Headlines
The Siasat News - Images

ಭೋಗಿ ಗ್ರಾಮದ ಸರಕಾರಿ ಶಾಲೆಯಲ್ಲಿ ವಾರ್ಷಿಕೋತ್ಸವದ ಸಂಭ್ರಮ: ಮಕ್ಕಳಿಂದ ಸಾಂಸ್ಕೃತಿಕ ವೈಭವ….

ಶಿರಾಳಕೊಪ್ಪ:11/02/2026 ಹತ್ತಿರದ ಭೋಗಿ ಗ್ರಾಮದ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜೃಂಭಣೆಯ ಶಾಲಾ ವಾರ್ಷಿಕೋತ್ಸವ ಸೋಮವಾರ ನಡೆಯಿತು. ಅತೀ ಸಣ್ಣ ಗ್ರಾಮವಾದರೂ ಅಂದು ಅಲ್ಲಿ ಮಾತ್ರ ಹಬ್ಬದ ಸಡಗರ ಸಂಭ್ರಮ. ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲದ ರೀತಿಯಲ್ಲಿ ಪುಟ್ಟ ಪುಟಾಣಿಗಳ ಪುಟಿವ ಕಾರಂಜಿ ಕಾರ್ಯಕ್ರಮದ ಆಯೋಜನೆ, ಶಾಲೆ ಮತ್ತು ಶಾಲಾ ಆವರಣದ ಅಲಂಕಾರ, ಬ್ರಹತ್ ಗಾತ್ರದ ವೇದಿಕೆ, ಗ್ರಾಮಸ್ಥರಿಂದ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿ ಗಳಿಗೆ ಮನಸಾರೆ ಸ್ವಾಗತ ಕೋರಿದ ಪರಿ ಬಹಳ ಆಕರ್ಷಿತವಾಗಿತ್ತು. ಇಡೀ…

Read More
The Siasat News - Images

ಹ್ಯಾಮರ್ ಹಿಡಿಯೋ ಕೈಯಲ್ಲಿ ಹಂತಕ ಬಂದೋಕು! ಶಿಕಾರಿಪುರದ ಕಾರ್ಪೆಂಟರ್ ಮನೆಯಲ್ಲೇ ಇತ್ತು ಸೀಕ್ರೆಟ್ ಗನ್ ಫ್ಯಾಕ್ಟರಿ….

ಶಿಕಾರಿಪುರ:5/1/2026 ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಈಗ ಗಡಗಡ ಎನ್ನುತ್ತಿದೆ ಒಬ್ಬ 67 ವರ್ಷದ ವೃದ್ಧ ಕಾರ್ಪೆಂಟರ್ ತನ್ನ ಮರದ ಕೆಲಸದ ಮರೆಯಲ್ಲಿ ಮಾಡುತ್ತಿದ್ದ ಆ ಭೀಕರ ಕೃತ್ಯ ಈಗ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ವೃದ್ಧನ ಸೀಕ್ರೆಟ್ ಆಪರೇಷನ್: ತಾಲೂಕಿನ ಭದ್ರಾಪುರ ಗ್ರಾಮದ ಲಕ್ಷ್ಮಣಪ್ಪ 67 ಎಂಬವ ಹಗಲಿನಲ್ಲಿ ಸುತ್ತಿಗೆ ಹಿಡಿದು ಬಡಗಿ ಕೆಲಸ ಮಾಡುತ್ತಿದ್ದರೆ ಕತ್ತಲಾಗುತ್ತಿದ್ದಂತೆ ಅದೇ ಮನೆಯಲ್ಲಿ ನಾಡಬಂದೊಕು ಗಳನ್ನು ತಯಾರಿಸುತ್ತಿದ್ದ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ…

Read More
The Siasat News - Images

ಪೌತಿ ಖಾತೆ ಬದಲಾವಣೆಗೆ 4ಲಕ್ಷ ಲಂಚ ಬೇಡಿಕೆ ಇಟ್ಟ ಶಿಕಾರಿಪುರದ ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ…

ಶಿಕಾರಿಪುರ:30/1/2026. ಜಮೀನಿನ ಪೌತಿ ಖಾತೆ ಬದಲಾವಣೆ ಪ್ರಕ್ರಿಯೆಗೆ 4ಲಕ್ಷ ಹಣದ ಬೇಡಿಕೆ ಇಟ್ಟು ಹಣ ಸ್ವೀಕರಿಸುತ್ತಿದ್ದ ಸಂಧರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿಯೊಬ್ಬರನ್ನು ಲೋಕಾಯುಕ್ತ ಪೋಲೀಸರು ಶುಕ್ರವಾರ ಬಲೆಗೆ ಬೀಳಿಸಿದ್ದಾರೆ. ಶಿಕಾರಿಪುರ ತಾಲ್ಲೂಕಿನ ಚಿಕ್ಕಜಂಬೂರು ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ವಿಠಲ್ ಕೋಲ್ಹರ ಅವರು ಪಟ್ಟಣದ ನೌಕರರ ಕ್ಯಾಂಟೀನ್ ನಲ್ಲಿ 1ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಬಂಧಿತರಾಗಿದ್ದಾರೆ. ಚಿಕ್ಕಜಂಬೂರು ಗ್ರಾಮದ ಜಿಕ್ರಿಯಾ ಬೇಗ್ ಅವರು ತಮ್ಮ ತಂದೆಯ ವಿಲ್ ಪತ್ರದಂತೆ ಜಮೀನಿನ ಖಾತೆ ಬದಲಾವಣೆ ಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕ್ರಿಯೆ…

Read More
The Siasat News - Images

ಬುದ್ಧಿವಂತರು ಬಡವರಾಗುವುದು ಏಕೆ?’– ಲೇಖಕ ನವೀನ್ ಕುಮಾರ್ ಎಂ ಅವರ ಚೊಚ್ಚಲ ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಗೌರವ…

ಶಿಕಾರಿಪುರ/ಶಿರಾಳಕೊಪ್ಪ: 28/1/2026 ಶಿಕಾರಿಪುರದ ಲೇಖಕ ಹಾಗೂ ಪತ್ರಕರ್ತ ನವೀನ್ ಕುಮಾರ್ ಎಂ ಅವರು ಬರೆದಿರುವ “ಬುದ್ಧಿವಂತರು ಬಡವರಾಗುವುದು ಏಕೆ?” ಎಂಬ ಕನ್ನಡದ ಪ್ರಯೋಗಾತ್ಮಕ ಕೃತಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಡಿಯಲ್ಲಿ ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡುವ ಪ್ರೋತ್ಸಾಹ ಧನ (2025–26)ಕ್ಕೆ ಆಯ್ಕೆಯಾಗಿದೆ. ಈ ಕೃತಿ ಲೇಖಕರ ಮೊದಲ ಪುಸ್ತಕವಾಗಿದ್ದು, ಕನ್ನಡ ಸಾಹಿತ್ಯದಲ್ಲಿ ವಿರಳವಾದ ನ್ಯೂರೋ ಎಕನಾಮಿಕ್ಸ್ (Neuro Economics) ವಿಷಯವನ್ನು ಸರಳ ಭಾಷೆಯಲ್ಲಿ ಓದುಗರಿಗೆ ತಲುಪಿಸುವ ಉದ್ದೇಶ ಹೊಂದಿದೆ. ಹಣ ಮತ್ತು ಮಾನವ ಮನಸ್ಸಿನ ನಡುವಿನ…

Read More
The Siasat News - Images

ನಾಟಕಗಳು ಸಮಾಜದ ವಿವಿಧ ಸ್ತರದ ಜನರನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ-ರಂಗಾಯಣ ನಿರ್ದೇಶಕ ಪ್ರಸನ್ನ ಡಿ ಸಾಗರ್…

ಶಿಕಾರಿಪುರ:26/1/2026 ಇತ್ತೀಚಿನ ದಿನಗಳಲ್ಲಿ ಮನೋರಂಜನೆ ಎಂಬುವುದುದು ಪ್ರತಿ ಮನೆ ಮನೆಗೆ ಲಗ್ಗೆ ಇಟ್ಟಿದೆ. ಮನೆಯಲ್ಲೇ ಎಲ್ಲಾ ಮನೋರಂಜನೆ ಪಡೆಯುವಂತಹ ಈ ದಿನಗಳಲ್ಲಿ ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯುವ ಅವಕಾಶ ಗಳು ಕ್ಷೀಣಿಸುತ್ತಿದ್ದು ಜನಗಳಲ್ಲಿ ಸಂಕುಚಿತ ಮನೋಭಾವನೆ ಹೆಚ್ಚಾಗುತ್ತಿದೆ ಎಂದು ರಂಗಾಯಣ ಶಿವಮೊಗ್ಗದ ನಿರ್ದೇಶಕ ಪ್ರಸನ್ನ ಡಿ ಸಾಗರ್ ತಿಳಿಸಿದರು. ರಂಗಾಯಣ ಶಿವಮೊಗ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗುಡಿ ಸಾಂಸ್ಕೃತಿಕ ಕೇಂದ್ರ ಶಿಕಾರಿಪುರ ಹಾಗೂ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ “ನಮ್ಮೊಳಗೊಬ್ಬ ಗಾಂಧಿ” ಎಂಬ…

Read More
The Siasat News - Images

ಗುರು ಪರಂಪರೆ ಶಾಶ್ವತ :ಶಿರಹಟ್ಟಿ ಶ್ರೀ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮಿಗಳು…

ಶಿರಾಳಕೊಪ್ಪ :21/01/2026 ದೇಶದಲ್ಲಿ ಹಲವಾರು ರಾಜ ಪರಂಪರೆಗಳು ಆಳಿದರು-ಅಳಿದೂ ಹೋದರು. ಆದರೆ ಗುರು ಪರಂಪರೆಗಳು ಉಳಿದು ಬೆಳೆದುಕೊಂಡು ಬಂದಿವೆ. ಯಾವುದೇ ಕಾಲಕ್ಕೂ ಮಠಗಳಿಗೆ ಗುರು ಪರಂಪರೆಗಳಿಗೆ ಅಳಿವು ಎಂಬುದು ಇಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕೆಂದು ಶಿರಹಟ್ಟಿ ಶ್ರೀ ಜಗದ್ಗುರು ಫಕೀರೇಶ್ವರ ಭಾವೈಕ್ಯತಾ ಸಂಸ್ಥಾನಮಠದ ಶ್ರೀ ಮನ್ ಮಹಾರಾಜ ನಿರಂಜನ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ನುಡಿದರು. ಅವರು ಮಂಗಳವಾರ ಶಿಕಾರಿಪುರ ತಾಲೂಕ ಕಡೇನಂದಿಹಳ್ಳಿ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಪರಂಪರೆ ಜಾತ್ರೋತ್ಸವ,…

Read More
The Siasat News - Images

ತೊಗರ್ಸಿಯ ಡಿಸಿಸಿ ಬ್ಯಾಂಕ್ ನಲ್ಲಿ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ…

ಶಿರಾಳಕೊಪ್ಪ /ತೊಗರ್ಸಿ:21/01/2026 ಹತ್ತಿರದ ತೋಗರ್ಸಿ ಗ್ರಾಮದಲ್ಲಿ ದಿನಾಂಕ 20.01.2026 ಮಂಗಳವಾರ ರಂದು ಡಿಸಿಸಿ ಬ್ಯಾಂಕಿನಲ್ಲಿ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಅಮೂಲ್ಯ ಆರ್ಥಿಕ ಸಾಕ್ಷರತಾ ಸೆಂಟರ್ ಶಿಕಾರಿಪುರದ ಶ್ರೀ ಗುಡದಯ್ಯ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಎಲ್ಲಾ ಸ್ವಸಹಾಯ ಗುಂಪಿನ ಮಹಿಳೆಯರಿಗೆ ಆರ್ಥಿಕತೆಯಿಂದ ಮುಕ್ತರಾಗಿ ಸಹಜ ಜೀವನ ನಡೆಸಲು ಹಣವನ್ನು ಹೇಗೆ ಗಳಿಸಬೇಕು ಗಳಿಸಿದ ಹಣವನ್ನು ಹೇಗೆ ಉಳಿಸಬೇಕು ಉಳಿಸಿದ ಹಣವನ್ನು ಹೇಗೆ ಬಳಸಬೇಕು ಎಂಬ ಮಾಹಿತಿಯ ಜೊತೆಗೆ ಜೀವವಿಮೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮಾಡಿಸುವುದಾಗಿ ಮಾಹಿತಿ…

Read More
The Siasat News - Images

ಶಿವಾಚಾರ್ಯ ಸ್ವಾಮೀಜಿಗಳ ಸದ್ಬೋಧನಾ ಪಾದಯಾತ್ರೆ: ಧಾರ್ಮಿಕ ಜಾಗೃತಿಗಾಗಿ ಸ್ವಾಮೀಜಿಗಳ ನಡಿಗೆ…

ಶಿರಾಳಕೊಪ್ಪ: 19/01/2026 ಧರ್ಮದ ಮೂಲ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮತ್ತು ಸಾಮಾಜಿಕ ಸಾಮರಸ್ಯವನ್ನು ಎತ್ತಿಹಿಡಿಯುವ ಉದ್ದೇಶದಿಂದ ‘ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ’ ಹಾಗೂ ‘ಕಡೆನಂದಿಹಳ್ಳಿಯ ಶ್ರೀ ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮ‘ದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಕಡೆನಂದಿಹಳ್ಳಿ ಗ್ರಾಮದಲ್ಲಿ ಅದ್ಧೂರಿ ‘ ಶಿವಾಚಾರ್ಯರ ಸದ್ಬೋಧನಾ ಪಾದಯಾತ್ರೆ’ ನಡೆಯಿತು. ಕಡೆನಂದಿಹಳ್ಳಿಯ ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಆರಂಭವಾದ ಈ ಪಾದಯಾತ್ರೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಪಾದಯಾತ್ರೆಯ ಉದ್ದಕ್ಕೂ ವಿವಿಧ ಜಿಲ್ಲೆಗಳ ಮಠಾಧೀಶರು ಮತ್ತು ನೂರಾರು ಭಕ್ತಾದಿಗಳು…

Read More
The Siasat News - Images

45000ಸಾವಿರಕ್ಕೂ ಹೆಚ್ಚು ನಿರುದ್ಯೋಗಿಗಳಿಗೆ ಉದ್ಯೋಗಿಗಳಾಗಿ ಮಾಡಿದ ಕೀರ್ತಿ ಆಳ್ವಾಸ್ ವಿದ್ಯಾ ಸಂಸ್ಥೆಗಿದೆ- ವಿವೇಕ್ ಆಳ್ವಾ…

ಶಿರಾಳಕೊಪ್ಪ:18/1/2026 ಆಳ್ವಾಸ್ ವಿದ್ಯಾ ಸಂಸ್ಥೆ ಕಳೆದ 18 ವರ್ಷದಿಂದ ಉದ್ಯೋಗ ಮೇಳಗಳನ್ನು ರಾಜ್ಯ ಹಾಗೂ ಅಂತರಾಜ್ಯ ಮಟ್ಟದಲ್ಲಿ ಆಯೋಜಿಸಿ 45,000ಕ್ಕೂ ಹೆಚ್ಚು ನಿರುದ್ಯೋಗಿ ಗಳನ್ನು ಉದ್ಯೋಗಗಳು ಲಭಿಸುವಂತೆ ಮಾಡಿದೆ ಎಂದು ಆಳ್ವಾಸ್ ವಿದ್ಯಾ ಸಂಸ್ಥೆ ಮೊಡಬಿದರೆಯ ವಿವೇಕ್ ಆಳ್ವಾ ಹೇಳಿದರು. ಪಟ್ಟಣದ ನೇರಲಗಿ ಸಮುದಾಯ ಭವನದಲ್ಲಿ ಶನಿವಾರ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಶಿಕಾರಿಪುರ ಹಾಗೂ ಆಳ್ವಾಸ್ ಚಿಕ್ಕನ ಪ್ರತಿಷ್ಠಾನ ಮೂಡಬಿದರೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಉದ್ಯೋಗ ಮೇಳದ ಪೂರ್ವಭಾವಿ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು ಶಿಕಾರಿಪುರ ತಾಲ್ಲೂಕಿನ…

Read More
The Siasat News - Images

ಪಿ ಎಂ ಕಿಸಾನ್ ಹಣ ಪಡೆಯಲು ಕೇಂದ್ರದ ಗುರುತಿನ ಐಡಿ ಕಡ್ಡಾಯ….

ಶಿಕಾರಿಪುರ:18/01/2026 ಪಿಎಂ-ಕಿಸಾನ್‌ ಪ್ರೋತ್ಸಾಹಧನ ಪಡೆಯಲು ಕೇಂದ್ರ ಸರ್ಕಾರದ ರೈತರ ಗುರುತಿನ ಐಡಿ ಕಡ್ಡಾಯ ಎಂದು ಸಹಾಯಕ ಕೃಷಿ ನಿರ್ದೇಶಕ ಕಿರಣ್ ಕುಮಾರ್ ಹರ್ತಿ ಹೇಳಿದರು. ಶನಿವಾರ ಸುದ್ಧಿಗಾರ ರೊಂದಿಗೆ ಮಾತನಾಡಿದ ಅವರು ದಿನಾಂಕ: 01-02-2019ರ ಪೂರ್ವದಲ್ಲಿ ಜಮೀನು ಹೊಂದಿರುವ ರೈತರಿಗೆ ಕೇಂದ್ರ ಸರ್ಕಾರದ ಪಿಎಂ-ಕಿಸಾನ್‌ ಯೋಜನೆ ವಾರ್ಷಿಕ ರೂ.6000/- ಪ್ರೋತ್ಸಾಹಧನವನ್ನು ಇಲ್ಲಿಯವರೆಗೆ ಪಾವತಿಸಲಾಗುತ್ತಿದ್ದು. ಈ ಪ್ರೋತ್ಸಾಹಧನವನ್ನು ಮುಂದುವರಿಸಲು ಪ್ರೂಟ್ಸ್‌ ತಂತ್ರಾಂಶದ ಗುರುತಿನ ಸಂಖ್ಯೆಯಂತೆ ಕೇಂದ್ರ ಸರ್ಕಾರವು ಅಗ್ರಿಸ್ಟ್ಯಾಕ್‌ ಯೋಜನೆ ಅಡಿ ಗುರುತಿನ ಸಂಖ್ಯೆಯನ್ನು ಸೃಜಿಸುವುದು ಕಡ್ಡಾಯಗೊಳಿಸಲಾಗಿದೆ. ಈಗಾಗಲೇ…

Read More