸಾಹುಕಾರ್, ಉದ್ರಿ ವೈದ್ಯಾಧಿಕಾರಿ ಡಾ. ಮಹೇಶ್, ತೊಗರ್ಸಿ ವೈದ್ಯಾಧಿಕಾರಿ ಡಾ. ಗಣೇಶ್,ಡಾ.ಮುನಾವರ್, ಡಾ. ಶಿವಕುಮಾರ್, ಡಾ. ಮನು ಮಾಗನೂರು, ಡಾ.ಆದರ್ಶ್ ಹಾಗೂ ಮೆಡಿಲೆನ್ಸ್ ಆಡಳಿತ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ:ನವೀದ್ ಶಿರಾಳಕೊಪ್ಪ

Share the news!

Leave a Reply

Your email address will not be published. Required fields are marked *