ನ್ಯೂಸ್ ಬಿ ಅಲರ್ಟ್ ಡಿಜಿಟಲ್ ಸುದ್ದಿವಾಹಿನಿ ಉದ್ಘಾಟನಾ ಸಮಾರಂಭ

The Siasat News - Images

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನಲ್ಲಿ ಶ್ರೀ ಬಸವರಾಜ್ ಚಂಚಿ ಅವರ ಸಾರತ್ಯದಲ್ಲಿ ನೂತನವಾಗಿವಾಗಿ ಪ್ರಾರಂಭ ವಾದ ನ್ಯೂಸ್ ಬಿ ಅಲರ್ಟ್ ಡಿಜಿಟಲ್ ಸುದ್ದಿವಾಹಿನಿ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ನಡೆಯಿತು,

ಕಾರ್ಯಕ್ರಮದ ದಿವ್ಯಸಾನಿಧ್ಯ ವನ್ನು ಪೂಜ್ಯ ಶ್ರೀ ಶಿವಪೂಜಾ ಶಿವಾಚಾರ್ಯ ಸ್ವಾಮೀಜಿಗಳು ವಹಿಸಿದ್ದು ಅಧ್ಯಕ್ಷತೆ ಶ್ರೀ ಎಸ್ ಎಸ್ ಮಿಟ್ಟಲಕೋಡ ವಕೀಲರು ಬಾದಾಮಿ ಮುಖ್ಯ ಅತಿಥಿಗಳಾಗಿ ಶ್ರೀ ಶಾಂತಕುಮಾರ ಅಂಗಡಿ, ಶ್ರೀ ಡಿ ಬಿ ವಿಜಯಶಂಕರ ಜಿಲ್ಲಾಧ್ಯಕ್ಷರು ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೋಟ ವಹಿಸಿದ್ದರು

ಕಾರ್ಯಕ್ರಮದ ಉದ್ಘಾಟನೆಯನ್ನು ಪರಮಪೂಜ್ಯ ಶ್ರೀಗಳು ರಿಬ್ಬನ್ ಕತ್ತರಿಸುವ ಮುಕಾಂತರ ಕಾರ್ಯಾಲಯ ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಪೂಜ್ಯರು ಸಣ್ಣ ವಯಸ್ಸಿನಲ್ಲಿ ಬಾಗಲಕೋಟ ಜಿಲ್ಲೆ ಅಲ್ಲಿಯೇ ಎಲ್ಲೂ ಇಂತಹ ಸಿಸ್ತುಬದ್ದ ನ್ಯೂಸ್ ಚಾನೆಲ್ ಸ್ಟುಡಿಯೋ ಇಲ್ಲ ಇಲ್ಕಿ ಈ ನಗರದಲ್ಲಿ ಪ್ರಾರಂಭ ಮಾಡಿದ್ದು ದೊಡ್ಡ ಸಾಧನೆ ಎಂದರು.


ನಂತರ ಮಾತನಾಡಿದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಡಿ ಬಿ ವಿಜಯಶಂಕರ್ ಅವರು ಲೈವ್ಹ್ ಸ್ಟುಡಿಯೋ ಮಾಡಿದ್ದು ಅತೀ ದೊಡ್ಡ ಸಾಧನೆ ಹಾಗೂ ಒಬ್ಬ ಪತ್ರಕರ್ತರ ನೋವುಗಳನ್ನು ಅರ್ಥ ಮಾಡಿಕೊಂಡು ಸ್ಥಳಿಯ ಸಂಘ ಸಂಸ್ಥೆ ಹಾಗೂ ಅಧಿಕಾರಿ ಶಾಹಿಗಳು ಸಹಕಾರ ಮತ್ತು ಪ್ರೋತ್ಸಾಹ ನೀಡಿ ಬೆಳೆಸಬೇಕೆಂದರು. ನಂತರ ಮಾತನಾಡಿದ ಶ್ರೀ ಎಸ್ ಎಸ್ ಮಿಟ್ಟಲಕೋಡ ವಕೀಲರು ಬಸವರಾಜ್ ಅವರಿಗೆ ಇನ್ನು ಮುಂದೆ ಪ್ರತಿಯೊಂದು ಕಾನೂನಿನ ಸಲಹೆ ಕೊಡುತ್ತೇನೆ ಅವರ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಶುಭ ಕೋರಿದರು‌. ಅಲ್ಲದೆ ಪ್ರತಿಯೊಬ್ಬ ಪತ್ರಕರ್ತರು ಹಾಗೂ ಜಿಲ್ಲೆ ಅಷ್ಟೇ ಅಲ್ಲದೆ ರಾಜ್ಯಾದ್ಯಂತ ಈ ಚಾನಲ್ ಪ್ರಸಿದ್ದಿ ಹೊಂದಲಿ ಎಂದು ಶುಭಾ ಹಾರೈಸಿದರು, ಈ ಸರಳ ಸಮಾರಂಭದಲ್ಲಿ ವಿವಿಧ ಗಣ್ಯರು,ಹಾಗೂ ಪ್ರಮುಖರು,ಪತ್ರಕರ್ತರು ಉಪಸ್ಥಿತಿ ಇದ್ದರು.

Share the news!

Leave a Reply

Your email address will not be published. Required fields are marked *