ಶಿಕಾರಿಪುರ:1/1/2025
ಕನ್ನಡ ನಾಡು ನುಡಿಗಳನ್ನು ಕಟ್ಟಿ ಬೆಳೆಸಿದ್ದಾರೆ. ಈ ಕಟ್ಟುವ ಕೆಲಸವನ್ನು ಇಂದಿನವರು ಮುಂದುವರಿಸಿಕೊಂಡು ಹೋಗಬೇಕಾಗಿದೆ. ಅಂತಹ ಕೆಲಸದಲ್ಲಿ ಈ ಹತ್ತನೇ ಮಕ್ಕಳ ಸಾಹಿತ್ಯ ಸಮ್ಮೇಳನ ಸಾರ್ಥಕ ಕೆಲಸವೆಂದು ಭಾವಿಸುತ್ತೇನೆ ಎಂದು ಸಮ್ಮೇಳನದ ಸರ್ವಾಧ್ಯಕ್ಷೆ ಕು. ರುಕ್ಮಿಣಿ ಬಿ.ಎಲ್. ಅಭಿಮತ ವ್ಯಕ್ತಪಡಿಸಿದರು.
ಶಿಕಾರಿಪುರ ಪಟ್ಟಣದ ಕರ್ನಾಟಕ ಮೌಲಾನಾ ಅಜಾದ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು,, ಕರ್ನಾಟಕ ಮೌಲಾನಾ ಆಜಾದ್ ಪಬ್ಲಿಕ್ ಶಾಲೆಯ ಆಶ್ರಯದಲ್ಲಿ ಜರುಗಿದ ಹತ್ತನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿದ ಕು. ರುಕ್ಮಿಣಿ ಮಾತನಾಡಿ ಮಕ್ಕಳ ಸಾಹಿತ್ಯ ಸಮ್ಮೇಳನಗಳು ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿ ಮೂಡಿಸಲು, ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಮತ್ತು ಕನ್ನಡ ಸಾಹಿತ್ಯ ಪರಂಪರೆಯನ್ನು ಬೆಳೆಸಲು ಸಹಕಾರಿಯಾಗಿವೆ. ಇದರ ಜೊತೆಗೆ ಡಿಜಿಟಲ್ ಯುಗ , ಏ.ಐ. ಯುಗದಲ್ಲಿ ಕನ್ನಡ ನಾಡು ನುಡಿ ಕಟ್ಟುವಲ್ಲಿ ಮತ್ತು ಮಕ್ಕಳನ್ನು ಕಟ್ಟುವಿಕೆಗೆ ಸನ್ನದ್ಧಗೊಳಿಸುವಲ್ಲಿ ಸಾಕಷ್ಟು ಸವಾಲುಗಳಿವೆ. ಈ ಸವಾಲುಗಳಿಗೆ ನಾವಿಂದು ಉತ್ತರ ಕಂಡುಕೊಳ್ಳಬೇಕಾದದ್ದು ಅತ್ಯಗತ್ಯ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಎಸ್. ಎನ್. ನರಸಿಂಹಸ್ವಾಮಿ ಸಾಹಿತ್ಯ ಸಮ್ಮೇಳನದ ಸದುದ್ದೇಶವನ್ನು ತಿಳಿಸಿ, ಕನ್ನಡವನ್ನು ಓದುವ ಬರೆಯುವ ಮೂಲಕ ಹೆಚ್ಚಿನ ಒಲವು ಬೆಳೆಸಿಕೊಳ್ಳಬೇಕೆಂದರು.
ಮುಖ್ಯ ಅತಿಥಿಗಳಾದ ಕನ್ನಡ ಸಾಹಿತ್ಯ ಪರಿಷತ್ತಿನ, ಕ.ಸಾ. ಸಾಂ. ವೇದಿಕೆಯ, ಕ.ಜಾ. ಪರಿಷತ್ತು ಅಧ್ಯಕ್ಷ ಡಿ. ಮಂಜುನಾಥ ರವರು ಮಾತನಾಡಿ ಸಮ್ಮೇಳನಗಳು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿದ್ದು , ಅವರಲ್ಲಿ ಸುಪ್ತವಾಗಿರುವ ಸಾಂಸ್ಕೃತಿಕ ಪ್ರತಿಭೆಯನ್ನು ಅಭಿ ವ್ಯಕ್ತಿಗೊಳಿಸಲು ಸಹಾಯಕವಾಗುತ್ತದೆ. ಪ್ರತಿಯೊಬ್ಬರೂ ಕೂಡ ಕನ್ನಡದ ಪುಸ್ತಕಗಳನ್ನು ಕೊಳ್ಳುವುದು ಮತ್ತು ಓದುವುದರೊಂದಿಗೆ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಸಮೃದ್ಧಗೊಳಿಸಲು ಕರೆ ನೀಡಿದರು.
ಸಮ್ಮೇಳನ ಉದ್ಘಾಟಿಸಿದ ಅಮೃತ ಜಿ. ಶಿಕಾರಿಪುರ ತಾಲೂಕು ಕನ್ನಡಕ್ಕೆ ನೀಡಿದ ಕೊಡುಗೆಗಳನ್ನು ಕುರಿತು ಮಾತನಾಡಿದರು.
ಸಾಹಿತಿಗಳಾದ ಡಿ.ಬಿ. ಚಂದ್ರೇಗೌಡರು ಕನ್ನಡ ನಾಡು ನುಡಿ ಕಟ್ಟಲು ವಿದ್ಯಾರ್ಥಿಗಳು ಸಾಹಿತ್ಯಸಕ್ತಿ ಬೆಳೆಸಿಕೊಳ್ಳಬೇಕೆಂದರು.
ಕೆ.ಎಸ್ .ಹುಚ್ರಾಯಪ್ಪ ಪ್ರಾಸ್ತಾವಿಕ ನುಡಿಗೈದರು.
ಮುಖ್ಯ ಅತಿಥಿಗಳಾಗಿ ಬಿ ಪಾಪಯ್ಯ ,ಎಚ್.ಎಸ್. ರಘು, ಮಮತಾ ಸಾಲಿ, ಬಿ.ಕೆ. ಮಂಜಪ್ಪ , ದೇವಕುಮಾರ್ ಎ.ಜಿ., ಶಿವಪ್ಪ , ಬನ್ನೂರು ಮಂಜಪ್ಪ, ತಾಲ್ಲೂಕು ಕಾರ್ಯನಿರತ ಪತ್ರಕರ್ತರಸಂಘದ ಅಧ್ಯಕ್ಷ ಎಂ. ನವೀನ್ ಕುಮಾರ್, ಕೆ.ಎಚ್.ಪುಟ್ಟಪ್ಪ ಬಿಳವಾಣಿ, ನಾಗರಾಜಾಚಾರ್,ಕೆ ಹೆಚ್.ಲಕ್ಷ್ಮಣ್, ಬಂಗಾರಪ್ಪ ಬಿ., ಡಾ.ಪ್ರಕಾಶ್ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಸ. ನ. ಮಂಜಪ್ಪ, ಅಂತರಾಷ್ಟ್ರೀಯ ಮಟ್ಟದ ಪಂಜ ಕುಸ್ತಿ ಕ್ರೀಡಾಪಟು ಗೌರಮ್ಮ ಇವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಕವಿಗೋಷ್ಠಿ , ಕಥಾಗೋಷ್ಠಿ ಭಾಷಣ ಘೋಷ್ಠಿಗಳನ್ನು ಏರ್ಪಡಿಸಿ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು.

