ದುರ್ಗಾ ದೇವಿ ನೂತನ ದೇವಸ್ಥಾನದ ಗುದ್ದಲಿ ಪೂಜೆ… ಸಂಸದ ಬಿ ವೈ ರಾಘವೇಂದ್ರ ಭಾಗಿ…

The Siasat News - Images

ಶಿರಾಳಕೊಪ್ಪ:5/3/2026

ಮದ್ಯೆ ಪ್ರಾಚ್ಯ ದೇಶಗಳಲ್ಲಿ ಯುದ್ದದ ಕಾರ್ಮೋಡ ಕವಿದಿದೆ ಆದರೆ ಭಾರತ ಮಾತ್ರ ಶಾಂತಿಯಿಂದ ಇದೆ ಅದಕ್ಕೆ ಕಾರಣ ನಮ್ಮ ಭೂಮಿಗಿರುವ ಆಧ್ಮಾತ್ಮಿಕ ಶಕ್ತಿ ಅದು ಕಾಪಾಡುತ್ತಿದ್ದು ನಾವು ಮಾಡುತ್ತಿರುವ ದೇವತಾ ಆಚರಣೆಗಳು ನೆಮ್ಮದಿಯಿಂದ ಇರಲು ಸಹಕಾರಿಯಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಪಟ್ಟಣದ ದುರ್ಗಮ್ಮನ ಕೇರಿಯಲ್ಲಿರುವ ದುರ್ಗಾ ದೇವಿ ದೇವಸ್ಥಾನದ ಆವರಣದಲ್ಲಿ ಗುರುವಾರ ಸುಮಾರು 2.50. ಕೋಟಿ ವೆಚ್ಚದ ದುರ್ಗಾದೇವಿ ನೂತನ ದೇವಸ್ಥಾನದ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

The Siasat News - Images

ನಮ್ಮ ನೆಲದಲ್ಲಿನ ಆಧ್ಮಾತಿಕ ಶಕ್ತಿ, ತಾಯೇಂದಿರ ಪೂಜೆಗಳು, ನಮ್ಮ ದೇಶದ ಚಿಕ್ಕಾಣಿ ಹಿಡಿದಿರುವ ಪ್ರಧಾನ ಮಂತ್ರಿಗಳು, ನಾವು ನೆಮ್ಮಯಿಂದ ಇರಲು ಸಾದ್ಯವಾಗಿಸಿದ್ದಾರೆ.
12 ಶತಮಾನದದಲ್ಲಿನ ಅಕ್ಕಮಹಾದೇವಿ, ಅಲ್ಲಮಪ್ರಭು ಶಿವಶರಣರು ಓಡಾಡಿದ ಸ್ಥಳವಿದು. ದೇವಸ್ಥಾನ ಕಟ್ಟಡಕ್ಕೆ ಸರ್ಕಾರ ಸ್ಪಂದಿಸುತ್ತದೆಯೋ ಇಲ್ಲವೂ ಗೊತ್ತಿಲ್ಲ. ಆದರೆ ನಾವುಗಳು ಸಂಕಲ್ಪ ಮಾಡಿ ಎಲ್ಲಾ ಸಮುದಾಯದ ಸಹಕಾರದಿಂದ ದೇವಾಲಯ ಪೂರ್ಣಗೊಳಿಸೋಣ ಎಂದರು ಕರೆ ನೀಡಿದರು.
ಹತ್ತಿರದ ಬಳ್ಳಿಗಾವಿ ಗ್ರಾಮದಲ್ಲಿ ಶಾಸಕ ಬಿ.ವೈ. ವಿಜಯೇಂದ್ರ ಅವರ ಸಹಕಾರದಿಂದ ಅಲ್ಲಮಪ್ರಭುಗಳ ತಂದೆ ತಾಯಿಗಳು ವಾಸವಿದ್ದ ಸ್ಥಳದ ಅಭಿವೃದ್ದಿಗೆ 2 ಕೋಟಿ ರೂ ನೀಡಲಾಗಿದೆ. ಅಕ್ಕಮಹಾದೇವಿಯ ಪೂಜೆ

The Siasat News - Images

ಸಲ್ಲಿಸಿದ ಪರದೇಶಿ ಮಲ್ಲಪ್ಪನ ಕಟ್ಟೆ ಅಭಿವೃದ್ದಿಯಾಗಬೇಕಾಗಿದೆ, ಶಿರಾಳಕೊಪ್ಪ ಸುತ್ತಲು ಇರುವ ಶರಣ ಶರಣಿಯರ ದೇವಾಲಯ ಹಾಗೂ ಅಭಿವೃದ್ದಿಯನ್ನು ಗಮನಿಸಿದರೆ ಇದೊಂದು ಆಧ್ಮಾತ್ಮಿಕ ಪ್ರವಾಸಿ ಕೇಂದ್ರವಾಗಲಿದೆ ಎಂದರು.

ಕಾಯಕ್ರಮದಲ್ಲಿ ವಿರಕ್ತಮಠದ ಸಿದ್ದೇಶ್ವರಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಮಂಚಿ ಶಿವಣ್ಣ ಮಾತನಾಡಿ ನೂತನ ದೇವಸ್ಥಾನ ನಿಮಾರ್ಣದ ಬಗ್ಗೆ ಮಾಹಿತಿ ನೀಡಿದರು.

ಅಗಡಿ ಅಶೋಕ, ವೀರಶೈವ ಸಮಾಜದ ಅಧ್ಯಕ್ಷ ಪ್ರಭುಸ್ವಾಮಿ, ಚನ್ನವೀರಶೆಟ್ರು, ಎಚ್ ಎಂ ಚಂದ್ರಶೇಖರ, ರವಿ ಶಾನಭೋಗರು, ನಿವೇದಿತಾ ರಾಜು, ಮಂಜ್ಯಾನಾಯ್ಕ, ಕಾಳಿಕಾಂಬಾ ದೇವಸ್ಥಾನ ಸಮಿತಿ ಅಧ್ಯಕ್ಷ ನಾಗರಾಜ ಎ ಸಿ, ಸುದೀರ್ ಮಾರವಳ್ಳಿ, ದೇವಸ್ಥಾನ ಸಮಿತಿ ಸದಸ್ಯರು ಹಾಜರಿದ್ದರು.

05ಎಸ್.ಎಲ್.ಕೆ.ಪಿ.01ಪೋಟೋ01 : ಶಿರಾಳಕೊಪ್ಪದ ದುರ್ಗಾ ದೇವಿ ದೇವಸ್ಥಾನದ ಆವರಣದಲ್ಲಿ ಗುರುವಾರ ಸುಮಾರು 2.50. ಕೋಟಿ ವೆಚ್ಚದ ದುಗಾ ದೇವಿ ನೂತನ ದೇವಸ್ಥಾನದ ಗುದ್ದಲಿ ಪೂಜೆ ಸಂಸದ ಬಿ.ವೈ ರಾಘವೇಂದ್ರ ನೆರವೇರಿಸಿದರು. ವಿರಕ್ತಮಠದ ಸಿದ್ದೇಶ್ವರಸ್ವಾಮಿಗಳು ಇದ್ದರು.

Share the news!

Leave a Reply

Your email address will not be published. Required fields are marked *