ಶಿವಮೊಗ್ಗ: 25-10-2024
ರಂಗಾಯಣದಲ್ಲಿ ನಾಟಕ ಅವಲೋಕನ ಕಾರ್ಯಗಾರ ವನ್ನು ರಂಗ ನಿರ್ದೇಶಕ ನಟರಾಜ್ ಹೊನ್ನವಳ್ಳಿ “ಗುಣಮುಖ” ನಾಟಕದ ತುಣುಕೊಂದನ್ನು ಓದುವುದರ ಮೂಲಕ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ರಂಗಾಯಣ ಶಿವಮೊಗ್ಗದ ನಿರ್ದೇಶಕ ಪ್ರಸನ್ನ.ಡಿ ಸಾಗರ ಇವರು ವಹಿಸಿದ್ದು ಅತಿಥಿಗಳಾಗಿ ರಂಗ ಕರ್ಮಿ ಕೊಟ್ರಪ್ಪ ಹಿರೇಮಾಗಡಿ ಆಗಮಿಸಿದ್ದರು.
ರಂಗಾಯಣ ಅಧಿಕಾರಿ ಶೈಲಜಾ ಎ.ಸಿ ಸ್ವಾಗತಿಸಿದರು. ಸಹ್ಯಾದ್ರಿ ಕಲಾ ಕಾಲೇಜು ಪ್ರಧ್ಯಾಪಕ ಪ್ರೊ: ಮೇಟಿ ಮಲ್ಲಿಕಾರ್ಜುನ ಹಾಗೂ ನಾಟಕ ಅವಲೋಕನ ಕಾರ್ಯಗಾರದ ನಿರ್ದೇಶಕ ಲವ ಜಿ. ಆರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ: ನವೀದ್ ಶಿರಾಳಕೊಪ್ಪ


