ಶಿರಾಳಕೊಪ್ಪ: 25-10-2024
ಡಿಸೇಂಬರ್ 20, 21 ಹಾಗೂ 22 ರಂದು ಮಂಡ್ಯ ದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯ ದಾದ್ಯಂತ ಜಾಗೃತಿ ಮೋಡಿಸುವ ಸಲುವಾಗಿ ಆಗಮಿಸಲಿರುವ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ಯಾತ್ರೆಯೂ ದಿನಾಂಕ 26-10-2024 ರಂದು ಮಧ್ಯಾಹ್ನ 12:30 ಕ್ಕೆ ಪಟ್ಟಣಕ್ಕೆ ಆಗಮಿಸಲಿದ್ದು ಅದ್ದೂರಿ ಸ್ವಾಗತಕ್ಕೆ ಕ ಸಾ ಪ ಹೋಬಳಿ ಘಟಕ ತಯಾರಿ ನಡೆಸಿದೆ ಎಂದು ಕರ್ನಾಟಕ ಸಾಹಿತ್ಯ ಪರಿಷತ್ತು ಶಿರಾಳಕೊಪ್ಪ ಹೋಬಳಿ ಘಟಕದ ಕಾರ್ಯದರ್ಶಿ ಪ್ರಶಾಂತ ಕುಬಸದ ಹೇಳಿದರು.

ಕನ್ನಡ ರಥವನ್ನು ಪಟ್ಟಣದ ವಾಲ್ಮೀಕಿ ಭವನ ಹತ್ತಿರ ಪುಷ್ಪಾರ್ಚನೆ ಮೂಲಕ ಸ್ವಾಗತ ಕೋರಿ ಎಸ್ ಎಸ್ ರಸ್ತೆ, ಬಸ್ಟ್ಯಾಂಡ್ ಸರ್ಕಲ್, ಮೂಲಕ ಸಾಗಿ ಸೊರಬ ರಸ್ತೆಯ ಜೂನಿಯರ್ ಕಾಲೇಜ್ ತನಕ ಮೆರವಣಿಗೆಯೊಂದಿಗೆ ಬೀಳ್ಕೊಡುವುದಾಗಿ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿದೆ.
ಊರಿನ ಪ್ರಮುಖರು, ಮುಖಂಡರು ಮತ್ತು ಪುರಸಭೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಕನ್ನಡ ಮನಸ್ಸುಗಳು, ಕನ್ನಡಿಗರು ಆದಷ್ಟು ಸಂಖ್ಯೆ ಯಲ್ಲಿ ಈ ಮೆರವಣಿಗೆಯಲ್ಲಿ ಭಾಗವಹಿಸಿ ಕನ್ನಡಾಭೀಮಾನ ಮೆರೆಯಬೇಕೆಂದು ಪ್ರಶಾಂತ್ ತಿಳಿಸಿದರು.
ವರದಿ: ನವೀದ್ ಶಿರಾಳಕೊಪ್ಪ


