ಬಳ್ಳಿಗಾವಿಯ ಸಿಂದಗಿ ಆಶ್ರಮದಲ್ಲಿ ಶ್ರೀ ಮ.ಘ.ಚ. ಶಾಂತವೀರ ಪಟ್ಟಾಧ್ಯಕ್ಷರ ಪುಣ್ಯ ಸ್ಮರಣೋತ್ಸವ: 5 ದಿನಗಳ ಧಾರ್ಮಿಕ ಸಂಭ್ರಮ…

The Siasat News - Images

ಶಿರಾಳಕೊಪ್ಪ:16/2/2026

ಸಮೀಪದ ಬಳ್ಳಿಗಾವಿ ಗ್ರಾಮದ ಸಿಂದಗಿ ಶ್ರೀ ಶಾಂತವೀರೇಶ್ವರ ಆಶ್ರಮದಲ್ಲಿ ಪರಮಪೂಜ್ಯ ಲಿಂಗೈಕ್ಯ ಶ್ರೀ ಮ.ಘ.ಚ. ಶಾಂತವೀರ ಪಟ್ಟಾಧ್ಯಕ್ಷರ ಪುಣ್ಯ ಸ್ಮರಣೋತ್ಸವವು ಫೆಬ್ರವರಿ 19ರಿಂದ 23ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ ಎಂದು ಆಶ್ರಮದ ಸಂಸ್ಥಾಪಕರಾದ ಶ್ರೀ ವೇ.ಬ್ರ. ವಾಗೀಶಯ್ಯ ಶಾಸ್ತ್ರಿಗಳು ಹಿರೇಮಠ ತಿಳಿಸಿದರು.

ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಅವರು, ಐದು ದಿನಗಳ ಕಾಲ ನಡೆಯುವ ಈ ಸಂಭ್ರಮದ ಮುಖ್ಯಾಂಶಗಳನ್ನು ಹಂಚಿಕೊಂಡರು.

ಶಿರಾಳಕೊಪ್ಪ ವಿರಕ್ತಮಠದ ಪೂಜ್ಯಶ್ರೀ ವೀರಬಸವ ದೇವರು ಅವರಿಂದ “ಮಹಾತ್ಮರ ಜೀವನ ದರ್ಶನ” ವಿಶೇಷ ಪ್ರವಚನ, ಖ್ಯಾತ ಕಲಾವಿದರಾದ ಮೆಹಬೂಬ್ ಸಾಬ್ ಹರ್ಲಾಪುರ ಹಾಗೂ ಆರಾಧ್ಯ ರಾವ್ ಉಡುಪಿ ಮತ್ತು ತಂಡದವರಿಂದ ಸಂಗೀತ ಸಂಭ್ರಮ ಹಾಗೂ ಭಕ್ತಿ ಸಂಗೀತ ಸುಧೆ ಹರಿಯಲಿದ್ದು

The Siasat News - Images

ಶ್ರೀ ಸಿಂದಗಿ ಗುರುಗಳ ಗದ್ದುಗೆಗೆ ಪ್ರತಿದಿನ ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ, ಸಾಮೋಹಿಕ ಸರಪತ್ರಯ ಮಂತ್ರ ಜಪ, ಸರ್ಪದೋಷ ನಿವಾರಣಾ ಪೂಜೆ, ಆಶ್ಲೇಷ ಬಲಿ ಪೂಜೆ ಹಾಗೂ ನಾಗಮೂಲ ಮಂತ್ರ ಹೋಮಗಳು ಸೇರಿದಂತೆ ಡಾ//ರಘುವೀರ್ ಬಿ.ಎಂ. ಅವರ ನೇತೃತ್ವದಲ್ಲಿ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಮತ್ತು ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾದಿಗಳಿಗೆ ಪ್ರತಿದಿನ ಮಹಾಪ್ರಸಾದ ವಿನಿಯೋಗವಿರಲಿದ್ದು

The Siasat News - Images

ಈ ಐದು ದಿನಗಳ ಕಾಲ ಜರುಗಲಿರುವ ಧಾರ್ಮಿಕ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಗಳ ಕೃಪೆಗೆ ಪಾತ್ರರಾಗಬೇಕೆಂದು ವಾಗೀಶಯ್ಯ ಶಾಸ್ತ್ರಿಗಳು ಕೋರಿದರು.

ಈ ಸಂಧರ್ಭದಲ್ಲಿ ಹರೀಶ್ ಶಾಸ್ತ್ರಿಗಳು, ಶ್ರೀಮತಿ ಸರೋಜಮ್ಮತೋಟಪ್ಪಯ್ಯ ಹಿರೇಮಠ, ಚಂದ್ರಯ್ಯ ಶಾಸ್ತ್ರಿಗಳು, ಶಿವು ಶಾಸ್ತ್ರಿಗಳು ಹಾಗೂ ಮಠದ ವಟುಗಳು ಉಪಸ್ಥಿತರಿದ್ದರು.

ವರದಿ: ನವೀದ್ ಶಿರಾಳಕೊಪ್ಪ 9538633929

Share the news!

Leave a Reply

Your email address will not be published. Required fields are marked *