The Siasat News - Images

ತೊಗರ್ಸಿಯ ಡಿಸಿಸಿ ಬ್ಯಾಂಕ್ ನಲ್ಲಿ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ…

ಶಿರಾಳಕೊಪ್ಪ /ತೊಗರ್ಸಿ:21/01/2026 ಹತ್ತಿರದ ತೋಗರ್ಸಿ ಗ್ರಾಮದಲ್ಲಿ ದಿನಾಂಕ 20.01.2026 ಮಂಗಳವಾರ ರಂದು ಡಿಸಿಸಿ ಬ್ಯಾಂಕಿನಲ್ಲಿ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಅಮೂಲ್ಯ ಆರ್ಥಿಕ ಸಾಕ್ಷರತಾ ಸೆಂಟರ್ ಶಿಕಾರಿಪುರದ ಶ್ರೀ ಗುಡದಯ್ಯ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಎಲ್ಲಾ ಸ್ವಸಹಾಯ ಗುಂಪಿನ ಮಹಿಳೆಯರಿಗೆ ಆರ್ಥಿಕತೆಯಿಂದ ಮುಕ್ತರಾಗಿ ಸಹಜ ಜೀವನ ನಡೆಸಲು ಹಣವನ್ನು ಹೇಗೆ ಗಳಿಸಬೇಕು ಗಳಿಸಿದ ಹಣವನ್ನು ಹೇಗೆ ಉಳಿಸಬೇಕು ಉಳಿಸಿದ ಹಣವನ್ನು ಹೇಗೆ ಬಳಸಬೇಕು ಎಂಬ ಮಾಹಿತಿಯ ಜೊತೆಗೆ ಜೀವವಿಮೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮಾಡಿಸುವುದಾಗಿ ಮಾಹಿತಿ…

Read More
The Siasat News - Images

ಶಿವಾಚಾರ್ಯ ಸ್ವಾಮೀಜಿಗಳ ಸದ್ಬೋಧನಾ ಪಾದಯಾತ್ರೆ: ಧಾರ್ಮಿಕ ಜಾಗೃತಿಗಾಗಿ ಸ್ವಾಮೀಜಿಗಳ ನಡಿಗೆ…

ಶಿರಾಳಕೊಪ್ಪ: 19/01/2026 ಧರ್ಮದ ಮೂಲ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮತ್ತು ಸಾಮಾಜಿಕ ಸಾಮರಸ್ಯವನ್ನು ಎತ್ತಿಹಿಡಿಯುವ ಉದ್ದೇಶದಿಂದ ‘ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ’ ಹಾಗೂ ‘ಕಡೆನಂದಿಹಳ್ಳಿಯ ಶ್ರೀ ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮ‘ದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಕಡೆನಂದಿಹಳ್ಳಿ ಗ್ರಾಮದಲ್ಲಿ ಅದ್ಧೂರಿ ‘ ಶಿವಾಚಾರ್ಯರ ಸದ್ಬೋಧನಾ ಪಾದಯಾತ್ರೆ’ ನಡೆಯಿತು. ಕಡೆನಂದಿಹಳ್ಳಿಯ ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಆರಂಭವಾದ ಈ ಪಾದಯಾತ್ರೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಪಾದಯಾತ್ರೆಯ ಉದ್ದಕ್ಕೂ ವಿವಿಧ ಜಿಲ್ಲೆಗಳ ಮಠಾಧೀಶರು ಮತ್ತು ನೂರಾರು ಭಕ್ತಾದಿಗಳು…

Read More
The Siasat News - Images

45000ಸಾವಿರಕ್ಕೂ ಹೆಚ್ಚು ನಿರುದ್ಯೋಗಿಗಳಿಗೆ ಉದ್ಯೋಗಿಗಳಾಗಿ ಮಾಡಿದ ಕೀರ್ತಿ ಆಳ್ವಾಸ್ ವಿದ್ಯಾ ಸಂಸ್ಥೆಗಿದೆ- ವಿವೇಕ್ ಆಳ್ವಾ…

ಶಿರಾಳಕೊಪ್ಪ:18/1/2026 ಆಳ್ವಾಸ್ ವಿದ್ಯಾ ಸಂಸ್ಥೆ ಕಳೆದ 18 ವರ್ಷದಿಂದ ಉದ್ಯೋಗ ಮೇಳಗಳನ್ನು ರಾಜ್ಯ ಹಾಗೂ ಅಂತರಾಜ್ಯ ಮಟ್ಟದಲ್ಲಿ ಆಯೋಜಿಸಿ 45,000ಕ್ಕೂ ಹೆಚ್ಚು ನಿರುದ್ಯೋಗಿ ಗಳನ್ನು ಉದ್ಯೋಗಗಳು ಲಭಿಸುವಂತೆ ಮಾಡಿದೆ ಎಂದು ಆಳ್ವಾಸ್ ವಿದ್ಯಾ ಸಂಸ್ಥೆ ಮೊಡಬಿದರೆಯ ವಿವೇಕ್ ಆಳ್ವಾ ಹೇಳಿದರು. ಪಟ್ಟಣದ ನೇರಲಗಿ ಸಮುದಾಯ ಭವನದಲ್ಲಿ ಶನಿವಾರ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಶಿಕಾರಿಪುರ ಹಾಗೂ ಆಳ್ವಾಸ್ ಚಿಕ್ಕನ ಪ್ರತಿಷ್ಠಾನ ಮೂಡಬಿದರೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಉದ್ಯೋಗ ಮೇಳದ ಪೂರ್ವಭಾವಿ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು ಶಿಕಾರಿಪುರ ತಾಲ್ಲೂಕಿನ…

Read More
The Siasat News - Images

ಶಿರಾಳಕೊಪ್ಪದ ಹಳಿಯೂರು ಸರ್ಕಾರಿ ಉರ್ದು ಶಾಲೆಯಲ್ಲಿ ಕಲಿಕಾ ಹಬ್ಬ…

ಶಿರಾಳಕೊಪ್ಪ:14/1/2026 ಪಟ್ಟಣದ ಹಳಿಯೂರು ಪ್ರದೇಶದಲ್ಲಿರುವ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಿರಾಳಕೊಪ್ಪ ಉರ್ದು 3 ಕ್ಲಸ್ಟರ್ ಮಟ್ಟದ ಶಾಲೆಗಳ ಮಕ್ಕಳ ಕಲಿಕಾ ಹಬ್ಬ (ಎಫ್‌ಎಲ್‌ಎನ್) ಕಾರ್ಯಕ್ರಮ ನಡೆಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಪಟ್ಟಣದ ಉರ್ದು 3 ವಿಭಾಗದ ಕ್ಲಸ್ಟರ್ ಲೆವೆಲ್ ಅಧಿಕಾರಿ ನಾಸಿರ್ ಅಹ್ಮದ್ ‘ಪ್ರಾಥಮಿಕ ಹಂತದಲ್ಲೇ ಮಕ್ಕಳಲ್ಲಿ ಓದು, ಬರವಣಿಗೆ ಮತ್ತು ಗಣಿತದ ಮೂಲಭೂತ ಕೌಶಲ್ಯ ಗಳನ್ನು ಬಲಪಡಿಸುವುದೇ ಎಫ್‌ಎಲ್‌ಎನ್ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.ಇಂತಹ ಕಲಿಕಾ ಹಬ್ಬಗಳು ಮಕ್ಕಳಲ್ಲಿ ಕಲಿಕೆಗೆ ಆಸಕ್ತಿ ಮೂಡಿಸಲು…

Read More
The Siasat News - Images

ಸರ್ಕಾರಗಳಿಗೆ ಎಚ್ಚರಿಸುವ ಶಕ್ತಿ ಪತ್ರಕರ್ತರಿಗಿದೆ- ಬಿ ವೈ ವಿಜಯೇಂದ್ರ…

ಶಿಕಾರಿಪುರ:3/1/2026 ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಕರೆಯಲ್ಪಡುವ ಪತ್ರಿಕೋದ್ಯಮವು ಸರ್ಕಾರ ಮತ್ತು ವ್ಯವಸ್ಥೆಯನ್ನು ಎಚ್ಚರಿಸಿ ಸರಿದಾರಿಗೆ ತರುವ ಶಕ್ತಿ ಹೊಂದಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ತಾಲ್ಲೂಕಿನ ಶಾಸಕ ಬಿ ವೈ ವಿಜಯೇಂದ್ರ ನುಡಿದರು. ಶನಿವಾರ ಶಿಕಾರಿಪುರ ತಾಲ್ಲೂಕು ಕಾರ್ಯ ನಿರತ ಪತ್ರ ಕರ್ತರ ಸಂಘದ ನೂತನ ಪಧಾಧಿ ಕಾರಿಗಳ ಪದ ಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ವರ್ತಮಾನ ಕಾಲದಲ್ಲಿ ಪತ್ರಕರ್ತರ ಮೇಲಿನ ಜವಾಬ್ದಾರಿ ಹೆಚ್ಚಾಗಿದೆ. ದೃಶ್ಯ ಮಾಧ್ಯಮಗಳ ಆರ್ಭಟದ ನಡುವೆ ಇವತ್ತಿಗೂ…

Read More
The Siasat News - Images

ವಿಜ್ಞಾನ ವಿಷಯವಾಗಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ವಿಜ್ಞಾನ ವಸ್ತು ಪ್ರದರ್ಶನ ಉತ್ತಮ ವೇದಿಕೆ- ಶ್ರೀಮತಿ ಮಮತಾ ಸಾಲಿ…

ಶಿರಾಳಕೊಪ್ಪ:17/12/2025. ಪಟ್ಟಣದ ಮೌಲಾನ ಆಜಾದ್ ಮಾದರಿ ಶಾಲೆಯ ಮಕ್ಕಳ ವತಿ ಯಿಂದ ನಡೆದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ ಶಿಕ್ಷಕಿ ಶ್ರೀ ಮತಿ ಮಮತಾ ಸಾಲಿ ಮಕ್ಕಳ ಜ್ಞಾನ ವೃದ್ಧಿಗೆ ಪ್ರದರ್ಶನಗಳು ಪೂರಕವಾಗಿವೆ. ಅವರಲ್ಲಿ ತಂತ್ರಜ್ಞಾನ, ಪರಿಸರ ಕಾಳಜಿ ಹಾಗೂ ಚರಿತ್ರೆಯ ಬಗ್ಗೆ ಆಸಕ್ತಿ ಬೆಳೆಯುತ್ತದೆ. ಅವರಲ್ಲಿರುವ ಸೃಜನಶೀಲತೆಗೆ ಉತ್ತೇಜನ ಸಿಗುತ್ತದೆ. ವಿಜ್ಞಾನ ಎಂದರೆ ಒಂದು ಸಂಜೀವಿನಿಯಂತೆ ಬದುಕಿನಲ್ಲಿ ನಮಗೆ ಜ್ಞಾನ ಹಾಗೂ ಸರಿಯಾದ ಪ್ರಜ್ಞೆ ಬರಬೇಕೆಂದರೆ ವಿಜ್ಞಾನದ…

Read More
The Siasat News - Images

ಡಿ19ಕ್ಕೆ ನಡೆಯಲಿದೆ ಬಜ್ಮೆ ಉಮ್ಮೀದ್ ಅದೀಬಿ ಶಿರಾಳಕೊಪ್ಪ ವತಿಯಿಂದ ಮೂರನೇ ಬಾರಿ ರಾಷ್ಟ್ರೀಯ ಕವಿ ಸಮ್ಮೇಳನ….

ಶಿರಾಳಕೊಪ್ಪ:13/12/2025 ಪಟ್ಟಣದ ಸಾಂಸ್ಕೃತಿಕ ವೇದಿಕೆ ಬಜ್ಮೆ ಉಮ್ಮೀದ್ ಅದೀಬಿ ವತಿಯಿಂದ ಪ್ರತಿ ವರ್ಷ ನಡೆಯುವ ಕವಿ ಸಮ್ಮೇಳನ ಇದೇ ಡಿಸೆಂಬರ್ 19 ರ ಶುಕ್ರವಾರ ರಾತ್ರಿ ನಡೆಯಲಿದೆ ಎಂದು ವೇದಿಕೆ ಅಧ್ಯಕ್ಷ ಮುಹಮ್ಮದ್ ಅಯೂಬ್ ಕೆ ಜಿ ಎನ್ ತಿಳಿಸಿದರು. ಊರಿನ ಮಧ್ಯ ಭಾಗದಲ್ಲಿರುವ ಹಜರತ್ ಟಿಪ್ಪು ಸುಲ್ತಾನ್ ಮ್ಯಾರೇಜ್ ಹಾಲ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಕವಿ ಸಮ್ಮೇಳನದಲ್ಲಿ ದೇಶ ಹಾಗೂ ರಾಜ್ಯದ ವಿವಿಧ ಕಡೆಗಳಿಂದ ಪ್ರಖ್ಯಾತ ಕವಿ ಗಳು ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸ್ಥಳೀಯ ಮಕ್ಕಳಿಗೆ…

Read More
The Siasat News - Images

ಶಿಕಾರಿಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನ ಸಾರಥಿಯಾಗಿ ಶಿರಾಳಕೊಪ್ಪ ದ ನವೀನ್ ಕುಮಾರ್(ಇಂಜಿ) ಆಯ್ಕೆ…

ಶಿಕಾರಿಪುರ:8/12/2025. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿಕಾರಿಪುರ ತಾಲ್ಲೂಕು ಶಾಖೆಯ 2025 -28ರ ಸಾಲಿನ ಕಾರ್ಯಕಾರಿ ಸಮಿತಿಗೆ ಡಿಸೆಂಬರ್ 8ರಂದು ನಡೆದ ಚುನಾವಣೆಯಲ್ಲಿ ಶಿರಳಕೊಪ್ಪದ ಪತ್ರಕರ್ತ ನವೀನ್ ಕುಮಾರ್ ಎಂ ವರದಿಗಾರರು ವಿಜಯವಾಣಿ ಅವರು ತಾಲೂಕ ಅಧ್ಯಕ್ಷರಾಗಿ, ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಮಂಜುನಾಥ್ ಮಠದ ವರದಿಗಾರರು ಎಚ್ಚರಿಕೆ ದಿನಪತ್ರಿಕೆ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಹೆಚ್ ಯು ವೈದ್ಯನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ಎಸ್ ಹಾಲಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಕೆಎಸ್ ಹುಚ್ಚರಾಯಪ್ಪ, ಜಿಲ್ಲಾ ಕಾರ್ಯದರ್ಶಿ…

Read More
The Siasat News - Images

ಶಿರಾಳಕೊಪ್ಪ ವಿರಕ್ತಮಠಕ್ಕೆ ನೂತನ ಶ್ರೀ ಗಳ ನಿಯುಕ್ತಿ… ಉತ್ತರಾಧಿಕಾರಿಯಾಗಿ ಹುಕ್ಕೇರಿ ಮಠದ ಶ್ರೀ ವೀರ ಬಸವ ದೇವರು ಶಿರಾಳಕೊಪ್ಪ ಪುರ ಪ್ರವೇಶ….

ಶಿರಾಳಕೊಪ್ಪ:18-11-2025 ಪಟ್ಟಣದ ಐತಿಹಾಸಿಕ ಶ್ರೀ ಕೋರಿ ಟೋಪಿ ವಿರಕ್ತ ಮಠಕ್ಕೆ ನೂತನ ಉತ್ತರಾಧಿಕಾರಿಗಳಾಗಿ ಶ್ರೀ ವೀರ ಬಸವ ದೇವರು ಹುಕ್ಕೇರಿ ಮಠ ಇವರು ಶಿರಾಳಕೊಪ್ಪಕ್ಕೆ ಪುರ ಪ್ರವೇಶ ಗೊಳ್ಳಲಿದ್ದಾರೆಂದು ಮಠಾಧ್ಯಕ್ಷರಾದ ಶ್ರೀ ಮ. ನಿ. ಪ್ರ ಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು. ಶ್ರೀ ಕೋರಿಟೋಪಿ ವಿರಕ್ತ ಮಠ ಶಿರಾಳಕೊಪ್ಪ ದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಶ್ರೀಗಳು ಕಳೆದ ಸುಮಾರು 40ವರ್ಷ ಗಳಿಂದ ಮಠದ ಗುರುಗಳಾಗಿ, ಪೀಠಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದು ಪೂಜಾನುಷ್ಠಾನ ಕಾರ್ಯ ಕೈ ಗೊಳ್ಳಲು ಒಲವು ಮಾಡಿದ…

Read More
The Siasat News - Images

ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳಿಂದ ಮಧುಮೇಹ ಜಾಗೃತಿ…

ಶಿರಾಳಕೊಪ್ಪ:14/11/2025 ಲಯನ್ಸ್ ಕ್ಲಬ್ ಶಿರಾಳಕೊಪ್ಪ, ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ, ಸ್ವಾಮಿ ವಿವೇಕಾನಂದ ಶಾಲೆ, ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಮತ್ತುವಿಶ್ವ ಮಧುಮೇಹ ದಿನಾಚರಣೆಯನ್ನು ವಿಶೇಷ ವಾಗಿ ಆಚರಿಸಲಾಯಿತು. ಮಕ್ಕಳೇ ಜಾಗೃತಿ ರಾಯಭಾರಿಗಳಾಗಿ ವಾಕಥಾನ್ ಮೂಲಕ ಮಧುಮೇಹ ಅರಿವು ಮೂಡಿಸುವ ಘೋಷಣೆಯೊಂದಿಗೆ ಬಿತ್ತಿ ಪತ್ರ ವಿತರಿಸಿ ವಿಶಿಷ್ಟ ವಾಗಿ ಎರಡೂ ದಿನಾಚರಣೆಗಳನ್ನು ವಿನೂತನ ವಾಗಿ ಆಚರಿಸಿದರು. ವಾಕಥಾನ್ ನಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಲಯನ್ಸ್ ಕ್ಲಬ್ ಸದಸ್ಯರು, ಶಂಕರ ಕಣ್ಣಿನ ಆಸ್ಪತ್ರೆ…

Read More