ಕರ್ನಾಟಕ ಅಭಿವೃದ್ಧಿಯಲ್ಲಿ ಪ್ರಥಮ -ಶಾಸಕ ಡಾ”ಎನ್.ಟಿ. ಶ್ರೀನಿವಾಸ್
ಕರ್ನಾಟಕ ಅಭಿವೃದ್ಧಿಯಲ್ಲಿ ಪ್ರಥಮ -ಶಾಸಕ ಡಾ”ಎನ್.ಟಿ. ಶ್ರೀನಿವಾಸ್-ನ1- ವಿಜಯನಗರ ಜಿಲ್ಲೆ ಕೂಡ್ಲಿಗಿ: ದೇಶದಲ್ಲಿಯೇ ಕರ್ನಾಟಕ ರಾಜ್ಯ ಅಭಿವೃದ್ಧಿಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು ನುಡಿದರು. ಅವರು ತಾಲೂಕಾಡಳಿತ ಹಾಗೂ ಕನ್ನಡ ಪರ ಸಂಘಟನೆಗಳ ಸಹಯೋಗದಲ್ಲಿ, ಪಟ್ಟಣದ ಚಂದ್ರ ಶೇಖರ ಆಜಾದ್ ರಂಗ ಮಂದಿರದಲ್ಲಿ ಜರುಗಿದ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ, ಅವರು ಕನ್ನಡಾಂಭೆಗೆ ನಮಿಸಿ ಧ್ವಜಾರೋಹಣ ನೆರವೇರಿಸಿ ಗೌರವ ಸಮರ್ಪಿಸಿ ಮಾತನಾಡಿದರು. ಶೀಘ್ರದಲ್ಲಿಯೇ ಕ್ಷೇತ್ರದ 74 ಕೆರೆಗಳಿಗೆ, ನೀರು ತುಂಬಿಸಲಾಗುವುದು ಎಂದರು. ಇದರಿಂದಾಗಿ ರೈತರ ಬದುಕಿನಲ್ಲಿ ಶಾಶ್ವತವಾಗಿ ಹಸನು ಮೂಡಿಸಲು ಸಾಧ್ಯ, ಹಾಗೂ ಕ್ಷೇತ್ರ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.




ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ, ವಿವಿಧ ಇಲಾಖೆಗಳಿಂದ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ, ಲ್ಯಾಪ್‌ಟಾಪ್ ವಿತರಿಸಲಾಯಿತು. ಮತ್ತು ಕುಶಲ ಕರ್ಮಿ ಮಹಿಳೆಯರಿಗೆ, ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.
ವಿವಿದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ, ಹಲವು ಗಣ್ಯರಿಗೆ ಸನ್ಮಾನಿಸಲಾಯಿತು. ತಾಲೂಕಿನ ಓಬಳಶೆಟ್ಟಿಹಳ್ಳಿಯ ಸೂಲಗಿತ್ತಿ ಈರಮ್ಮ, ರಂಗಭೂಮಿ ಪ್ರತಿಭೆ ಹರವದಿ ಈರಣ್ಣ, ಸೋಬಾನೆ ಹಾಡುಗಾರ್ತಿ ಮತ್ತು ಸಂಗಡಿಗರಿಗೆ, ಪ್ರತಿನಭಾನ್ವಿತ ವಿದ್ಯಾರ್ಥಿನಿ ಬೃಂದಾ ರವರು ಸೇರಿದಂತೆ. ಇನ್ನೂ ಮುಂತಾದವರನ್ನು ಶಾಸಕರು ಸನ್ಮಾನಿಸಿ ಅಭಿನಂಧಿಸಿದರು.
ಪ್ರಾರಂಭದಲ್ಲಿ ಕನ್ನಾಡಾಂಬೆಯ ಭಾವಚಿತ್ರದ ಮೆರವಣಿಗೆ ಮಾಡಲಾಯಿತು, ಮತ್ತು ನಾಡು ನುಡಿಗಾಗಿ ಹೋರಾಡಿದ ವೀರರ, ಹಾಗೂಸಾಹಿತಿಗಳ ಹೋರಾಟಗಾರರ ಪೋಷಕಿನಲ್ಲಿದ್ದ ಮಕ್ಕಳಿರುವ ವಾಹನಗಳು ಮೆರವಣಿಗೆ ಹಿಂಬಾಲಿಸಿದವು. ವಾಧ್ಯ ವೃಂಧಗಳನ್ನೊಳಗೊಂಡ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆ ವೃತ್ತಗಳಲ್ಲಿ ಸಂಚರಿಸಿ, ಅಂತಿಮವಾಗಿ ವೇದಿಕೆಯಲ್ಲಿ ಲೀನವಾಯಿತು.
ವೇದಿಕೆಯಲ್ಲಿ ತಹಶೀಲ್ದಾರರಾದ ಎಂ. ರೇಣುಕಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರಣಂ, ಕಾರ್ಯನಿರ್ವಾಹಣಾಧಿಕಾರಿ ನರಸಪ್ಪ, DYSP ಮಲ್ಲೇಶಪ್ಪ ಮಲ್ಲಾಪುರ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಂ.ಕೆ. ಮುಗಳಿ, ವಿವಿದ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು. ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ, ಉಪಾಧ್ಯಕ್ಷರಾದ ಲೀಲಾವತಿ ಕೆ.ಪ್ರಭಾಕರ, ಸ್ಥಾಯಿ ಸಮಿತಿಯ ಅಧ್ಯಕ್ಷ ಸಯ್ಯದ್ ಶುಕೂರ್ ಹಾಗೂ ಪ ಪಂ ಸರ್ವ ಸದಸ್ಯರು ವಿವಿದ ಜನಪ್ರತಿನಿಧಿಗಳು. ಮುಖಂಡರಾದ ಎಮ್. ಗುರುಸಿದ್ದನಗೌಡ, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು. ಗಣ್ಯಮಾನ್ಯರು, ಹಿರಿಯರು ಹಾಗೂ ಸಾಹಿತಿಗಳು ವೇದಿಕೆಯಲ್ಲಿದ್ದರು. ನೂರಾರು ಯುವಕರು, ಸಾವಿರಾರು ಸಾರ್ವಜನಿಕರು, ಪತ್ರಕರ್ತರು ರೈತರು, ಕಾರ್ಮಿಕರು, ಮಹಿಳೆಯರು, ವಿವಿದ ಶಾಲಾ ಕಾಲೇಜುಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು. ವಿವಿದ ಪಕ್ಷಗಳ ಪ್ರಮುಖರು ಹಾಗೂ ಕಾರ್ಯಕರ್ತರು. ವಿವಿದ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು. ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

