ಹೊನಲುಬೆಳಕಿನ ವಾಲಿಬಾಲ್ ಪಂದ್ಯಾವಳಿ…..

The Siasat News - Images

ಶಿರಾಳಕೊಪ್ಪ:29-10-2024

ಪಟ್ಟಣದ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಭಾನುವಾರ ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಯೂಥ್ ಕ್ಲಬ್ ವತಿಯಿಂದ ನಡೆಸಲಾಯಿತು.

ಪಂದ್ಯಾವಳಿಗೆ ಶಿಕಾರಿಪುರ ತಾಲೂಕು ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಟಾ ಶಿವಕುಮಾರ್ ಚಾಲನೆ ನೀಡಿ ಮಾತನಾಡಿದರು.

ಮನುಷ್ಯ ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳಲು ಮಾನಸಿಕ ಮತ್ತು ದೈಹಿಕ ಸಾಧನೆ ಮುಖ್ಯ. ಈ ಕಪ್ಯೂಟರ್ ಮತ್ತು ಮೊಬೈಲ್ ಯುಗದಲ್ಲಿ ಕ್ರೀಡೆ ಎನ್ನುವುದು ಮಾಯವಾಗಿದೆ. ಇಂತಹ ಸಂದರ್ಭದಲ್ಲಿ ಯೂಥ್ ಕ್ಲಬ್ ನಂತಹ ಸಂಘಟನೆಯ ಯುವಕರು ಈ ರೀತಿಯ ಕ್ರೀಡೆಗಳನ್ನು ಆಯೋಜನೆ ಮಾಡಿದ್ದು ಪ್ರಶಂಸನೀಯ. ಪಟ್ಟಣಕ್ಕೆ ರಾಜ್ಯ ಸರಕಾರದಿಂದ ವಾಲಿಬಾಲ್‌ಗಾಗಿ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿಕೊಡಲು ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು.

The Siasat News - Images

ಬಿಜೆಪಿ ಟೌನ್ ಉಪಾಧ್ಯಕ್ಷ ರಾಘವೇಂದ್ರ ಕೆ ಮಾತನಾಡಿ ಒಂದು ಪಂದ್ಯಾವಳಿ ನಡೆಸುವುದು ಸುಲಭವಲ್ಲ. ಕ್ರೀಡೆಗೆ ಎಲ್ಲರ ಸಹಕಾರ ಅಗತ್ಯ. ಯುವ ಜನತೆ ಕೇವಲ ಮನಸ್ಸಿಗೆ ಕಸರತ್ತು ನೀಡುತ್ತಾರೆಯೇ ವಿನಹ ದೇಹಕ್ಕೆ ಯಾವುದೇ ವ್ಯಾಯಾಮ ಆಗುತಿಲ್ಲ. ತಂದೆ ತಾಯಿಗಳು ಮಕ್ಕಳನ್ನು ಓದುವುದರಲ್ಲೆ ಒತ್ತಾಯಿಸದೆ ಒಂದು ಗಂಟೆಯಾದರೂ ಆಟಕ್ಕೆ ಅವಕಾಶ ನೀಡಬೇಕೆಂದರು.

ಅಖಿಲ ಭಾರತ ವೀರಶೈವ ಸಮಾಜದ ರಾಜ್ಯ ನಿರ್ದೇಶಕ ಈರೇಶ್, ಪುರಸಭೆ ಸದಸ್ಯ ಟಿ ರಾಜು, ಕೆ.ಡಿ.ಪಿ ಸದಸ್ಯ ರಾಘವೇಂದ್ರ ನಾಯಕ್, ಡಾ. ಎಹೆತೆಷಾಂ ಉಲ್ ಹಕ್, ಕಾಂಗ್ರೇಸ್ ಮುಖಂಡ ಕರಿಬಸಪ್ಪ ಮಾತನಾಡಿದರು.

ಯೂಥ್ ಕ್ಲಬ್ ಶಿರಾಳಕೊಪ್ಪ ಇವರ ವತಿಯಿಂದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ತೀರ್ಪುಗಾರರಿಗೆ ಸನ್ಮಾನ ಮಾಡಲಾಯಿತು.

ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಡಿ.ಎಂ.ಬಿ.ಪಿ ಬಾಯ್ಸ್, ದ್ವಿತೀಯ ಎಸ್.ಜಿ.ಹೆಚ್ ಜಿಂಜರ್ ಬಾಯ್ಸ್, ತೃತಿಯ ಎಸ್.ಎಸ್.ಕೆ.ಎಫ್ ತಂಡಗಳು ವಿಜೇತರಾದರು.

ಕಾರ್ಯಕ್ರಮದಲ್ಲಿ ಬಾಷಾ ಸಹೇಬ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್, ಸದಸ್ಯರಾದ ಫತ್ತೀ ಜಾಫರ್, ರಾಘವೇಂದ್ರ, ಯುವ ಕಾಂಗ್ರೇಸ್ ಸಮೀತಿ ಅಧ್ಯಕ್ಷ ನಯಾಜ್ ಅಹಮ್ಮದ್ ಖುರೇಶಿ, ಸಾಜೀದ್ ಅಲಿ, ಸದ್ದು ಬೆಳಗಾವಿ, ಯೂಥ್ ಕ್ಲಬ್ ಅಧ್ಯಕ್ಷ ಎಂ.ಡಿ ರಫೀಕ್, ಉಪಾಧ್ಯಕ್ಷ ಸಫೀರ್ ಅಹಮ್ಮದ್, ವಸೀಂ, ತಹಾ, ಸೈಯಿಬುಲ್ಲಾ, ಜಬೀವುಲ್ಲಾ, ಸಲ್ಮಾನ್, ಇದ್ದರು.

Share the news!

Leave a Reply

Your email address will not be published. Required fields are marked *