ಸರಕಾರಿ ಆಸ್ಪತ್ರೆಯ ತೆರೆದ ತೊಟ್ಟಿಯಲ್ಲಿ ಮಗು ಬಿದ್ದು ಸಾವು……ಸಾಂತ್ವನ ಹೇಳಿ ಧೈರ್ಯ ತುಂಬಿದ ಸಂಸದ ಬಿ ವೈ ಆರ್.

The Siasat News - Images

ಶಿಕಾರಿಪುರ:16-11-2024

ಪಟ್ಟಣದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಯಲ್ಲಿ ಶುಕ್ರವಾರ ಮೂರು ವರ್ಷದ ಮಗು ಆಯಾನ್ ಆಟ ಆಡುತ್ತ ಆಕಸ್ಮಿಕವಾಗಿ ಬಿದ್ದು ಮೃತ ಪಟ್ಟಿದೆ.

ಆಸ್ಪತ್ರೆಯ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು ಕಾಮಗಾರಿಗೆ ಬಳಸಲು ನೀರು ಸಂಗ್ರಹಣೆ ಮಾಡುವ ಉದ್ದೇಶದಿಂದ ತೊಟ್ಟಿ ನಿರ್ಮಾಣ ಮಾಡಲಾಗಿದೆ.

The Siasat News - Images

ಶುಕ್ರವಾರ ಪೋಷಕರೊಂದಿಗೆ ಸಂಭಂದಿ ರೋಗಿಯನ್ನು ನೋಡಲು ಬಂದ ಆಯಾನ್ ಆಟ ಆಡುತ್ತ ಕಾಮಗಾರಿ ಪ್ರದೇಶದಲ್ಲಿರುವ ತೊಟ್ಟಿ ಹತ್ತಿರ ಹೋಗಿ ಬಿದ್ದಿರುವುದಾಗಿ ಮಾಹಿತಿ ಲಭ್ಯ ವಾಗಿದೆ.

The Siasat News - Images

ಸಂಸದರ ಭೇಟಿ: ತಾಲ್ಲೂಕಿನ ಮತ್ತಿ ಕೋಟೆ ಗ್ರಾಮದ ಇಮ್ರಾನ್ ದಂಪತಿಗಳ ಪುತ್ರ ಆಯಾನ್ ಮನೆಗೆ ಭೇಟಿ ನೀಡಿದ ಸಂಸದ ಬಿ ವೈ ರಾಘವೇಂದ್ರ ರವರು ಮೃತ ಮಗುವಿನ ಪೋಷಕರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿ ಸೊಕ್ತ ಸಹಾಯ ಹಸ್ತ ನೀಡಿದರು.

ವರದಿ: ನವೀದ್ ಶಿರಾಳಕೊಪ್ಪ

Share the news!

Leave a Reply

Your email address will not be published. Required fields are marked *