ಚಂದ್ರಕಾಂತ್ ರೇವಣ್ ಕರ್ ದೂರಿನ ಆಧಾರದ ಮೇಲೆ ಕೊಳತು ನಾರುವ ಯಾತ್ರ ನಿವಾಸ ಕ್ಕೆ ಭೇಟಿ ಕೊಟ್ಟ ಲೋಕಾಯುಕ್ತ ಅಧಿಕಾರಿ ಸುರೇಶ್….

The Siasat News - Images

ಯಾತ್ರಿನಿವಾಸ ಹೋಗಿ ಕೊಳಚೆ ನಿವಾಸವಾಗಿದೆ.

ಶಿಕಾರಿಪುರ:24-10-2024

ಪಟ್ಟಣದ ಶ್ರೀಹುಚ್ಛರಾಯಸ್ವಾಮಿ ಕೆರೆ ಪಕ್ಕದಲ್ಲಿ 15 ವರ್ಷದ ಹಿಂದೆ ಸಾವಿರಾರು ಕೋಟಿ ಹಣ ಖರ್ಚುಮಾಡಿ ಕೆರೆ ಅಭಿವೃದ್ದಿ ಜೊತೆಗೆ ನೂರಾರು ಕೋಟಿ ಹಣ ಖರ್ಚುಮಾಡಿ ಸುಮಾರು 3 ಎಕರೆ ಭೂಮಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ವಸತಿ ಗೃಹ ಕಟ್ಟಿರುತ್ತಾರೆ.

The Siasat News - Images

ಈ ಯಾತ್ರಿನಿವಾಸದಲ್ಲಿ ಸುಮಾರು 10 ರಿಂದ 15 ದೊಡ್ಡ ದೊಡ್ಡ ಹೈಟೆಕ್ ರೂಮ್ ಹಾಲ್, ಐಷಾರಾಮಿ ಮಂಚ ಬೆಡ್, ಹೈಟೆಕ್ ಬಾತ್ ರೂಮ್ ಇರುವಂತಹ ಯಾತ್ರಿನಿವಾಸ ಕೇವಲ 2 ವರ್ಷ ಕೂಡ ಉಸ್ತುವಾರಿ ನೋಡಲಿಕ್ಕಾಗದೆ ಕೊಳಕು ತುಂಬಿಕೊಂಡು, ದುರ್ವಾಸನೆ, ಮದ್ಯ ವೆಸನಿಗಳ ತಾಣ ಹಾಗೂ ಅಶ್ಲೀಲ ನಡವಳಿಕೆಯ ವೇಶ್ಯವಾಟಿಕೆತಾಣದ ರೀತಿಯಾಗಿ ಮಾರ್ಪಟ್ಪಿದೆ.

ಸದರಿ ಯಾತ್ರಿನಿವಾಸ ಸಾರ್ವಜನಿಕರಿಗೆ ಮದುವೆ ಒಗೈರೆ ಇತರೆ ಕಾರ್ಯಕ್ರಮಗಳಿಗೆ ಬಾಡಿಗೆಗೆ ಕೊಟ್ಟಿರುತ್ತಿದ್ದರೆ ವರ್ಷಕ್ಕೆ 10ರಿಂದ 15 ಲಕ್ಷ ಬಾಡಿಗೆ ಇಲಾಖೆಗೆ ಬರುತಿತ್ತು. ಅಲ್ಲಿಗೆ ಸರಿಸುಮಾರು 16 ವರ್ಷಕ್ಕೆ ಕೋಟಿ ಕೋಟಿ ಹಣ ಸರ್ಕಾರಕ್ಕೆ ಆದಾಯ ಆಗಿರುತ್ತಿತ್ತು . ಆದರೆ ಈಗ ಈ ಯಾತ್ರಿನಿವಾಸದ ವಳಗೆ ಕಾಲಿಡಲು ಕೊಡ ಯೋಚನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ನೂರಾರು ಬೆಡ್ ಗಳನ್ನ ಚಿಂದಿ ಮಾಡಿ ಕಳವುಮಾಡಿಕೊಂಡು ಹೊತ್ತು ವೈದಿದ್ದಾರೆ. ಬಾಗಿಲ ಲಾಕ್ ಮುರಿದು ಅಲ್ಲಿರುವ ಮಂಚ ಮತ್ತಿತರೆ ವಸ್ತುಗಳನ್ನ ತೆಗೆದುಕೊಂಡು ಹೋಗಿದ್ದು ಕಟ್ಟಡದ ಒಳಗೆ ಬೀರು ಬ್ರಾಂಡಿ ಬಾಟಲ್ ಗಳು ತುಂಭಿಕೊಂಡಿವೆ.

The Siasat News - Images

ಎಲ್ಲಿನೋಡಿದರಲ್ಲೆ ಎಲೆ ಅಡಿಕೆ ಉಗುಳು ಸಿಗರೇಟ್ ಖಾಲಿಪ್ಯಾಕ್ ಗಳು, ಕೊಳಕು ನಾರುವ ವಾಸನೆ .ದನ ಕರುಗಳ ದೊಡ್ಡಿ ರೀತಿಯಲ್ಲಿ ಸಗಣಿ ತುಂಬಿರುತ್ತದೆ. ದೊಡ್ಡ ದೊಡ್ಡ ಕಿಟಿಕಿ ಗ್ಲಾಸ್ ಕುಡಿದ ಬಾಟ್ಲಿನಿಂದ ಒಡೆದು ಪುಡಿ ಪುಡಿ ಮಾಡಿರುತ್ತಾರೆ. ಈ ವಿಚಾರವಾಗಿ 7-8 ವರ್ಷದಿಂದ ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ಪ್ರಚಾರ ಕೊಡ ಆಗಿತ್ತು. ಈ ಹಿಂದೆ ಶಿಕಾರಿಪುರ ತಾಲೂಕು ಪುರಸಭೆ ಮತ್ತು ತಾಲೂಕು ಕಚೇರಿ ಗೆ ವಿಡಿಯೋ ಸಮೇತ ಹಲವಾರು ದೂರುಗಳನ್ನು ನೀಡಿದ್ದು ಅಧಿಕಾರಿಗಳಿಂದ ಯಾವುದೇ ರೀತಿಯ ಸರಿಪಡಿಸುವ ಕಾರ್ಯ ಆಗಿಲ್ಲ ಎಂದು ಆಮ್ ಆದ್ಮಿ ಪಕ್ಷದ ಚಂದ್ರಕಾಂತ್ ರೇವಣಕಾರ್ ಹೇಳಿದರು ..

The Siasat News - Images

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರವರ ಅಧಿಕಾರ ಅವಧಿಯಲ್ಲಿ 2007 -08ರಲ್ಲಿ ಸುಮಾರು ಮೂರು ಎಕ್ರೆ ಭೂಮಿಯಲ್ಲಿ ಕೋಟಿ ಕೋಟಿ ಹಣವನ್ನು ಖರ್ಚು ಮಾಡಿ ಈ ಯಾತ್ರೆ ನಿವಾಸ ಕಟ್ಟಿದ್ದು ಸ್ಥಳೀಯ ರಾಜಕಾರಣಿಗಳು, ಅಧಿಕಾರಿಗಳು ಇದರ ಕಡೆ ಗಮನ ಹರಿಸದಿರುವುದು ವಿಪರ್ಯಾಸದ ಸಂಗತಿ. ಸಾರ್ವಜನಿಕರು ರೈತರು ಕಾರ್ಮಿಕರು ಬೆವರು ಸುರಿಸಿ ನೀಡಿದ ತೆರಿಗೆ ಹಣದಿಂದ ಕೋಟಿ ಕೋಟಿ ಹಣ ಸುರಿದು ಕಟ್ಟಿದ ಈ ಯಾತ್ರಿ ನಿವಾಸದಲ್ಲಿ ಕೊಳಕು ಗಬ್ಬು ನಾರುತ್ತಿದೆ, ಒಳಗಡೆ ಮಾಸ್ಕ್ ಇಲ್ಲದೆ ಹೋಗೋ ಹಾಗಿಲ್ಲ….

ದಿನಾಂಕ 21 -9 -2024ರಂದು ಸಂಬಂಧಿಸಿದ ಇಲಾಖೆ ಹಾಗೂ ಲೋಕಾಯುಕ್ತರಿಗೆ ನಮ್ಮ ವತಿಯಿಂದ ದೂರು ನೀಡಿ ಕಟ್ಟಡ ಮತ್ತು ಪಾಳು ಬಿದ್ದು ಪ್ರದೇಶ ವನ್ನು ಖುದ್ದಾಗಿ ವೀಕ್ಷಿಸಲು ಮನವಿ ಮಾಡಿದ ಫಲಶ್ರುತಿ ಯಾಗಿ ಮಾನ್ಯ ಲೋಕಾ ಯುಕ್ತ ಇನ್ಸ್ಪೆಕ್ಟರ್ ಮಂಗಳವಾರ ಸಂಭಂದ ಪಟ್ಟ ಅಧಿಕಾರಿಗಳೊಂದಿಗೆ ಸ್ಥಳ ಕ್ಕೆ ಭೇಟಿ ನೀಡಿ ಕಟ್ಟಡ ವನ್ನು ವೀಕ್ಷಣೆ ಮಾಡಿ ಇಲಾಖೆಯ ಅಧಿಕಾರಿಗ ಳಿಗೆ ತರಾಟೆಗೆ ತೆಗೆದುಕೊಂಡರು ಹಾಗೂ ಶಿಸ್ತು ಕ್ರಮ ಹಾಗೂ ದುರಸ್ಥಿಗೆ ಆದೇಶ ನೀಡಿದ್ದಾರೆ…

ಇದರಿಂದಾಗಿ ಸಾರ್ವಜನಿಕ ಹಣ ದಿಂದ ಕಟ್ಟಿದ ಕಟ್ಟಡ ಸಾರ್ವಜನಿಕ ಉಪಯೋಗಕ್ಕೆ ಮರುಳಲಿದೆ ಎಂಬ ಭರವಸೆ ಮೋಡಿದೆ ಎಂದು ರೇವಣಕರ್ ಸಂತಸ ವ್ಯಕ್ತ ಪಡಿಸಿದರು.

ವರದಿ: ಜಿ ಕೆ ಹೆಬ್ಬಾರ್ ಶಿಕಾರಿಪುರ

The Siasat News - Images

Share the news!

Leave a Reply

Your email address will not be published. Required fields are marked *