ಶರಣರ ವಚನಗಳನ್ನು ರಾಗವಾಗಿ ಹಾಡುವುದರ ಮೂಲಕ ಮಕ್ಕಳನ್ನು ರಂಜಿಸಿದ ಉಪನ್ಯಾಸಕಿ- ಶ್ರೀಮತಿ ಶಿವಲೀಲಾ….

The Siasat News - Images

ಶಿರಾಳಕೊಪ್ಪ:09-01-2025

ಪಟ್ಟಣದ ಅಕ್ಕಮಹಾದೇವಿ ಪ್ರೌಢ ಶಾಲೆಯಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶ್ರೀಮತಿ ದಾಕ್ಷಾಯಣಮ್ಮ ದಂಪತಿ ದತ್ತಿ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಟಿ. ಎಂ ಮಂಜಣ್ಣ ದತ್ತಿ ಕಾರ್ಯಕ್ರಮದ ಧೇಯ ಮತ್ತು ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು.

ದತ್ತಿ ವಿಷಯವಾದ ” ಶಿವಶರಣರು ಸಮಾಜಕ್ಕೆ ನೀಡಿದ ಕೊಡುಗೆ” ಎಂಬುದರ ಬಗ್ಗೆ ಉಪನ್ಯಾಸವನ್ನು ಶ್ರೀಮತಿ ಶಿವಲೀಲಾ ನಾಗರಾಜ್ ಶಿಕ್ಷಕರು ಪ. ಪೊ. ಕಾಲೇಜು ಪ್ರೌಢಶಾಲಾ ವಿಭಾಗ ಶಿರಾಳಕೊಪ್ಪ ರವರು ಶಿವಶರಣರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ವಿವರಿಸುತ್ತ ಶಿವಶರಣರಾದ ಬಸವಣ್ಣ ನವರು, ಅಲ್ಲಮ ಪ್ರಭು, ಚನ್ನಬಸಣ್ಣ, ಅಕ್ಕಮಹಾದೇವಿ ಮುಂತಾದ ಶರಣರ ವಚನಗಳನ್ನು ವಿಶ್ಲೇಷಣೆ ಮಾಡುತ್ತ ಅವರು ಸಮಾಜದ ಕಲ್ಯಾಣಕ್ಕಾಗಿ ಶ್ರಮಿಸಿದ ಕಾರ್ಯಗಳನ್ನು, ಅನುಭವ ಮಂಟಪದ ಅನುಭವಗಳನ್ನು, ವಚನ ಕಾಲಘಟ್ಟದ ಕ್ರಾಂತಿಯನ್ನು ತುಂಬಾ ವಿವರವಾಗಿ ವಿವರಿಸಿ ಶರಣರ ವಚನಗಳನ್ನು ರಾಗವಾಗಿ ಹಾಡುವುದರ ಮೂಲಕ ಮಕ್ಕಳನ್ನು ರಂಜಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲೆಯ ಮುಖ್ಯೋದ್ಯಪಾಯರಾದ ಶ್ರೀ ಬಿ. ವಿ ಅಶೋಕ್ ಕುಮಾರ್ ವಹಿಸಿ, ಕನ್ನಡ ನಾಡು ಬೆಳವಣಿಗೆ ಗೆ ಕನ್ನಡ ಸಾಹಿತ್ಯದ ಕೊಡುಗೆಯನ್ನು ಮಕ್ಕಳಿಗೆ ವಿವರಿಸಿದರು.

ಶಾಲೆಯ ಶಿಕ್ಷಕ ಶ್ರೀ ಕುಶಾಲ್ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷ ಶ್ರೀ ಡಾಕ್ಟರ್ ಗಂಗಾಧರ, ಸದಸ್ಯರಾದ ಮಲ್ಲನ ಗೌಡ್ರು, ಶಿಕ್ಷಕರಾದ ವಿರೂಪಾಕ್ಷಪ್ಪ ಮತ್ತಿತರರು ಇದ್ದರು.

ಅಕ್ಕಮಹಾದೇವಿ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ರೂಪಾ ಹಾಲೇಶ್ ವಂದಿಸಿದರು.

ವರದಿ: ನವೀದ್ ಶಿರಾಳಕೊಪ್ಪ

Share the news!

Leave a Reply

Your email address will not be published. Required fields are marked *