ಶಿವಮೊಗ್ಗ:29/11/2024
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಪಕ್ಷದ ಶಿರಾಳಕೊಪ್ಪ ಘಟಕದ ಕಛೇರಿ ಉದ್ಘಾಟನೆ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾದ ರಿಯಾಜ್ ಫರಂಗಿಪೇಟೆ ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು.
ಶಿರಾಳಕೊಪ್ಪ ಪಟ್ಟಣದ ಹಿರೇಕೆರೂರು ಮುಖ್ಯ ರಸ್ತೆಯಲ್ಲಿ ನಡೆದ ಪಕ್ಷದ ಕಛೇರಿ ಉದ್ಘಾಟನೆ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಎಸ್ ಡಿ ಪಿ ಐ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ವಾಗ್ಮಿ ರಿಯಾಜ್ ಫರಂಗಿಪೇಟೆ ನೇತೃತ್ವದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಸುಮಾರು 50ಕಿಂತ ಹೆಚ್ಚು ಜನ SDPI ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ರಿಯಾಜ್ ಪರಂಗಿಪೇಟೆ ಇನ್ಮುಂದೆ ಭ್ರಷ್ಟ ರಾಜಕಾರಣಿಗಳ ಎದೆಯಲ್ಲಿ ನಡುಕ ಉಂಟಾಗುತ್ತದೆ, ನ್ಯಾಯದ ಪರ, ಹಸಿವು ಮುಕ್ತ , ಭಯ ಮುಕ್ತ ಶಿರಾಳಕೊಪ್ಪ ಮಾಡಲು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತಯಾರಾಗಿದೆ ಎಂದರು.
ಜಿಲ್ಲಾಧ್ಯಕ್ಷ ಇಮ್ರಾನ್ ಮಾತನಾಡಿ ಮುಂದಿನ ದಿನಗಳಲ್ಲಿ ಮೂಲಭೂತ ಸೌಕರ್ಯಗಳು ಪಡೆಯಲು ಕಛೇರಿಗಳಿಗೆ ಅಲೆದಾಟ ಮಾಡಬೇಕಾಗಿಲ್ಲ ನಾವು ಹೋರಾಟ ಮತ್ತು ಶಿರಾಳಕೊಪ್ಪ ಪುರಸಭೆಗೆ ನಮ್ಮ ಕೌನ್ಸಿಲರ್ ಗಳನ್ನು ಪುರಸಭೆ ಗೆ ಕಳುಹಿಸುವ ಮೂಲಕ ಜನರ ಸಮಸ್ಯಗಳನ್ನು ಬಗೆಹರಿಸುವ ಕೆಲಸ ಮಾಡಲಿದ್ದೇವೆ ಎಂದರು.
.ಜಿಲ್ಲಾ ಅಧ್ಯಕ್ಷ ಇಮ್ರಾನ್ ಶಿರಾಳಕೊಪ್ಪ ಪಟ್ಟಣ ಘಟಕದ ನೂತನ ಸಮಿತಿ ಘೋಷಣೆ ಮಾಡಿದರು.
ಮುಸದ್ದಿಕ್ -ಅಧ್ಯಕ್ಷರು.

ವಸೀಮ್ -ಕಾರ್ಯದರ್ಶಿ, ಅಲ್ಬಾಜ್ ಉಪಾಧ್ಯಕ್ಷರು, ರಾಹಿಲ್ -ಉಪಾಧ್ಯಕ್ಷರು , ಮುಹೀಬ್ ಉಲ್ಲಾ -ಜಂಟಿ ಕಾರ್ಯದರ್ಶಿ , ಮುಹಮ್ಮದ್ ಅಲಿ -ಖಜಾಂಚಿ.
ಸದಸ್ಯರುಗಳು ನಯಾಜ್ .ಸುಹೇಲ್ .ರಾಜಿಕ್,ಮುಖೇಬ್ ಮತ್ತು ಜಿಕ್ರಿಯ.
ನಂತರ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸಾಕ್ ಅಹ್ಮದ್ ನ್ಯಾಯ ಪರ ಧ್ವನಿ ಆರಂಭಗೊಂಡಿದೆ, ಶಿರಾಳಕೊಪ್ಪದ ಜನತೆಗೆ ಶುಭಾಶಯಗಳು ಕೋರುತ್ತೇನೆ ಎಂದು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯ ಸಾಧಿಕ್, ಶಿವಮೊಗ್ಗ ನಗರಾಧ್ಯಕ್ಷ ಮಜರ್ ಬಾದಲ್, ಶಿವಮೊಗ್ಗ ನಗರ ಸಮಿತಿಯ ಖಜಾಂಚಿ ಹಸೀಬುಲ್ಲಾ ಮತ್ತು ಶಿರಾಳಕೊಪ್ಪ ಪುರಸಭೆಯ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ:ನವೀದ್ ಶಿರಾಳಕೊಪ್ಪ

