ಬೆಂಗಳೂರು:22-10-2024
ಡಿ ಬಿ ಟಿ ಪ್ರಾರಂಭವಾದ 2023ರ ಜುಲೈಯಿಂದ 2024ರ ಜುಲೈವರೆಗೆ 8433.11 ಕೋಟಿ ಹಣ ವರ್ಗಾವಣೆ ಫಲಾನುಭವಿಗಳಿಗೆ ಮಾಡಲಾಗಿದೆ.
ಡಿಬಿಟಿ ಮೂಲಕ ಪ್ರತಿಯೊಬ್ಬರಿಗೆ 170 ರೂ ಗಳನ್ನು ಕೊಡುತ್ತಿದ್ದೇವೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಡಿಬಿಟಿ ಹಣ ಬಾಕಿ ಇದೆ. ಶೀಘ್ರವೇ ಹಣ ಫಲಾನುಭವಿಗಳ ಖಾತೆಗಳಿಗೆ ವರ್ಗಾವಣೆ ಮಾಡಲಾಗುವುದು.

ಪಡಿತರ ಚೀಟಿ ಪರಿಷ್ಕರಣೆ ಪ್ರಗತಿ ಪರಿಶೀಲನೆ ಸಭೆ ವೇಳೆ ಮಾತನಾಡಿದ ಆಹಾರ ಸಚಿವ ಕೆ. ಎಚ್ ಮುನಿಯಪ್ಪ ಸರ್ವರ್ ಸಮಸ್ಯೆ ಇದೆ ಇಂದಿನಿಂದ ಆ ಸಮಸ್ಯೆಯೂ ಕೂಡ ಇರುವುದಿಲ್ಲ. ಪ್ರಸ್ತುತ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ನೀಡಬೇಕಾಗಿರುವ ಅಕ್ಕಿ ಬದಲಾಗಿ ಹಣ ನೀಡುತ್ತಿರುವುದನ್ನು ಮುಂದುವರಿಸಲಾಗುತ್ತದೆ. ಪಡಿತರ ಚೀಟಿ ಪರಿಷ್ಕರಣೆ ಬಳಿಕ ಮುಂದೆ ಹಣದ ಬದಲು ಅಕ್ಕಿ ಕೊಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

ಹಣದ ಬದಲು ಆಹಾರ ಕಿಟ್ ಗಳನ್ನು ಕೊಡುವ ಬಗ್ಗೆ ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರೂ ಚರ್ಚೆ ನಡೆದಿಲ್ಲ. ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಡಿಬಿಟಿ ಬದಲಿಗೆ ಅಡುಗೆ ಎಣ್ಣೆ, ಬೇಳೆ ಮತ್ತು ಸಕ್ಕರೆ ಹೊಂದಿರುವ ಆಹಾರ ಕಿಟ್ ಗಳನ್ನು ನೀಡಲು ಸರ್ಕಾರ ಚಿಂತನೆ ನಡೆಸಿದೆ. ಅಕ್ಟೋಬರ್ 28ದಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಆಹಾರ ಕಿಟ್ ವಿತರಣೆ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಪಡಿತರ ಚೀಟಿಗಳ ಪರಿಷ್ಕರಣೆ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಸಿಯಾಸತ್ ನ್ಯೂಸ್.

