ವಿಜಯನಗರ:02-11-2024
ಜಿಲ್ಲೆಯ ಕೊಡ್ಲಿಗಿ ತಾಲ್ಲೂಕಿನ ಕಕ್ಕುಪ್ಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮ್ಮನಕೇರಿ ಗ್ರಾಮದಲ್ಲಿ ನವಂಬರ್ 2 ಶನಿವಾರದಂದು ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಮದ ವಿವಿದ ಸಂಘಟನೆಗಳ ಸಹಯೋಗದಲ್ಲಿ, ಯುವಕರಿಗಾಗಿ ಕಬಡ್ಡಿ ಪಂದ್ಯಾವಳಿ ಜರುಗಿಸಲಾಯಿತು.

ಪಂದ್ಯಾವಳಿಯಲ್ಲಿ ಕಕ್ಕುಪ್ಪಿಯ ಯುವಕರ ತಂಡ ಪ್ರಥಮ ಸ್ಥಾನ ಪಡೆಯಿತು, ದ್ವಿತೀಯ ಬಹುಮಾನ ಅಮ್ಮನ ಕೇರಿಯ ಭಗತ್ ಸಿಂಗ್ ಬಾಯ್ಸ್ ತಂಡ ಪಡೆದುಕೊಂಡಿತು. ಪಂದ್ಯಾವಳಿಗೆ ಪ್ರಥಮ ಬಹುಮಾನದ ಟ್ರೋಪಿಯನ್ನು, ಸಿಜಿ ಮಂಜುನಾಥ್ ಗೌಡ ರವರು ಕೊಡುಗೆಯಾಗಿ ನೀಡಿರುತ್ತಾರೆ. ದ್ವಿತೀಯ ಬಹುಮಾನವನ್ನು, ಶಿಕ್ಷಕರಾದ ಮಂಜುನಾಥ ಸ್ವಾಮಿ ಕೊಡುಗೆಯಾಗಿ ನೀಡಿರುತ್ತಾರೆ. ತೃತೀಯ ಬಹುಮಾನದ ಟ್ರೋಪಿಯನ್ನು, ಸ್ನೇಹಾ ಮೊರಬರವರು ಕೊಡುಗೆ ಯಾಗಿ ನೀಡಿರುತ್ತಾರೆ.
ಶಿಕ್ಷಕರಾದ ಕೆ.ಏರಿ ಬಸಪ್ಪ, ಶಶಿಧರ ಸ್ವಾಮಿ, ಹಾಗೂ ಕೆ ಸತ್ಯನಾರಾಯಣ ಮೂರ್ತಿ. ಮತ್ತು ಕೊಡಲಿ ಚನ್ನಬಸಪ್ಪ. ಎಲ್ಐಸಿ ಬಸವರಾಜ್ , ಶಿವಪುರ ಬಸವರಾಜ್, ದುರ್ಗಪ್ಪ, ಎ.ಎಂ.ಕೊಟ್ರೇಶ್ ಸ್ವಾಮಿ, ಮೈದೂರು ನಾಗರಾಜ್, ಎಸ್.ಬಸವರಾಜ್, ದಾದಾ ಕೋಡಿಹಳ್ಳಿ, ಸಿ.ಹೋಬಳೇಶ್, ನಿಂಗಪ್ಪ, ಗ್ರಾಮ ಪಂಚಾಯ್ತಿ ಸದಸ್ಯರಾದ ಎಸ್.ಸುಧಾ ಬಸವರಾಜ. ಗ್ರಾಮದ ಯುವ ಮುಖಂಡರಾದ ಸಿರಿಬಿ ಬಸವರಾಜ, ಮತ್ತು ಗ್ರಾಮದ ಹಿರಿಯ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದು ಯುವಕರಿಗೆ ಪ್ರೋತ್ಸಾಹ ನೀಡಿದರು.
ವರದಿ :ವಿ.ಜಿ.ವೃಷಭೇಂದ್ರ ಕೂಡ್ಲಿಗಿ.
9008937428

