ಶಿರಾಳಕೊಪ್ಪ:10/1/2025.
ಪೊಲೀಸ್ ಠಾಣಿ ಶಿರಾಳಕೊಪ್ಪ ಹಾಗೂ ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಇಂದು ಬೃಹತ್ ರಕ್ತದಾನ ಶಿಬಿರ ನಡೆಯಿತು.
ಶಿರಾಳಕೊಪ್ಪ ಪೊಲೀಸ್ ಠಾಣೆ ಅವರಣದಲ್ಲಿ ಇಂದು ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ಸುಮಾರು 65ಕ್ಕಿಂತ ಹೆಚ್ಚು ಜನ ರಕ್ತದಾನಿಗಳು ರಕ್ತ ದಾನ ಮಾಡಿದರು.
ಈ ಸಂದರ್ಭದಲ್ಲಿ 55ಬಾರಿ ರಕ್ತದಾನ ಮಾಡಿದ ಸಿವಿಲ್ ಹೆಡ್ ಕಾನ್ಸ್ಟೇಬಲ್ ರಕ್ತ ಸೈನಿಕ ಹಾಲೇಶಪ್ಪ ಮಾತನಾಡಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ನಡೆಯುತ್ತಿರುವ ರಕ್ತದಾನ ಶಿಬಿರ ಗಳ ಪೈಕಿ 80ನೇ ಬಾರಿಯ ರಕ್ತದಾನ ಶಿಬಿರ ಇದಾಗಿದೆ ಮಾರ್ಚ್ 2026ರ ಅಂತ್ಯಕ್ಕೆ 100 ರಕ್ತದಾನ ಶಿಬಿರಗಳನ್ನು ನಡೆಸುವ ಗುರಿ ನಮ್ಮದ ದಾಗಿದೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ರಕ್ತ ದಾನ ಕ್ಷೇತ್ರದಲ್ಲಿ ಗಣನೀಯ ವಾಗಿ ಸೇವೆ ಸಲ್ಲಿಸುತ್ತಿದೆ.

ಶಿವಮೊಗ್ಗ ಜಿಲ್ಲೆ ಯಲ್ಲಿ ರುವ ಎಲ್ಲಾ ಠಾಣಿ ಗಳಲ್ಲಿ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಕನಿಷ್ಠ 1000ಪೊಲೀಸರನ್ನು ರಕ್ತದಾನ ಕ್ಷೇತ್ರಕ್ಕೆ ತರುವ ಮತ್ತು ದೇಶದಲ್ಲೇ ರಕ್ತ ದಾನ ಕ್ಷೇತ್ರ ದಲ್ಲಿ ಮೊದಲ ಜಿಲ್ಲೆಯನ್ನಾಗಿ ಮಾಡುವ ಉದ್ದೇಶ ಇಲಾಖೆ ಹೊಂದಿದೆ.
ಶಿವಮೊಗ್ಗ ಜಿಲ್ಲೆಯು ಪೊಲೀಸ್ ರಕ್ತದಾನಗಳ ತವರೂರು ಎಂಬ ಖ್ಯಾತಿಗೆ ಒಳಗಾಗಬೇಕೆಂಬದೇ ನಮ್ಮ ಆಸೆಯಾಗಿದೆ. ಈ ನಿಟ್ಟಿನಲ್ಲಿ ಎಲ್ಲ ತರಹದ ಸಹಕಾರ

ನೀಡುತ್ತಿರುವ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಹದ್ಯೋಗಿ ಮಿತ್ರರಿಗೆ ಹಾಗೂ ಜಿಲ್ಲೆಯ ಜನತೆಗೆ ಧನ್ಯವಾದಗಳು ಎಂದರು.
ಶಿರಾಳಕೊಪ್ಪ ಪೊಲೀಸ್ ಠಾಣಿಯ ಸಬ್ ಇನ್ಸ್ಪೆಕ್ಟರ್ ಪ್ರಶಾಂತ್, ಎಸ್ ಐ ಓ ಸಂಘಟನೆಯ ಆಸೀಫ್, ಪತ್ರಕರ್ತ ಅರುಣ್ ಕುಮಾರ್ ಮಾತನಾಡಿದರು.
ಮೆಗ್ಗಾನ್ ರಕ್ತ ಸಂಗ್ರಹಣಾ ಕೇಂದ್ರದ ಸಿಬ್ಬಂದಿಗಳು , ಸೇರಿದಂತೆಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೇಷನ್ ಶಿರಾಳಕೊಪ್ಪ, ಖ್ವಾಜ ಬಂದೇ ನವಾಜ್ ಕಮಿಟಿ ಹಾಗೂ ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ:ನವೀದ್ ಶಿರಾಳಕೊಪ್ಪ9538633929

