ರಾಜ್ಯದಾದ್ಯಂತ ಇ -ಆಸ್ತಿ ತಂತ್ರಾಂಶ ಲೋಪ ಬಡವರಿಗೆ ಪ್ರಾಣ ಸಂಕಟ….

The Siasat News - Images

ಬೆಂಗಳೂರು.

ಈ ಆಸ್ತಿ ಪ್ರಮಾಣ ಪತ್ರದಿಂದಾಗಿ ರಾಜ್ಯದ ಜನತೆ ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿರುವುದು ಸುಳ್ಳಲ್ಲ.

ಸುಳ್ಳು ಹೇಳಿಕೊಂಡು ಆಸ್ತಿಯನ್ನು ಪರಭಾರೆ ಮಾಡುವವರ ವಿರುದ್ಧ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗ ಬೇಕೇ ಹೊರತು ಸಾಮಾನ್ಯ ಜನರ ಮೇಲೆ ಅಲ್ಲ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ.

ಈ ನಡುವೆ ಈ ಆಸ್ತಿ ಪ್ರಮಾಣ ಪತ್ರ ಪಡೆದುಕೊಳ್ಳುವುದಕ್ಕೆ ತೀವ್ರ ಪ್ರಮಾಣದಲ್ಲಿ ಹಲವು ಮಂದಿ ಸಮಸ್ಯೆಯನ್ನು ಎದುರಿಸುತ್ತಾ ಇರುವುದು ಕಂಡು ಬಂದಿದ್ದು ಕಂದಾಯ ಇಲಾಖೆಯಲ್ಲಿರುವ ಲೋಪಗಳನ್ನು, ತಪ್ಪುಗಳನ್ನು ಮುಚ್ಚಿ ಹಾಕುವ ನಿಟ್ಟಿನಲ್ಲಿ ಸಚಿವರ ಕ್ರಮವನ್ನು ಮೆಚ್ಚಿಕೊಳ್ಳಬೇಕು ಆದರೆ ಹೀಗೆ ಸಚಿವರ ನಡೆ ಸಮಂಜಸನಾ?? ಎನ್ನುವುದು ರಾಜ್ಯದ ಜನತೆಯಲ್ಲಿ ಪ್ರಶ್ನೆಯಾಗಿದೆ.

The Siasat News - Images

ಕರ್ನಾಟಕದಲ್ಲಿ ಕಂದಾಯ ಇಲಾಖೆಯಿಂದ ಆಸ್ತಿ ದಾಖಲೆಗಳ ನಕಲುತನ ತಡೆಯಲು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಈ ಆಸ್ತಿ, ಮಹಾನಗರ ಪಾಲಿಕೆ, ನಗರಸಭೆ,ಪುರಸಭೆ ವ್ಯಾಪ್ತಿಯಲ್ಲಿ ಇ -ಖಾತ ಹಾಗೂ ಗ್ರಾಮೀಣ ಮಟ್ಟದಲ್ಲಿನ ಆಸ್ತಿ ನೋಂದಣಿಗೆ ಇ -ಸ್ವತ್ತು ಕಡ್ಡಾಯಗೊಳಿಸಲಾಗಿದೆ. ಆದರೆ ನಗರ ಪ್ರದೇಶದಲ್ಲಿ ಜಾರಿಗೊಳಿಸಿರುವಂತ ಇ -ಅಸ್ತಿ ತಂತ್ರಾಂಶದಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ.

ಇ -ಆಸ್ತಿ ತಂತ್ರಾಂಶದಲ್ಲಿ ನೋಂದಣಿ ಕಡ್ಡಾಯದಿಂದಾಗಿ ಸಾರ್ವಜನಿಕರಿಗೆ ಗಂಭೀರವಾದ ಸಮಸ್ಯೆಗಳು ಉಂಟಾಗುತ್ತಿವೆ .ಇ -ಆಸ್ತಿ ತಂತ್ರಾಂಶದ ಮೂಲಕವೇ ಆಸ್ತಿ ನೋಂದಣಿ ಮಾರಾಟವನ್ನು ಇತ್ತೀಚೆಗೆ ರಾಜ್ಯ ಸರ್ಕಾರವತಿಯಿಂದ ಕಡ್ಡಾಯಗೊಳಿಸಲಾಗಿದೆ.

ಇ -ಪ್ರಮಾಣ ಪತ್ರವಿಲ್ಲದೆ ಆಸ್ತಿ ಖರೀದಿಯಾಗಲಿ, ಮಾರಾಟವಾಗಲಿ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಮದುವೆ, ಅನಾರೋಗ್ಯದ ಸಮಸ್ಯೆ ಹಾಗೂ ಇತರೆ ತುರ್ತು ಸಂದರ್ಭಗಳಲ್ಲಿ ತಮ್ಮ ಆಸ್ತಿಯನ್ನು ಇ -ಆಸ್ತಿ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಿದ್ದರಿಂದ ಮಾರಾಟ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬುದು ಸಾರ್ವಜನಿಕರ ಅಳಲಾದರೆ ಇದೇ ಕುಂಟು ನೆಪ ಇಟ್ಟುಕೊಂಡು ಅನೇಕ ಕಡೆ ಕೆಲ ಅಧಿಕಾರಿಗಳು ಜನರನ್ನು ಬೇಕಾ ಬಿಟ್ಟೀಯಾಗಿ ಸುಲಿಗೆ ಕೊಡ ಮಾಡುತ್ತಿರುವುದು ಕಂಡು ಬಂದಿದ್ದು ಜನಸಾಮಾನ್ಯರು ಸರಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ಪ್ರಮಾಣ ಪತ್ರ ತ್ವರಿತವಾಗಿ ಸಿಗುವಂತೆ ಮಾಡಿ : ತುರ್ತು ಸಂದರ್ಭಗಳಲ್ಲಿ ಹಣಕಾಸಿನ ಅಗತ್ಯವಿರುವವರು ತಮ್ಮ ಬಳಿ ಆಪತ್ಕಾಲದಲ್ಲಿ ನೆರವಾಗಲೆಂದೇ ಇಟ್ಟುಕೊಂಡಿರುವ ಆಸ್ತಿಯ ಮಾರಾಟಕ್ಕೆ ಇ -ಆಸ್ತಿ ಪ್ರಮಾಣ ಪತ್ರ ಕಡ್ಡಾಯವಾಗಿರುವುದರಿಂದ ರಾಜ್ಯದ ಬಹುತೇಕ ಜನಗಳು ಸಮಸ್ಯೆಗೆ ಸಿಲುಕಿದ್ದು ಇ -ಆಸ್ತಿ ಪ್ರಮಾಣ ಪತ್ರ ಸಿಗದೇ ಸಾರ್ವಜನಿಕರು ಪರದಾಡುವಂತೆ ಆಗಿದೆ. ಹೀಗಾಗಿ ರಾಜ್ಯ ಸರ್ಕಾರವು ಇ -ಆಸ್ತಿ ಪ್ರಮಾಣ ಪತ್ರವನ್ನು ತ್ವರಿತವಾಗಿ ಆಸ್ತಿ ಮಾರಾಟಗಾರರಿಗೆ ಖರೀದಿ ದಾರಿಗೆ ಸಿಗುವಂತೆ ಮಾಡುವಂತೆ ರಾಜ್ಯದ ಜನರ ಆಗ್ರಹವಾಗಿದೆ.

ವರದಿ: ನವೀದ್ ಶಿರಾಳಕೊಪ್ಪ

Share the news!

Leave a Reply

Your email address will not be published. Required fields are marked *