ಶಿರಾಳಕೊಪ್ಪ:16/11/2024
ಬ್ಯಾಂಕು ಎಂದೊಡನೆ ಬಡವ, ಬಲ್ಲಿದ, ವರ್ತಕ – ನೌಕರ-ಚಾಕರ, ಪಂಡಿತ-ಪಾಮರರೆಲ್ಲರಿಗೂ ಹಣಕಾಸಿನ ವ್ಯವಹಾರ ಮಾಡಲು ಅನುಕೂಲವಾದ ಅತ್ಯಂತ “ವಿಶ್ವಾಸಾರ್ಹ ಸ್ಥಾನ” ಎಂಬ ಭಾವನೆ ಥಟ್ಟನೆ ನಮ್ಮ ಮನಸ್ಸಿನಲ್ಲಿ ಮೂಡಿ ನಿಲ್ಲುತ್ತದೆ.
ಅದರಲ್ಲೂ ಸಹಕಾರ ತತ್ವದ ತಳಹದಿಯೊಂದಿಗೆ ಸ್ಥಾಪಿತವಾದ ಬ್ಯಾಂಕು ಸಕಲ ಜನರ ಮೆಚ್ಚುಗೆಗೆ ಪಾತ್ರವಾಗಿರುವುದಲ್ಲದೆ ಎಲ್ಲರಲ್ಲೂ “ಇದು ನಮ್ಮ ಬ್ಯಾಂಕು” ಎಂಬ ಭಾವನೆಯನ್ನು ಒಡಮೂಡಿಸುತ್ತದೆ.
ಒಂದು ಸಂಸ್ಥೆ ಜನ್ಮ ತಳೆದು ಬೆಳಕು ಕಾಣಲು ಹತ್ತಾರು ವ್ಯಕ್ತಿಗಳ ತ್ಯಾಗ , ಪರಿಶ್ರಮ ಹಾಗೂ ಪ್ರಾಮಾಣಿಕ ಪ್ರಯತ್ನಗಳೇ ಕಾರಣ ವೆಂಬುದು ನಿತ್ಯ ಸತ್ಯ ಸಂಗತಿ. ಈ ಮಾತು ಪಟ್ಟಣದ ಶ್ರೀ ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್ ಗೆ ಅನ್ವಯಿಸುತ್ತದೆ.
ಹೋದವರುಷ ಅಷ್ಟೇ 111ನೇ ವಾರ್ಷಿಕೋತ್ಸವ ಕಾರ್ಯಕ್ರಮ ಆಚರಿಸಿಕೊಂಡು ಶತಮಾನವನ್ನು ಪೂರೈಸಿದ ಶ್ರೀ ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್ ನಿ. ಶಿರಾಳಕೊಪ್ಪ ತನ್ನ ಕಾರ್ಯವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲು ಚಿಂತನೆ ನಡೆಸಿದೆ.

ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ಹುಟ್ಟಿ ಬೆಳೆದು ಹೆಮ್ಮರವಾಗಿ ನಿಂತ ಈ ಸಹಕಾರಿ ಬ್ಯಾಂಕ್ ಈಗ ಪಕ್ಕದ ಸೊರಬ ತಾಲ್ಲೂಕಿಗೂ ಹೆಜ್ಜೆ ಇಡಲಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ವೇದುಮೂರ್ತಿ ಕುಪ್ಪೆಲೂರು ತಿಳಿಸಿದರು.
ಪಟ್ಟಣದ ಶ್ರೀ ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಬ್ಯಾಂಕಿನ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ತೀರ್ಮಾಸಿದಂತೆ ಪಕ್ಕದ ಸೊರಬ ತಾಲ್ಲೂಕಿನ ಆನವಟ್ಟಿ ಪಟ್ಟಣದಲ್ಲಿ ಬ್ಯಾಂಕಿನ ಪ್ರಥಮ ನೂತನ ಶಾಖೆ ಇದೇ ತಿಂಗಳ 18 ನೇ ದಿನಾಂಕ ದಂದು (18-11-2024) ಪ್ರಾರಂಭ ಗೊಳ್ಳಲಿದೆ.
ನೆಫ್ಟ್, ಆರ್ ಟಿ ಜಿ ಎಸ್ ಸೇರಿದಂತೆ ಆಕರ್ಷಕ ಬಡ್ಡಿ ದರಗಳಲ್ಲಿ ಠೇವಣಿ, ಗೃಹ ನಿರ್ಮಾಣ ಸಾಲ, ವಾಹನ ಸಾಲ, ಸ್ಥಿರಾಸ್ತಿ ಆಧಾರ ಸಾಲ, ಬಂಗಾರ ಆಭರಣಗಳ ಮೇಲೆ ಸಾಲ, ವ್ಯಾಪಾರ ಸಾಲ ಸೇರಿದಂತೆ ಇನ್ನೂ ಅನೇಕ ಸವಲತ್ತು ಗಳು ರಾಷ್ಟ್ರೀಯ ಬ್ಯಾಂಕ್ ಗಳ ರೀತಿಯಲ್ಲಿ ನಮ್ಮ ಎರಡೂ ಬ್ಯಾಂಕ್ ಗಳಲ್ಲಿ ದೊರೆಯಲಿದೆ. ಶಿಕಾರಿಪುರ ಮತ್ತು ಸೊರಬ ತಾಲ್ಲೂಕಿನ ಜನಸಾಮಾನ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಹಿರಿಯ ನಿರ್ದೇಶಕ ಡಾ// ಮುರುಘರಾಜ್, ಇಸ್ಳೂರು ಉಮೇಶ್ ಮಾತನಾಡಿದರು
ಸುದ್ದಿಗೋಷ್ಠಿ ಯಲ್ಲಿ ಬ್ಯಾಂಕಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಮಹಾಗಣಪತಿ, ನಿರ್ದೇಶಕರಾದ , ಅಕ್ಕಿ ಪ್ರಭು,ಎನ್ ಆನಂದಪ್ಪ, ಎನ್ ಷಣ್ಮುಖಪ್ಪ, ವಿ ಸಿ ಅಶೋಕ್, ನಿವೇದಿತಾ ರಾಜು ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಹಾದೇವ ಆರ್ ಮತ್ತು ಸಿಬ್ಬಂದಿ ಇದ್ದರು.
ವರದಿ : ನವೀದ್ ಶಿರಾಳಕೊಪ್ಪ

