ಬಡ ಕುಟುಂಬಕ್ಕೆ ಸೂರು ಭಾಗ್ಯ ನೀಡಿದ ಇತ್ತೇಹಾದ್ ಫೌಂಡೇಶನ್ ಸಂಸ್ಥೆ…..

The Siasat News - Images

ಶಿರಾಳಕೊಪ್ಪ: 14/11/2024

ಪಟ್ಟಣದ ಇತ್ತೇಹಾದ್ ಫೌಂಡೇಶನ್ ಸಂಸ್ಥೆ ವತಿಯಿಂದ ಬಡ ಕುಟುಂಬಕ್ಕೆ ಮನೆ ಕಟ್ಟಿ ಕೊಡಲಾಯಿತು.

ಪಟ್ಟಣದ ಖಾನ್ಕೇರಿ ಪ್ರದೇಶದಲ್ಲಿ ತನ್ನ ಸ್ವಂತ ಖಾಲಿ ಜಾಗ ಇದ್ದು ಆ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಪರದಾಡುತ್ತಿದ್ದ ವಿಧವೆ ಹೆಣ್ಣುಮಗಳಿಗೆ ಆಸರೆ ನೀಡಿದ ಇತ್ತೇಹಾದ್ ಸಂಸ್ಥೆ ತಮ್ಮ ಸ್ವಂತ ಖರ್ಚಿನಿಂದ ಮನೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ.

Video

ಪಟ್ಟಣದಲ್ಲಿ ಕಳೆದ 5ವರ್ಷಗಳಿಂದ ಬಡವರ ಪರ, ನಿರ್ಗತಿಕರ ಪರ ಕೆಲಸ ಮಾಡುತ್ತಿರುವ ಇತ್ತೇಹಾದ್ ಸಂಸ್ಥೆ ಬಡ ರೋಗಿಗಳ ಚಿಕಿತ್ಸೆ, ರಂಜಾನ್ ಕಿಟ್, ಸೇರಿದಂತೆ ಅನೇಕ ಪುಣ್ಯ ಕಾರ್ಯಗಳು ಮಾಡಿ ಸಾರ್ವಜನಿಕರಿಂದ ಸೈ ಎನಿಸಿಕೊಂಡಿದ್ದು ಸೋರಿಲ್ಲದ ಬಡವರಿಗೆ 5ಮನೆ ಗಳನ್ನು ನಿರ್ಮಿಸಿ ಕೊಟ್ಟಿದೆ.

ಫಲಾನುಭವಿ ಮಹಿಳೆಗೆ ನೂತನ ಮನೆ ಹಸ್ತಾಂತರಿಸಿ” ದಿ ಸಿಯಾಸತ್ ನ್ಯೂಸ್ ” ನೊಂದಿಗೆ ಮಾತನಾಡಿದ ಇತ್ತೇಹಾದ್ ಸಂಸ್ಥೆಯ ಅಧ್ಯಕ್ಷ ಸಂಜೀದ್ ಅಮೀರ್ ಅಹ್ಮದ್ ಸಾಬ್ ಪಟ್ಟಣದ ಸಾರ್ವಜನಿಕರ ದೇಣಿಗೆಗಳು ಮತ್ತು ಸಹಕಾರದೊಂದಿಗೆ ಅನೇಕೆ ಜನಪರ, ಬಡವರ ಪರ ಕೆಲಸಗಳು ಸಂಸ್ಥೆ ವತಿಯಿಂದ ಆಗಿದ್ದು ಇದೆಕ್ಕೆಲ್ಲ ಸಹಕರಿಸಿದ ಊರಿನ ಜನಗಳಿಗೆ ಧನ್ಯವಾದಗಳು, ಇದೇ ತರ ಇನ್ನೂ ಹೆಚ್ಛೆಚ್ಚು ಕಾರ್ಯಗಳು ಮಾಡುವ ಉದ್ದೇಶ ನಮ್ಮ ಸಂಸ್ಥೆ ಹೊಂದಿದೆ ಎಂದರು.

ಈ ಸಂಧರ್ಭದಲ್ಲಿ ಸಂಸ್ಥೆಯ ಸದಸ್ಯರಾದ ಜಾಕಿರ್ ಹುಸೇನ್, ಮೊಹಸಿನ್ ಖಾನ್ ಮುಸ್ತಾಕ್ ಬಾಷಾ ಸಾಬ್ , ಅನೀಸ್, ಡಾ// ಸಫೀರ್, ರಬ್ಬಾನಿ, ಇಮ್ರಾನ್ ಮ್ಯಾಂಗೋ, ಬಿಳಿಕಿ ಕಲೀಂ, ಪರ್ವೀಜ್ , ಕಟ್ಟಡ ಕಾರ್ಮಿಕ ಸಂಘದ ಸಂಘಟನಾ ಕಾರ್ಯದರ್ಶಿ ರಿಜ್ವಾನ್ ಶೈಖ್ ಸೇರಿದಂತೆ ಇನ್ನಿತರರು ಇದ್ದರು.

ವರದಿ: ನವೀದ್ ಶಿರಾಳಕೊಪ್ಪ

Share the news!

4 thoughts on “ಬಡ ಕುಟುಂಬಕ್ಕೆ ಸೂರು ಭಾಗ್ಯ ನೀಡಿದ ಇತ್ತೇಹಾದ್ ಫೌಂಡೇಶನ್ ಸಂಸ್ಥೆ…..

Leave a Reply

Your email address will not be published. Required fields are marked *