ಶಿರಾಳಕೊಪ್ಪ:14/1/2026
ಪಟ್ಟಣದ ಹಳಿಯೂರು ಪ್ರದೇಶದಲ್ಲಿರುವ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಿರಾಳಕೊಪ್ಪ ಉರ್ದು 3 ಕ್ಲಸ್ಟರ್ ಮಟ್ಟದ ಶಾಲೆಗಳ ಮಕ್ಕಳ ಕಲಿಕಾ ಹಬ್ಬ (ಎಫ್‌ಎಲ್‌ಎನ್) ಕಾರ್ಯಕ್ರಮ ನಡೆಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಪಟ್ಟಣದ ಉರ್ದು 3 ವಿಭಾಗದ ಕ್ಲಸ್ಟರ್ ಲೆವೆಲ್ ಅಧಿಕಾರಿ ನಾಸಿರ್ ಅಹ್ಮದ್ ‘ಪ್ರಾಥಮಿಕ ಹಂತದಲ್ಲೇ ಮಕ್ಕಳಲ್ಲಿ ಓದು,
ಬರವಣಿಗೆ ಮತ್ತು ಗಣಿತದ ಮೂಲಭೂತ ಕೌಶಲ್ಯ ಗಳನ್ನು ಬಲಪಡಿಸುವುದೇ ಎಫ್‌ಎಲ್‌ಎನ್ ಕಾರ್ಯಕ್ರಮದ
ಮುಖ್ಯ ಉದ್ದೇಶವಾಗಿದೆ.ಇಂತಹ ಕಲಿಕಾ ಹಬ್ಬಗಳು ಮಕ್ಕಳಲ್ಲಿ ಕಲಿಕೆಗೆ ಆಸಕ್ತಿ ಮೂಡಿಸಲು ಸಹಕಾರಿಯಾಗುತ್ತವೆ. ಶಿಕ್ಷಕರ ನವೀನ ಹಾಗೂ ಸೃಜನಶೀಲ ಬೋಧನಾ ವಿಧಾನಗಳು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಗತ್ಯವಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಕಲಿಕಾ ಮಾದರಿಗಳು, ಚಾರ್ಟ್‌ಗಳು, ಭಾಷಾ ಮತ್ತು ಗಣಿತ ಆಧಾರಿತ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಅಕ್ಷರ ಗುರುತು, ಪದರಚನೆ, ಓದು ಅಭ್ಯಾಸ, ಸಂಖ್ಯೆ ಪರಿಚಯ ಹಾಗೂ ಸರಳ ಗಣಿತ ಕ್ರಿಯೆಗಳ ಮೂಲಕ ಮಕ್ಕಳ ಕಲಿಕಾ ಸಾಮರ್ಥ್ಯ ಗಮನ ಸೆಳೆಯಿತು. ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಶಾಲೆಯ ಮುಖ್ಯ ಶಿಕ್ಷಕಿ ಶಾಹೀನಾ ಬೇಗಂ ಮಾತನಾಡಿ, ‘ಎಫ್‌ಎಲ್‌ಎನ್ ಕಾರ್ಯಕ್ರಮವು ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಅಂಗವಾಗಿದ್ದು, ಮೂರನೇ ತರಗತಿ ಪೂರ್ಣಗೊಳಿಸುವ ವೇಳೆಗೆ ಮಕ್ಕಳು ಓದು, ಬರವಣಿಗೆ ಮತ್ತು ಗಣಿತದಲ್ಲಿ ದೃಢ ನೆಲೆ ಸಾಧಿಸಬೇಕು ಎಂಬ ಉದ್ದೇಶ ಹೊಂದಿದೆ ಮಕ್ಕಳ ಶಿಕ್ಷಣಕ್ಕೆ ಶಿಕ್ಷಕರು, ಪಾಲಕರು ಮತ್ತು ಸಮುದಾಯ ಒಟ್ಟಾಗಿ ಬೆಂಬಲ ನೀಡಬೇಕೆಂದು ಕರೆ ನೀಡಿದರು.

ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಉಡುಗೊರೆಗಳನ್ನು ವಿತರಿಸಲಾಯಿತು.
ಕ್ಲಸ್ಟರ್ 3 ಉರ್ದು ವಿಭಾಗದ ಎಲ್ಲಾ ಶಾಲಾ ಶಿಕ್ಷಕ ವೃಂದದ ಸಹಕಾರದೊಂದಿಗೆ ಹಬ್ಬದ ರೀತಿಯಲ್ಲಿ ನಡೆದ ಕಲಿಕಾ ಹಬ್ಬ ಭಾರೀ ಉತ್ಸಾಹ ಲವಲವಿಕೆ ಮತ್ತು ವಿಜೃಂಭಣೆ ಯಿಂದ ಕೊಡಿತ್ತು.
ಈ ಸಂಧರ್ಭದಲ್ಲಿ ಶಿಕ್ಷಣ ಸಂಯೋಜಕರು ಸಾಗರ ವಿಭಾಗ ಡಾ ll ಜಾಕೀರ್ ಹುಸೇನ್, ಉರ್ದು ಸಿ ಆರ್ ಪಿ ಒಂದನೇ ವಿಭಾಗದ ಅಮಾನುಲ್ಲ 2ನೇ ವಿಭಾಗದ ಗೌಸ್, ತಾಲ್ಲೂಕು ಉರ್ದು ಶಿಕ್ಷಕರ ಸಂಘದ ಅಧ್ಯಕ್ಷ ರಫೀಕ್ ಅಹ್ಮದ್, ಕಾರ್ಯದರ್ಶಿ ಅಶ್ಫಾಕ್ ಅಹ್ಮದ್, ಖಜಾಂಚಿ ಶಫಿಉಲ್ಲ ಬೇಗ್, ಸೇರಿದಂತೆ ಉರ್ದು ಶಾಲೆಗಳ ಶಿಕ್ಷಕರಾದ ನಾಗರಾಜ ಎಂ, ನೀಲೊಫರ್, ಸಾಜಿದಾ ಅಂಜುಮ್, ಶಫಿಉಲ್ಲ ಉಡುಗಣಿ, ಮುಸ್ತಫಾ, ಫಹೀ ಮುನ್ನಿಸ, ಲುಬ್ನಾಕೌಸರ್, ಶೌಕೀನ್, ಖಾಲಿಕ್, ಸಾದಿಕ್ ಬಾಷ, ಶಂಶುದ್ದಿನ್, ದಾದಾ ಪೀರ್, ಅಖೀಲ್ ಅಹ್ಮದ್, ನೌಶಾದ್ ಹಾಗೂ ಶಾಲೆಯ ಎಸ್ ಡಿ ಎಂ ಸಿ ಸದಸ್ಯರು ಇದ್ದರು.
ವರದಿ: ನವೀದ್ ಶಿರಾಳಕೊಪ್ಪ 9538633929

