ಶಿಕಾರಿಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನ ಸಾರಥಿಯಾಗಿ ಶಿರಾಳಕೊಪ್ಪ ದ ನವೀನ್ ಕುಮಾರ್(ಇಂಜಿ) ಆಯ್ಕೆ…

The Siasat News - Images

ಶಿಕಾರಿಪುರ:8/12/2025.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿಕಾರಿಪುರ ತಾಲ್ಲೂಕು ಶಾಖೆಯ 2025 -28ರ ಸಾಲಿನ ಕಾರ್ಯಕಾರಿ ಸಮಿತಿಗೆ ಡಿಸೆಂಬರ್ 8ರಂದು ನಡೆದ ಚುನಾವಣೆಯಲ್ಲಿ ಶಿರಳಕೊಪ್ಪದ ಪತ್ರಕರ್ತ ನವೀನ್ ಕುಮಾರ್ ಎಂ ವರದಿಗಾರರು ವಿಜಯವಾಣಿ ಅವರು ತಾಲೂಕ ಅಧ್ಯಕ್ಷರಾಗಿ, ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಮಂಜುನಾಥ್ ಮಠದ ವರದಿಗಾರರು ಎಚ್ಚರಿಕೆ ದಿನಪತ್ರಿಕೆ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

The Siasat News - Images

ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಹೆಚ್ ಯು ವೈದ್ಯನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ಎಸ್ ಹಾಲಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಕೆಎಸ್ ಹುಚ್ಚರಾಯಪ್ಪ, ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಾರಾ ಶ್ರೀನಿವಾಸ್ ಹಾಗೂ ಚುನಾವಣಾ ಅಧಿಕಾರಿ ಟೆಲೆಕ್ಸ್ ರವಿ ಕುಮಾರ್ ರವರ ನೇತೃತ್ವದಲ್ಲಿ ನಡೆದ ಚುನಾವಣೆ ಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ತಾಲ್ಲೂಕಿನ24 ಜನ ಪತ್ರಕರ್ತರ ಪೈಕಿ ಒಟ್ಟು ಒಂಬತ್ತು ಜನ ಉಮ್ಮೆದುವಾರರಾಗಿದ್ದು ಕೊನೆ ಗಳಿಗೆಯಲ್ಲಿ ನಡೆದ ಬದಲಾವಣೆಯಿಂದಾಗಿ ನವೀನ್ ಕುಮಾರ್ ಶಿರಾಳಕೊಪ್ಪ ರವರನ್ನು ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಮಾಡಲಾಯಿತು. .

ಈ ಸಂಧರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಎಚ್. ಯು ವೈದ್ಯನಾಥ ಚುನಾವಣೆಯಿಲ್ಲದೆ ಎಲ್ಲರೂ ಸೇರಿ ಒಮ್ಮತದಿಂದ ಅವಿರೋಧವಾಗಿ ತಾಲ್ಲೂಕು ಅಧ್ಯಕ್ಷರನ್ನ ಆಯ್ಕೆ ಮಾಡಿದ್ದು ಮಾದರಿ ಕಾರ್ಯ. ಆಯ್ಕೆಯಾದಂತಹ ಪದಾಧಿಕಾರಿಗಳು ಸಂಘದ ಸದಸ್ಯರೊಂದಿಗೆ ಸಂಘದ ಚಟುವಟಿಕೆಗಳಲ್ಲಿ ಸಕ್ರೀಯಾವಾಗಿ ಭಾಗವಹಿಸುವುದರ ಮೂಲಕ ಸಂಘವನ್ನು ಗಟ್ಟಿಗೊಳಿಸಬೇಕು.

ನಮ್ಮ ಕಾರ್ಯಾವಧಿಯಲ್ಲಿ ಜಿಲ್ಲೆಯ ಪತ್ರಕರ್ತರಿಗೆ ವಿಭಿನ್ನ ಕಾರ್ಯಕ್ರಮಗಳು ಮತ್ತು ಉತ್ಸಾಯಿಸುವ ಯೋಜನೆ ಗಳು ನೀಡಬೇಕೆಂದು ಆಲೋಚನೆ ಕೈಗೊಂಡಿದ್ದು ಸಂಘದ ಎಲ್ಲಾ ಸದಸ್ಯರು ಸಂಘದ ಮೇಲೆ ಭರವಸೆ, ವಿಶ್ವಾಸ ಮತ್ತು ನಂಬಿಕೆ ಇಟ್ಟು ಕಾರ್ಯನಿರ್ವಹಿಸಿ ಎಂದು ಕರೆ ನೀಡಿದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಾಯಿಲೆಗೆ ತುತ್ತಾಗಿ ಆಸ್ಪತ್ರೆ ಸೇರಿದ್ದ ಹಿರಿಯ

The Siasat News - Images

ಪತ್ರ ಕರ್ತ ಜಿ ಕೆ ಹೆಬ್ಬಾರ್ ರವರನ್ನು ಹತ್ತು ಸಾವಿರ ರೋಗಳ ಚೆಕ್ ನ್ನು ನೀಡಲಾಯಿತು.

ಈ ಸಂಧರ್ಭದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಬಿ ಎಲ್ ರಾಜಪ್ಪ, ಸಂಘದ ಹಿರಿಯ ಸದಸ್ಯರಾದ ಬಿ ವಿ ಶೇಷಗಿರಿ, ಶಿವಣ್ಣ ವೈಭವ, ಅರುಣ್ ಕುಮಾರ್, ಸೇರಿದಂತೆ ಸಂಘದ ಸದಸ್ಯರಾದ ರಾಘವೇಂದ್ರ, ರಘು ಎಚ್ ಎಸ್, ಸತೀಶ್ ರಮ್ಯಾ, ಅರುಣ್ ನಿಸರ್ಗ ಶಿರಾಳಕೊಪ್ಪ, ಮಂಜಪ್ಪ, ವಿ ಪಿ ಬಸವರಾಜು, ಪ್ರಕಾಶ್, ,ವಿನಯ್ ಕುಮಾರ್ ವಾಲಿ, ಮತ್ತಿತರರು ಇದ್ದರು.

ವರದಿ: ನವೀದ್ ಶಿರಾಳಕೊಪ್ಪ.

Share the news!

Leave a Reply

Your email address will not be published. Required fields are marked *