ದಿನಾಂಕಃ 25-10-2024 ರಂದು ಮಧ್ಯಾಹ್ನ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗರಭಾವಿ ಬಸ್ ನಿಲ್ದಾಣದಲ್ಲಿ ಯಾರೋ ಒಬ್ಬ ವ್ಯಕ್ತಿಯು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ* ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಎ ಜಿ ಕಾರ್ಯಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಶ್ರೀ ಸುರೇಶ್ ಎಂ, ಪೊಲೀಸ್ ಉಪಾಧಿಕ್ಷಕರು, ಶಿವಮೊಗ್ಗ-ಬಿ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ ಶ್ರೀ ದೀಪಕ್ ಎಂ. ಎಸ್, ಪೊಲೀಸ್ ನಿರೀಕ್ಷಕರು, ಮತ್ತು ಶ್ರೀ ಶಾಂತರಾಜ್ ಪೊಲೀಸ್ ಉಪ ನಿರೀಕ್ಷಕರು, ಕುಂಸಿ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಚಂದ್ರಾನಾಯಕ್, 46 ವರ್ಷ, ಬೀರನ ಕೆರೆ ಗ್ರಾಮ ಶಿವಮೊಗ್ಗ ಈತನನ್ನು ದಸ್ತಗಿರಿ ಮಾಡಿ, ಸದರಿ ಆರೋಪಿಯಿಂದ ಅಂದಾಜು ಮೌಲ್ಯ 15,000/- ರೂಗಳ 640 ಗ್ರಾಂ ತೂಕದ ಒಣ ಗಾಂಜಾ ಅಮಾನತ್ತು ಪಡಿಸಿಕೊಂಡು ಠಾಣಾ ಗುನ್ನೆ ಸಂಖ್ಯೆ 0213/2024 ಕಲಂ 20(b), 8(c) NDPS ಕಾಯ್ದೆ ರೀತ್ಯಾ ಪ್ರಕಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

