Latest
ಕಡೆನಂದಿಹಳ್ಳಿ ಶಾಲೆಯಲ್ಲಿ ಶಿಕ್ಷಕರ ಕೊರತೆ; ಪೋಷಕರೊಂದಿಗೆ ಮಕ್ಕಳ ಪ್ರತಿಭಟನೆ…
ಶಿರಾಳಕೊಪ್ಪ :12-09-2025 ಹತ್ತಿರದ ಕಡೆನಂದಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಧಿಡೀರ್ ವರ್ಗಾವಣೆಯನ್ನು ಖಂಡಿಸಿ ಮಕ್ಕಳು ಹಾಗೂ ಪೋಷಕರು ಶುಕ್ರವಾರ ಪ್ರತಿಭಟನೆ ನಡೆಸಿದರು. ಈ ಶಾಲೆಗೆ ಒಟ್ಟು ಏಳು ಶಿಕ್ಷಕರ ಹುದ್ದೆ ಇದ್ದು, ಇಬ್ಬರು ಈಗಾಗಲೇ ಬೇರೆಡೆ ನಿಯೋಜನೆಯಲ್ಲಿದ್ದಾರೆ. ಇನ್ನು ಮೂವರು ಶಿಕ್ಷಕರನ್ನು ದಿಡೀರ್ ವರ್ಗಾವಣೆ ಮಾಡಲಾಗಿದ್ದು, ಕೇವಲ ಇಬ್ಬರು ಶಿಕ್ಷಕರು ಶಾಲೆ ನಡೆಸುವಂತಾಗಿದೆ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆ ಗಂಭೀರವಾಗಿ ಹಾನಿಗೊಳಗಾಗಿದೆ. ಪೋಷಕರು ಪ್ರಾಥಮಿಕ ಹಂತದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ, ಕೂಡಲೇ…
ಈದ್ ಮೀಲಾದ್ ಪ್ರಯುಕ್ತ ಬಡವರಿಗೆ ಆಹಾರ ಕಿಟ್ ವಿತರಣೆ ಮಾಡಿದ ಸುನ್ನಿ ದಾವತೆ ಇಸ್ಲಾಮಿ ಶಿರಾಳಕೊಪ್ಪ ಘಟಕ…
ಶಿರಾಳಕೊಪ್ಪ:5-9-2025 ಈದ್ ಮಿಲಾದ್ ಉನ್ ನಬಿ ಹಬ್ಬವು ಪ್ರವಾದಿ ಮುಹಮ್ಮದ್ ಅವರ ಜನ್ಮ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ ಮತ್ತು ರಬಿ ಅಲ್-ಅವ್ವಲ್ ತಿಂಗಳ 12 ನೇ ದಿನದಂದು ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಪವಿತ್ರ ದಿನದಂದು, ಮುಸ್ಲಿಮರು ಪ್ರಾರ್ಥನೆಗಳು, ಕುರಾನ್ ಪಠಣಗಳು, ಧರ್ಮೋಪದೇಶಗಳು ಮತ್ತು ಪ್ರವಾದಿಯವರ ಶಾಂತಿ ಮತ್ತು ಕರುಣೆಯ ಬೋಧನೆಗಳನ್ನು ಪ್ರತಿಬಿಂಬಿಸುವ ದಾನ ಕಾರ್ಯಗಳಿಗಾಗಿ ಒಟ್ಟುಗೂಡುತ್ತಾರೆ. ಪಟ್ಟಣದ ಸುನ್ನಿ ದಾವತೆ ಇಸ್ಲಾಮಿ ಸಂಘಟನೆ ವತಿಯಿಂದ ಪ್ರವಾದಿಯವರ 1500 ನೇ ಹುಟ್ಟುಹಬ್ಬದ ಅಂಗವಾಗಿ ಬಡವರಿಗೆ, ನಿರ್ಗತಿಕರಿಗೆ ಆಹಾರ ಕಿಟ್ ಗಳನ್ನು…
ಶಿರಾಳಕೊಪ್ಪ ಟೌನ್ ಕಾಂಗ್ರೆಸ್ ಗೆ ನೂತನ ಸಾರಥಿಯಾಗಿ ನಯಾಜ್ ಅಹ್ಮದ್ ಖುರೇಶಿ ನೇಮಕ…
ಶಿರಾಳಕೊಪ್ಪ:4-8-2025 ಟೌನ್ ಕಾಂಗ್ರೆಸ್ ಸಮಿತಿ ಯ ನೂತನ ಅಧ್ಯಕ್ಷರಾಗಿ ನಯಾಜ್ ಅಹ್ಮದ್ ಖುರೇಶಿಯವರನ್ನು ನೇಮಕ ಮಾಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ನಯಾಜ್ ರವರ ತಂದೆಯೂ ಕೊಡ ಸುದೀರ್ಘ ಅವಧಿಗೆ ಟೌನ್ ಅಧ್ಯಕ್ಷರಾಗಿ ಪಕ್ಷದ ಸೇವೆ ಸಲ್ಲಿಸಿದ್ದು ಈಗ ಅವರ ಮಗ ಶಿಕಾರಿಪುರ ತಾಲ್ಲೂಕು ಯೂಥ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರಾಗಿ ಹಾಗೂ ಪಕ್ಷದ ವಿವಿಧ ಹಂತದ ಜವಾಬ್ದಾರಿಗಳನ್ನು ನಿರ್ವಹಿಸಿದ ನಯಾಜ್ ಅವರಿಗೆ ಪಟ್ಟಣದ ಕಾಂಗ್ರೆಸ್ ಪಕ್ಷದ ಸಾರಥ್ಯ…
ಶಿರಾಳಕೊಪ್ಪದ ಎಂ. ಆರ್ ಲೇಔಟ್ ನಲ್ಲಿ ಪ್ರಥಮ ಬಾರಿಯ ಗಣೇಶನ ಮೂರ್ತಿ ಪ್ರತಿಷ್ಠಾಪನೆ….
ಶಿರಾಳಕೊಪ್ಪ:29-8-2025 ಪಟ್ಟಣದ ಎಂ.ಆರ್ ಲೇಔಟ್, ಅರುಣೋದಯ ಲೇಔಟ್ ನಲ್ಲಿ ಪ್ರಥಮ ಬಾರಿಗೆ ಶೀ ಮಹಾಗಣಪತಿ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಯಿತು. ಕಲಾವಿದ ರತ್ನಾಕರ ಭಂಡಾರಿಯವರು ನಿರ್ಮಿಸಿದ ಕೇದಾರನಾಥ ದೇವಸ್ಥಾನ ಹಿನ್ನೆಲೆಯುಳ್ಳ ಮನಮೋಹಕ ಸ್ತಬ್ದ ಚಿತ್ರ ಜನರ ಆಕರ್ಷಣೆಗೆ ಕಾರಣವಾಗಿದೆ. ಸುಮಾರು 150 ಮನೆಗಳು ಇರುವ ಎಂ ಆರ್ ಲೇಔಟ್, ಅರುಣೋದಯ ಲೇಔಟ್ ನಲ್ಲಿ ರಸ್ತೆ ಸೇರಿದಂತೆ, ಚಿರಂಡಿ, ನೀರು, ಬೆಳಕಿನ ಸೌಕರ್ಯವಿಲ್ಲದ ಕಾರಣ ಸ್ಥಳೀಯರು, ವೃದ್ಧರು, ಮಕ್ಕಳು ಪರದಾಡುವ ಪರಿಸ್ಥಿತಿ ಎದುರಾಗಿದ್ದು ಸಂಭಂದ ಪಟ್ಟವರು ಗಮನ ಹರಿಸಬೇಕಾಗಿ ಸ್ಥಳೀಯರ…
ಶಿರಾಳಕೊಪ್ಪದ ಶ್ರೀ ಬಸವೇಶ್ವರ ದೇವಸ್ಥಾನ ವತಿಯಿಂದ 62ನೇ ವರ್ಷದ ಮಹಾಗಣಪತಿ ಪ್ರತಿಷ್ಠಾಪನೆ…..
ಶಿರಾಳಕೊಪ್ಪ:29-8-2025 ಪಟ್ಟಣದ ಪ್ರಸಿದ್ಧ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ 62ನೇ ವರ್ಷದ ಶ್ರೀ ಗೌರಿ ಹಾಗೂ ಶ್ರೀ ಮಹಾ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಯಿತು. ಶ್ರೀ ಮಹಾ ಗಣಪತಿ ಉತ್ಸವ ಸಮಿತಿ ಶಿರಾಳಕೊಪ್ಪ ದ ಅಧ್ಯಕ್ಷರಾದ ಎಂ. ಜೆ ವಿಜಯ ಕುಮಾರ ರವರ ಸಾರತ್ಯ ದಲ್ಲಿ ನಿತ್ಯವೂ ವಿಭಿನ್ನ ಕಾರ್ಯಕ್ರಮ ಗಳು ಜರುಗಲಿದ್ದು ದಿನಾಂಕ 3-9-2025 ರಂದು ಬುಧವಾರ ಕಡೇನಂದಿಹಳ್ಳಿಯ ದುಗ್ಲಿ ಮಠದ ಶ್ರೀ ಷ. ಬ್ರ. ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ…
ಮತ್ತೊಂದು ಹಂತದ ಟೋಲ್ ಹೋರಾಟಕ್ಕೆ ಮುಹೂರ್ತ ಫಿಕ್ಸ್….. ಸೆಪ್ಟೆಂಬರ್ 18ಕ್ಕೆ ಬ್ರಹತ್ ಪ್ರತಿಭಟನೆ ಘೋಷಿಸಿದ ಹೋರಾಟ ಸಮಿತಿ.
ಶಿರಾಳಕೊಪ್ಪ: 23-8-2025 ರಾಜ್ಯ ಹೆದ್ದಾರಿ 57 ರಲ್ಲಿ ಶಿವಮೊಗ್ಗ ಜಿಲ್ಲೆ ಕಲ್ಲಾಪುರ ಮತ್ತು ಕುಟ್ರ ಹಳ್ಳಿಯಲ್ಲಿ ನಿರ್ಮಿಸಲಾದ ಟೂಲ್ ಗಳ ವಿರುದ್ದ ನಡೆಯುತ್ತಿರುವ ಹೋರಾಟವು ವಿಧಾನ ಸಭೆ ಅಧಿವೇಶನದಲ್ಲಿ ಶಿಕಾರಿಪುರದ ಶಾಸಕ ಬಿ ವೈ ವಿಜಯೇಂದ್ರ ವಿಷಯ ಪ್ರಸ್ತಾಪ ಮಾಡಿದ ನಂತರ ಮತ್ತೊಂದು ತಿರುವು ಪಡೆದು ಕೊಂಡಿದೆ. ಶನಿವಾರ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನ ದಲ್ಲಿ ನಡೆದ ಸಮಿತಿಯ ಸಭೆಯ ನಂತರ ಮತ್ತೊಂದು ಬ್ರಹತ್ ಹೋರಾಟ ಮಾಡುವ ವಿಚಾರವಾಗಿ ಸಮಿತಿ ವತಿಯಿಂದ ನಿರ್ಮಾಣ ಕೈ ಗೊಳ್ಳಲಾಗಿದೆ. ಸಭೆಯ…
ಟೂಲ್ ಗೇಟ್ ವಿಚಾರವಾಗಿ ಕಲಾಪದಲ್ಲಿ ಸ್ಥಳೀಯ ರಾಜಕೀಯ ಪ್ರತಿನಿಧಿಗಳು ಧ್ವನಿ ಎತ್ತಲಿ – ಪ್ಯಾಟಿ ಈರಣ್ಣ…
ಶಿರಾಳಕೊಪ್ಪ:14-8-2025 ತಡಸ- ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ರಾಜ್ಯ ಸರಕಾರದ ವತಿಯಿಂದ ಕುಟ್ರಹಳ್ಳಿ ಮತ್ತು ಕಲ್ಲಾಪುರ ಬಳಿ ಅಳವಡಿಸಿರುವ ಟೂಲ್ ಗಳ ವಿಚಾರವಾಗಿ ನಡಿಯುತ್ತಿರುವ ಕರ್ನಾಟಕ ವಿಧಾನಸಭೆ ಆಧಿವೇಶನದಲ್ಲಿ ಸಂಬಂಧ ಪಟ್ಟ ಸ್ಥಳೀಯ ರಾಜಕೀಯ ಪ್ರತಿನಿಧಿ ಗಳು ಧ್ವನಿ ಎತ್ತ ಬೇಕು, ಚರ್ಚೆ ನಡೆಸಿ ಸ್ಥಳೀಯ ಜನ ಸಾಮಾನ್ಯರಿಗೆ ಆಗುತ್ತಿರುವ ತೊಂದರೆಯ ನಿವಾರಣೆ ಮಾಡಬೇಕೆಂದು ರಾಜ್ಯ ರೈತ ಸಂಘದ ಜಿಲ್ಲಾ ಗೌರವಾಧಕ್ಷ ಈರಣ್ಣ ಪ್ಯಾಟಿ ಆಗ್ರಹಿಸಿದರು. ಪತ್ರಿಕಾಘೋಷ್ಟಿ ಯಲ್ಲಿ ಮಾತನಾಡಿದ ಅವರು ಶಿಕಾರಿಪುರ ತಾಲ್ಲೂಕು ಟೂಲ್ ವಿರೋಧಿ ಹೋರಾಟ…
ನಿವೃತ್ತಿ ಹೊಂದ ನೆಚ್ಚಿನ ಶಿಕ್ಷಕನಿಗೆ ವಿಜೃಂಭಣೆಯ ಬೀಳ್ಕೊಡುಗೆ ನೀಡಿದ ವಿದ್ಯಾರ್ಥಿಗಳು….
ರಾಣಿಬೆನ್ನೂರ: 7-8-2025 ಪಟ್ಟಣದ ಆಂಗ್ಲೋ ಉರ್ದು ಪ್ರೌಢಶಾಲೆ ಯಲ್ಲಿ ಕಳೆದ ಸುಮಾರು ವರ್ಷಗಳಿಂದ ಭೋದಕರಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಶಿಕ್ಷಕ ಜನಾಬ್ ಅನೀಸ್ ಮೆಹಮೋದ್ ಖಾನ್ ಹರಿಹರ ರವರನ್ನು ಶಾಲೆಯ ಹಳೆ ವಿದ್ಯಾರ್ಥಿಗಳು ಗೌರವಿಸಿ, ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡುಗೆ ಮಾಡುವುದರ ಮೂಲಕ ತಮ್ಮ ನೆಚ್ಚಿನ ಮೇಷ್ಟ್ರಿಗೆ ಗುರುವಂದನೆ ಅರ್ಪಣೆ ಮಾಡಿದ್ದಾರೆ. ಬುಧವಾರ ಪಟ್ಟಣದ ಟಿಪ್ಪು ಸುಲ್ತಾನ್ ಮ್ಯಾರೇಜ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಹಾಲಿ ವಿದ್ಯಾರ್ಥಿಗಳು, ಶಾಲೆಯ ಹಳೆ ವಿದ್ಯಾರ್ಥಿಗಳು ಮತ್ತು ಪಟ್ಟಣದ ನಿವಾಸಿಗಳು ಸೇರಿ ಒಗ್ಗಟ್ಟಿನಿಂದ…
ಜಮೀರ್ ಅಹ್ಮದ್ ಖಾನ್ ಹುಟ್ಟುಹಬ್ಬದ ಪ್ರಯುಕ್ತ ಶಿರಾಳಕೊಪ್ಪದಲ್ಲಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಿದ ಅಭಿಮಾನಿಗಳು….
ರಾಜ್ಯ ವಖ್ಫ್ ಮತ್ತು ಅಲ್ಪ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹಮದ್ ಖಾನ್ ರವರ ಹುಟ್ಟುಹಬ್ಬದ ಅಂಗವಾಗಿ ಉಡುಗಣಿಯ ಮುರಾರ್ಜಿದೇಸಾಯಿ ವಸತಿ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕಗಳು, ಲೇಖನಿಗಳು ಮತ್ತು ಪುಟಾಣಿಗಳಿಗೆ ಸಿಹಿಯನ್ನು ಹಂಚುವ ಮೂಲಕ ಸಂಭ್ರಮದ ಜನುಮ ದಿನವನ್ನು ಅವರ ಅಭಿಮಾನಿಗಳು ಆಚರಣೆ ಮಾಡಿದರು. ಶಿರಾಳಕೊಪ್ಪ:4/8/2025 ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹಿರಿಯ ಮುಖಂಡ ಆನವಟ್ಟಿ ಬಾಷ ಸಾಬ್ ಜಮೀರ್ ಅಹ್ಮದ್ ರವರದ್ದು ಸದಾ ಬಡವರ ಪರವಾಗಿ ಮಿಡಿಯುವ ಮನಸ್ಸು…
3%ಲಂಚಕ್ಕೆ ಬೇಡಿಕೆ ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್ ಲೋಕಾಯುಕ್ತ ಬಲೆಗೆ….
ಶಿರಾಳಕೊಪ್ಪ:16-06-2025 ಪಿ ಡಬ್ಲ್ಯೂ ಡಿ ಗುತ್ತಿಗೆದಾರನಿಗೆ 3%ಲಂಚಕ್ಕೆ ಬೇಡಿಕೆ ಇಟ್ಟ ಸೊರಬ ತಾಲ್ಲೂಕು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಆಫೀಸರ್ ಪರಶುರಾಮ ಎಚ್ ನಾರಾಳ ಎಂಬುವ ಅಧಿಕಾರಿಯನ್ನು ಲೋಕಾ ಯುಕ್ತ ಪೂಲೀಸರು ಇಂದು ಸಂಜೆ ಬಲೆಗೆ ಬೀಳಿಸಿದ್ದಾರೆ. ದೋರುದಾರರಾದ ಗುತ್ತಿಗೆ ದಾರ ಲಿಂಗರಾಜ ಉಳ್ಳಾಗಡ್ಡಿರವರುಸೊರಬ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ದಾಂಬರೀಕರಣ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಂಭಂಧಿಸಿದಂತೆ ಒಟ್ಟು 77,59,437ರೊ ಗಳ ಕಾಮಗಾರಿಗಳನ್ನು ಮುಗಿಸಿ ಸದರಿ ಕಾಮಗಾರಿಗಳ ಹಣವನ್ನು ಮಂಜೂರು…

