ಆಗಲಿದ ಮಾಜಿ ಪ್ರಧಾನಿಗಳಿಗೆ ಯೂಥ್ ಕಾಂಗ್ರೆಸ್ ವತಿಯಿಂದ ಶ್ರದ್ದಾಂಜಲಿ…

The Siasat News - Images

ಶಿರಾಳಕೊಪ್ಪ:

ಭಾರತ ಮಾಜಿ ಪ್ರಧಾನ ಮಂತ್ರಿ ಡಾಕ್ಟರ್ ಮನಮೋಹನ್ ಸಿಂಗ್ ರವರ ನಿಧನದ ಹಿನ್ನೆಲೆಯಲ್ಲಿ ಪಟ್ಟಣದ ಬಸ್ ಸ್ಟಾಂಡ್ ಸರ್ಕಲ್‌ನಲ್ಲಿ ಯೂಥ್ ಕಾಂಗ್ರೆಸ್ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.

ಡಾಕ್ಟರ್ ಮನಮೋಹನ್ ಸಿಂಗ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ತುಸು ಹೊತ್ತು ಮೌನಾಚರಣೆ ಮಾಡುವ ಮೂಲಕ ಮೃತ ಸಾಧಕನಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ನ ಯುವ ಮುಖಂಡ, ಇರ್ಫಾನ್ ಮುಹೀಬ್ ಸಾಬ್ ದೇಶವು ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವ ಸಂದರ್ಭದಲ್ಲಿ ತಮ್ಮ ಬುದ್ಧಿವಂತಿಗೆ ಮತ್ತು ಚಾಣಾಕ್ಷತನದಿಂದ ಅದನ್ನು ಪಾರು ಮಾಡಿ ಭಾರತ ದೇಶ ಒತ್ತೆ ಇಟ್ಟ ಚಿನ್ನವನ್ನು ಮರಳಿ ವಾಪಸ್ ತಂದಿರುವ ಹೆಗ್ಗಳಿಕೆ ದಿವಂಗತ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರಿಗೆ ಸಲ್ಲುತ್ತದೆ . ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿ ದೇಶ ಸೇವೆ ಮಾಡಿದ ಪ್ರಧಾನಿಯವರು ಕೊನೆಗೆ ಭಾರತದ ಪ್ರಧಾನಿಯಾಗಿ ಉತ್ತಮ ಸೇವೆ ನೀಡುವುದರ ಮೂಲಕ ದೇಶದ ಸಾಮಾನ್ಯ ಜನರ ಹಿತ ಕಾಯುವ ಕೆಲಸ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಇಂತಹ ವ್ಯಕ್ತಿಯ ಆಗಲಿಕೆ ದೇಶಕ್ಕೆ ದೊಡ್ಡ ನಷ್ಟ ಎಂದರು.

ಶ್ರದ್ಧಾಂಜಲಿ ಸಭೆಯಲ್ಲಿ ಸಮಾಜ ಸೇವಕ ಶುಂಠಿ ಸುಹೇಲ್, ಯುವ ಕಾಂಗ್ರೆಸ್ ನ ಜಾಹಿದ್, ಇಸ್ಮಾಯಿಲ್, ಅತೀಕ್ ಮುಂತಾದವರು ಇದ್ದರು.

ವರದಿ: ನವೀದ್ ಶಿರಾಳಕೊಪ್ಪ

Share the news!

Leave a Reply

Your email address will not be published. Required fields are marked *