ಈ ದಿನ ದಿನಾಂಕಃ 22-10-2024 ರಂದು ಶಿವಮೊಗ್ಗ ಜಿಲ್ಲೆಯಾದ್ಯಂತ *COTPA ವಿಶೇಷ ಕಾರ್ಯಾಚರಣೆ* ಕೈಗೊಂಡು *ಶ್ರೀ ಮಿಥುನ್ ಕುಮಾರ್ ಜಿ ಕೆ, ಐ.ಪಿ.ಎಸ್,* ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, *ಶ್ರೀ ಅನಿಲ್ ಕುಮಾರ್ ಭೂಮಾರೆಡ್ಡಿ* ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ ಮತ್ತು *ಶ್ರೀ ಕಾರಿಯಪ್ಪ ಎ.ಜಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶದಲ್ಲಿ, ಆಯಾ ಪೊಲೀಸ್ ಉಪಾಧೀಕ್ಷಕರುಗಳ ಮೇಲ್ವಿಚಾರಣೆಯಲ್ಲಿ *ಪೊಲೀಸ್ ನಿರೀಕ್ಷಕರು / ಪೊಲೀಸ್ ಉಪ ನಿರೀಕ್ಷಕರುಗಳು* ಠಾಣಾ ವ್ಯಾಪ್ತಿಗಳಲ್ಲಿನ *ಶಾಲಾ ಕಾಲೇಜುಗಳ ಆವರಣದಿಂದ 100 ಗಜಗಳ ವ್ಯಾಪ್ತಿಯಲ್ಲಿ ಕಾನೂನು ಬಾಹೀರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ* ಮಾಡುತ್ತಿದ್ದ *ಪೆಟ್ಟಿ ಅಂಗಡಿ, ಜೆರಾಕ್ಸ್ ಅಂಗಡಿ ಮತ್ತು ಬೇಕರಿಗಳ* ಮೇಲೆ ದಾಳಿ ನಡೆಸಿ, *ಶಿವಮೊಗ್ಗ – ಎ* ಉಪ ವಿಭಾಗದಲ್ಲಿ - 210, *ಶಿವಮೊಗ್ಗ – ಬಿ* ಉಪ ವಿಭಾಗದಲ್ಲಿ - 75, *ಭದ್ರಾವತಿ* ಉಪ ವಿಭಾಗದಲ್ಲಿ - 94, *ಸಾಗರ* ಉಪ ವಿಭಾಗದಲ್ಲಿ – 11, *ಶಿಕಾರಿಪುರ* ಉಪ ವಿಭಾಗದಲ್ಲಿ – 71 ಮತ್ತು *ತೀರ್ಥಹಳ್ಳಿ* ಉಪ ವಿಭಾಗದಲ್ಲಿ - 51 ಸೇರಿ *ಶಿವಮೊಗ್ಗ ಜಿಲ್ಲೆಯಾದ್ಯಂತ ಒಟ್ಟು 512 COTPA ಸ್ಥಳ ದಂಡ ಪ್ರಕರಣಗಳನ್ನು* ಹಾಗೂ *ಭದ್ರಾವತಿ* ಉಪ ವಿಭಾಗದಲ್ಲಿ *3* ಮತ್ತು *ತೀರ್ಥಹಳ್ಳಿ* ಉಪ ವಿಭಾಗದಲ್ಲಿ *02* ಪ್ರಕರಣಗಳು ಸೇರಿ *ಒಟ್ಟು 05* ಎಫ್.ಐ.ಆರ್ ಗಳನ್ನು COTPA ಕಾಯ್ದೆಯಡಿಯಲ್ಲಿ ದಾಖಲಿಸಲಾಗಿರುತ್ತದೆ.