ಅಮ್ಮನಕೇರಿ: ಕಬ್ಬಡ್ಡಿ ಪಂದ್ಯಾವಳಿ, ಕಕ್ಕುಪ್ಪಿ ತಂಡ ಪ್ರಥಮ……
ವಿಜಯನಗರ:02-11-2024 ಜಿಲ್ಲೆಯ ಕೊಡ್ಲಿಗಿ ತಾಲ್ಲೂಕಿನ ಕಕ್ಕುಪ್ಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮ್ಮನಕೇರಿ ಗ್ರಾಮದಲ್ಲಿ ನವಂಬರ್ 2 ಶನಿವಾರದಂದು ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಮದ ವಿವಿದ ಸಂಘಟನೆಗಳ ಸಹಯೋಗದಲ್ಲಿ, ಯುವಕರಿಗಾಗಿ ಕಬಡ್ಡಿ ಪಂದ್ಯಾವಳಿ ಜರುಗಿಸಲಾಯಿತು. ಪಂದ್ಯಾವಳಿಯಲ್ಲಿ ಕಕ್ಕುಪ್ಪಿಯ ಯುವಕರ ತಂಡ ಪ್ರಥಮ ಸ್ಥಾನ ಪಡೆಯಿತು, ದ್ವಿತೀಯ ಬಹುಮಾನ ಅಮ್ಮನ ಕೇರಿಯ ಭಗತ್ ಸಿಂಗ್ ಬಾಯ್ಸ್ ತಂಡ ಪಡೆದುಕೊಂಡಿತು. ಪಂದ್ಯಾವಳಿಗೆ ಪ್ರಥಮ ಬಹುಮಾನದ ಟ್ರೋಪಿಯನ್ನು, ಸಿಜಿ ಮಂಜುನಾಥ್ ಗೌಡ ರವರು ಕೊಡುಗೆಯಾಗಿ ನೀಡಿರುತ್ತಾರೆ. ದ್ವಿತೀಯ ಬಹುಮಾನವನ್ನು, ಶಿಕ್ಷಕರಾದ ಮಂಜುನಾಥ ಸ್ವಾಮಿ…

