ಹಿರಿಯ ಪತ್ರಕರ್ತ, ಮಾಧ್ಯಮ ಮಿತ್ರ ಜಿ.ಕೆ ಹೆಬ್ಬಾರ್…ಅನಾರೋಗ್ಯ ವಿಚಾರಿಸಿದ ಗಣ್ಯರು….

The Siasat News - Images

ಶಿಕಾರಿಪುರ:24-10-2024

ತಾಲ್ಲೂಕಿನ ಹಿರಿಯ ಮತ್ತು ಸಕ್ರಿಯ ಪತ್ರಕರ್ತ, ಸಮಾಜಸೇವಕ ಗೋಪಾಲ್ ಕೃಷ್ಣ ಹೆಬ್ಬಾರ್ ರವರು ಇತ್ತೀಚಿಗೆ ಅನಾರೋಗ್ಯದಿಂದ ಬಳಲುತ್ತಿದ್ದು ಶ್ರೀಯುತರನ್ನು ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು.

The Siasat News - Images

ಮೊನ್ನೆಯಷ್ಟೇ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ಶ್ರೀಯುತರನ್ನು ಸಂಪೂರ್ಣ ಬೇಗ ಗುಣ ಮುಖರಾಗಿ ಹಿಂದಿನಂತೆ ಓಡಾಡಿ ಲವಲವಿಕೆಯಿಂದ ಸಮಾಜ ಸೇವೆಯಲ್ಲಿ ಮತ್ತೆ ಬೇಗ ತೊಡಗಿಸಿಕೊಳ್ಳಬೇಕೆಂದು ತೊಗರ್ಸಿಯ ಶ್ರೀ ಮಲ್ಲಿಕಾರ್ಜುನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದವನ್ನು ನೀಡಿ ತೊಗರ್ಸಿಯ ಮಳೆಮಠದ ಶ್ರೀ ಮಹಾಂತದೇಶಿಕೇಂದ್ರ ಸ್ವಾಮಿಗಳು ಆಶೀರ್ವಾದ ನೀಡಿದ್ದಾರೆ.

ಅದೇ ರೀತಿ ಕ್ಷೇತ್ರದ ಸಂಸದ ಬಿ ವೈ ರಾಘವೇಂದ್ರರವರು ಹಾಗೂ ಧರ್ಮಸ್ಥಳ ಸಂಸ್ಥೆಯ ಕೃಷಿ ಮೇಲ್ವಿಚಾರಕ ಶ್ರೀಯುತ ಗೋವಿಂದ ರವರು ಕೂಡ ಜಿಕೆ ಹೆಬ್ಬಾರ್ ರವರ ಆರೋಗ್ಯವನ್ನು ವಿಚಾರಿಸಿದ್ದಾರೆ ಎಂದು ತಿಳಿದುಬಂದಿದೆ.

The Siasat News - Images

ತಮ್ಮ ಲೇಖನ ಮತ್ತು ಬರವಣಿಗೆಯೊಂದಿಗೆ, ಸಮಾಜದ ಪರ , ಬಡ ಜನತೆಯ ಪರ ಯಾವುದೇ ಪ್ರಚಾರದ ಹಂಗು ಇಲ್ಲದೆ ಎಲೆ ಮರಿ ಕಾಯಿಯಂತೆ ಕೆಲಸವನ್ನು ಮಾಡುತ್ತಿರುವ ಹೆಬ್ಬಾರ್ ರಂತಹ ಅನೇಕ ಪತ್ರಕರ್ತರು ನಮ್ಮ ಮಧ್ಯ ಇದ್ದಾರೆ. ಅವರ ಕಷ್ಟ ಕಾರುಣ್ಯ ಗಳ ಸಂದರ್ಭಗಳಲ್ಲಿ ಈ ರೀತಿಯ ಗಣ್ಯರ ಪ್ರೋತ್ಸಾಹ ಮತ್ತು ಆಶೀರ್ವಾದ ಪತ್ರಕರ್ತರಲ್ಲಿ ಹೊಸ ಚೈತನ್ಯವನ್ನು ತುಂಬು ಜೊತೆಗೆ ಮತ್ತಷ್ಟು ಕೆಲಸ ಮಾಡಲು ಪ್ರೇರೇಪಿಸುತ್ತದೆ.

ವರದಿ: ನವೀದ್ ಶಿರಾಳಕೊಪ್ಪ.

The Siasat News - Images

Share the news!

Leave a Reply

Your email address will not be published. Required fields are marked *