ಶಿಕಾರಿಪುರ: 26-10-2024
ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ಯಾತ್ರೆ ಇಂದು ಶಿಕಾರಿಪುರ ತಾಲ್ಲೂಕಿಗೆ ಆಗಮಿಸಿತು.
ತಾಲ್ಲೂಕಿನ ವಿವಿಧ ಸರಕಾರಿ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಪರ ಸಂಘಟನೆಗಳಿಂದ ರಥಕ್ಕೆ ಅದ್ದೂರಿ ಸ್ವಾಗತ ಕೋರಲಾಯಿತು.
ಶಿರಾಳಕೊಪ್ಪದ ವಾಲ್ಮೀಕಿ ಭವನ ಹತ್ತಿರ ಪಟ್ಟಣದ ಗಡಿ ಭಾಗಕ್ಕೆ ಆಗಮಿಸಿದ ಕನ್ನಡದ ರಥವನ್ನು ಸ್ಥಳೀಯ ಪುರಸಭೆ ಮುಖ್ಯ ಅಧಿಕಾರಿಗಳು, ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಹಾಗೂ ಕ ಸಾ ಪ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿ ಪಟ್ಟಣದ ವಿವಿಧ ಶಾಲಾ ಮಕ್ಕಳ ಮೆರವಣಿಗೆ ಯೊಂದಿಗೆ ಮುಂದಿನ ಸೊರಬ ತಾಲ್ಲೂಕಿಗೆ ಬೀಳ್ಕೊಡುಗೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಶಿಕಾರಿಪುರ ತಾಲ್ಲೂಕಿನ ಅಧ್ಯಕ್ಷ ರಾಘವೇಂದ್ರ ಎಚ್ಡಿ. ಎಸ್ ಡಿಸೆಂಬರ್ 2024 ರಲ್ಲಿ ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲಾ ಕನ್ನಡ ಮನಸ್ಸುಗಳು ತಪ್ಪದೇ ಭಾಗವಹಿಸುವ ಮೂಲಕ ಕನ್ನಡ ಭಾಷೆ, ಕಲೆ, ನೆಲ ಜಲದ ಪರವಾಗಿ ನಾವಿದ್ದೇವೆ ಎಂಬುವ ಸಂದೇಶ ಸಾರಬೇಕು ಹಾಗೂ ಕನ್ನಡಾಭಿಮಾನ ಮೆರೆಯಬೇಕೆಂದು ಕರೆ ನೀಡಿದರು.
ಈ ಸಂಧರ್ಭದಲ್ಲಿ ಶಿರಾಳಕೊಪ್ಪ ಪುರಸಭೆ ಅಧ್ಯಕ್ಷೆ ಮಮತಾ ನಿಂಗಪ್ಪ, ಉಪಾಧ್ಯಕ್ಷ ಮುದಸ್ಸಿರ್ ಅಹ್ಮದ್ , ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲ, ಪುರಸಭೆ ಮುಖ್ಯ ಅಧಿಕಾರಿ ಹೇಮಂತ್ ಡೊಳ್ಳೆ, ಕ ಸಾ ಪ ಸದಸ್ಯರಾದ ಕೆ ಎಸ್ ಹುಚ್ಚರಾಯಪ್ಪ, ಮಂಜಪ್ಪ ಮೇಷ್ಟ್ರು, ಪ್ರಶಾಂತ್ ಕುಬಸದ್, ಎಂ ಸಿದ್ದಪ್ಪಯ್ಯ ಮೇಷ್ಟ್ರು, ಗಂಗಾಧರ ಶೆಟ್ರು , ಚಂದ್ರಶೇಖರ್ ಸುರಹೊನ್ನೇ,ಗಣೇಶ್ ಭಂಡಾರಿ ರೈತ ಸಂಘದ ಪ್ಯಾಟಿ ಈರಪ್ಪ, ಅಕ್ಕಮಹಾದೇವಿ ಪ್ರತಿಷ್ಠಾನದ ರೂಪ ಹಾಲೇಶ್ ,ಜ್ಯೋತಿ ರಮೇಶ್ ಮತ್ತಿತರರು ಇದ್ದರು.
ವರದಿ: ನವೀದ್ ಶಿರಾಳಕೊಪ್ಪ


