**ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್,* ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, *ಶ್ರೀ ಅನಿಲ್ ಕುಮಾರ್ ಭೂಮರಡ್ಡಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆ, *ಶ್ರೀ ಎ ಜಿ ಕಾರ್ಯಪ್ಪ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಮತ್ತು *ಶ್ರೀ ಕೇಶವ್* ಪೊಲೀಸ್ ಉಪಾಧಿಕ್ಷಕರು, ಶಿಕಾರಿಪುರ ಉಪ ವಿಭಾಗ ಮತ್ತು *ಶ್ರೀ ರಿಜೇಶ್,* ಅಸ್ಸಿಸ್ಟೆಂಟ್ ಕಮಾಂಡೆಂಟ್ ಆರ್.ಎ.ಎಫ್ ರವರ ನೇತೃತ್ವದಲ್ಲಿ, ಈ ದಿನ ದಿನಾಂಕಃ 09-09-2024 ರಂದು ಬೆಳಗ್ಗೆ *ಶಿರಾಳಕೊಪ್ಪ ಟೌನ್ ನಲ್ಲಿ ಪೊಲೀಸ್ ಪಥ ಸಂಚಲನ (ರೂಟ್ ಮಾರ್ಚ್)* ವನ್ನು ನಡೆಸಲಾಯಿತು. ಪಥ ಸಂಚಲನವನ್ನು *ಶಿರಾಳಕೊಪ್ಪ ಪೊಲೀಸ್ ಠಾಣೆಯಿಂದ ಪ್ರಾರಂಭಿಸಿ* ಹಳ್ಳೂರುಕೇರಿ, ಪಂಪ್ ಹೌಸ್, ಹೊಂಡದ ಕೇರಿ, ಹಳೆ ಪೆಟ್ರೋಲ್ ಬಂಕ್, ಬಸ್ ಸ್ಟಾಂಡ್ ಸರ್ಕಲ್, ಆನವಟ್ಟಿ ಸರ್ಕಲ್ ನಿಂದ *ಶಿರಾಳಕೊಪ್ಪ ಪೊಲೀಸ್ ಠಾಣೆಗೆ ಬಂದು ಮುಕ್ತಾಯ ಮಾಡಲಾಯಿತು.*








ಪೋಲಿಸ್ ಪಥ ಸಂಚಲನದಲ್ಲಿ *ಶಿಕಾರಿಪುರ ಉಪ ವಿಭಾಗದ* ಪೊಲೀಸ್ ಉಪ ನಿರೀಕ್ಷಕರಾದ *ಶ್ರೀ ಪ್ರಶಾಂತ್, ಶ್ರೀಮತಿ ಪುಷ್ಪ, ಶ್ರೀ ಚಂದನ್, ಶ್ರೀ ಕೋಮಲಚಾರ್* ಹಾಗೂ ಪೊಲೀಸ್ ಸಿಬ್ಬಂದಿಗಳು ಮತ್ತು *ಆರ್. ಎ. ಎಫ್, ಮತ್ತು ಕೆ.ಎಸ್.ಆರ್.ಪಿ* ಯ ಅಧಿಕಾರಿ ಸಿಬ್ಬಂಧಿಗಳು ಭಾಗವಹಿಸಿದ್ದರು.

