ಎಸ್‌ ಎಸ್‌ ಎಲ್‌ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಹಬ್ಬ!

The Siasat News - Images

ಶಿರಾಳಕೊಪ್ಪ: ಮಕ್ಕಳ ಬುದ್ದಿಮಟ್ಟ ಹಾಗೂ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಶಿಕ್ಷಣ ಕ್ಷೇತ್ರದಲ್ಲಿ ಜಗತ್ತಿನಾದ್ಯಂತ ವಿಭಿನ್ನ ಪ್ರಯೋಗಗಳು ನಿರಂತರವಾಗಿ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಶಿಕಾರಿಪುರದ ಬಾಪೂಜಿ ಪ್ಯಾರಾ ಮೆಡಿಕಲ್ ಕಾಲೇಜು ಹಾಗೂ ಇ ನೆಟ್ ಎಜ್ಯುಕೇಷನ್ ಟ್ರಸ್ಟ್ ಅಡಿಯಲ್ಲಿ “ಎಕ್ಸಾಂಲೋಕ” ಸಹಯೋಗದೊಂದಿಗೆ ಜಿಲ್ಲೆಯ 10ನೇ ತರಗತಿ ಮಕ್ಕಳಿಗೆ ನಿತ್ಯ ಕಲಿಕೆ, ನಿರಂತರ ಪರೀಕ್ಷೆ ಯೋಜನೆ ಪ್ರಾರಂಭ ಮಾಡಿದ್ದು. 78 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಅಗಸ್ಟ 31 ರ ವರೆಗೆ “ಉಚಿತ ನೊಂದಣಿ ಅಭಿಯಾನ” ಹಮ್ಮಿಕೊಳ್ಳಲಾಗಿದೆ. 

ಈ ಮೂಲಕ ಪ್ರತಿ ದಿನ ಪರೀಕ್ಷೆ, ಪ್ರತಿ ದಿನ ಪ್ರಶಸ್ತಿ ನೀಡಲಾಗುವುದು. 10 ನೇ ತರಗತಿ ಮಕ್ಕಳಿಗಾಗಿ ತಂದಿರುವ ಯೋಜನೆ ಇದಾಗಿದ್ದು.ತಂತ್ರಜ್ಞಾನದ ಸಹಾಯದಿಂದ ಅಂದರೆ ಮೊಬೈಲ್ ಆಪ್ಲಿಕೇಷನ್ ಮೂಲಕ ನಡೆಯುವ ಈ ಪರೀಕ್ಷೆ ವಿಜೇತರಿಗೆ ಪ್ರತಿ ದಿನ ರೂ 1000 ನಗದು ಪುರಸ್ಕಾರ, ಈ ಪರೀಕ್ಷೆಗಳು ಸೆಪ್ಟಂಬರ್‌ 1 ರಿಂದ 30 ರವರೆಗೆ ನಡೆಯಲಿವೆ.

ಇಲ್ಲಿ ಪ್ರತಿನಿತ್ಯ 10ನೇ ತರಗತಿಯ ವಿಜ್ಞಾನ,ಗಣಿತ,ಸಮಾಜ ವಿಜ್ಞಾನ ಪರೀಕ್ಷೆಗಳು ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ನಿತ್ಯ ನಡೆಯುತ್ತದೆ. ಅಂದೇ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗುತ್ತದೆ. 

 ತಂತ್ರಜ್ಞಾನದ ಸಹಾಯದಿಂದ ವಿದ್ಯಾರ್ಥಿಗಳು ಪ್ರತಿನಿತ್ಯ ಪರೀಕ್ಷೆಯಲ್ಲಿ ಭಾಗವಹಿಸ ಬೇಕು.ಪ್ರತಿನಿತ್ಯದ ಓದಿನ ಫಲಿತಾಂಶ ಅಂದೇ ತಿಳಿಯಬೇಕು.ಇದರಿಂದ ವಿದ್ಯಾರ್ಥಿಗಳು ತಮ್ಮ ಹಿನ್ನಡೆ ಹಾಗೂ ಮುನ್ನಡೆಗಳನ್ನು ಗುರುತಿಸಲು ಅನುಕೂಲವಾಗುತ್ತದೆ.

ಇದರ ಜೊತೆಯಲ್ಲಿಯೆ ಮಕ್ಕಳಲ್ಲಿ ಆರ್ಥಿಕ ಶಿಸ್ತು,ಸಂಪಾದನೆ ಹಾಗೂ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ವಿದ್ಯಾರ್ಥಿ ದೆಸೆಯಲ್ಲಿ ಅವಕಾಶ ಕಲ್ಪಿಸಬೇಕು ಎನ್ನುವ ದೃಷ್ಠಿಯಿಂದ ಕಲಿಕೆಯಿಂದ, ಗಳಿಕೆ(ಲರ್ನ್ & ಅರ್ನ್) ಕಡೆಗೆ ಕರೆದೊಯ್ಯವ ಚಿಂತನೆ ಅಳವಡಿಸಿಕೊಳ್ಳಲಾಗಿದೆ. ಹಾಗಾಗಿ,ವಿಜೇತರಿಗೆ ಪ್ರತಿ ದಿನ ರೂ 1000 ನಗದು ಬಹುಮಾನ ನೀಡಲಾಗುತ್ತಿದೆ.

ಈ ಪರೀಕ್ಷೆಯಲ್ಲಿ ಭಾಗವಹಿಸುವ ಮಕ್ಕಳ ಪ್ರಗತಿಯ ವರದಿಯನ್ನು ನಿರಂತರವಾಗಿ ತಿಳಿಯಲು ಶಾಲೆಗಳಿಗೆ ಉಚಿತವಾಗಿ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಶಾಲೆಗಳು ಸಹ ಪರೀಕ್ಷೆ ನೀಡಲು, ಹಾಜರಾತಿ, ತುರ್ತು ಸಂದೇಶಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ಆಪ್ ನಲ್ಲಿ ಗೌಪ್ಯತೆಗೆ ಹೆಚ್ಚು ಒತ್ತು ನೀಡಲಾಗಿದ್ದು ಯಾವುದೇ ಮೊಬೈಲ್ ನಂಬರ್ ಗಳು ಬೇರೆಯವರಿಗೆ ಕಾಣಿಸುವುದಿಲ್ಲ, ಸಿಗುವುದಿಲ್ಲ.

ವಿದ್ಯಾರ್ಥಿಗಳು ಕೆಳಗಿನ ಲಿಂಕ್ ಬಳಸಿ ನೇರವಾಗಿ ಪ್ರವೇಶ ಪಡೆಯಬಹುದು ಅಥವಾ ಶಾಲೆಗಳು ವಿದ್ಯಾರ್ಥಿಗಳ ಹೆಸರು,ಆಧಾರ ಸಂಖ್ಯೆ,ನೊಂದಾಯಿಸುವ ಮೊಬೈಲ್ ಸಂಖ್ಯೆಯನ್ನು ಪಟ್ಟಿ ಮಾಡಿ ಮುಖ್ಯೋಪಾಧ್ಯಾಯರ ಸೀಲ್ ಹಾಗೂ ಸಹಿಯೊಂದಿಗೆ ವ್ಯಾಟ್ಸ್ಪ್ ಅಥವಾ ಇ-ಮೆಲ್ ಮಾಡಬಹುದು. 

ಹೆಚ್ಚಿನ ಮಾಹಿತಿಗಾಗಿ ಜಾಲತಾಣ www.examloka.com, ಇ-ಮೆಲ್- info.examloka@gmail.com ವ್ಯಾಟ್ಸ್ ಪ್ ಸಂಖ್ಯೆ: 9686998653 ಗೆ ಸಂಪರ್ಕಿಸಬಹುದು.

ಬಾಕ್ಸ ಹಾಕಬಹುದು:

10ನೇ ತರಗತಿಯ ವಿದ್ಯಾರ್ಥಿಗಳು ಅಗಸ್ಟ 31ರ ವರೆಗೆ ಉಚಿತ ವಾಗಿ ಪರೀಕ್ಷಾ ಸರಣಿಯಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬಹುದು. ನೋಂದಾಯಿತ ವಿದ್ಯಾರ್ಥಿಗಳು ಸೆ.1 ರಿಂದ 30 ವರೆಗೆ ನಿತ್ಯ ಪರೀಕ್ಷೆಯಲ್ಲಿ ಭಾಗವಹಿಸಿ ಪ್ರತಿ ದಿನ ರೂ 1000 ಬಹುಮಾನ ಪಡೆಯಬಹುದು.

ಬಾಪೂಜಿ ವಿದ್ಯಾ ಸಂಸ್ಥೆ ಸಂಸ್ಥಾಪಕ ಪಾಪಯ್ಯ ಮಾತನಾಡಿ, ವಿದ್ಯಾರ್ಥಿಗಳ ಸಾರ್ಮಥ್ಯವನ್ನು ಅಳೆಯಲು ಶಿಕ್ಷಕರಿಗೆ ಹಾಗೂ ಪೋಷಕರಿಗೆ ಪರೀಕ್ಷೆಗಳು ಅವಶ್ಯಕವಾಗಿ ಬೇಕಾಗಿದೆ. ಪ್ರತಿನಿತ್ಯ ಮಕ್ಕಳ ಅವಲೋಕನ ಮಾಡಲು ಈ ಪರೀಕ್ಷಾ ಸರಣಿ ಉಪಯುಕ್ತವಾಗಿದೆ.

ಕುವೆಂಪು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಹಾಗೂ ಕೌನ್ಸಿಲ್‌ ಅಕಾಡಮಿ ಸದಸ್ಯರಾಗಿರುವ ಡಾ||ಪರಮೇಶಪ್ಪ ಮಸಲವಾಡ ಮಾತನಾಡಿ, ಮಕ್ಕಳು ನೀಟ್‌,ಸಿಇಟಿ,ಐಎಎಸ್,ಐಪಿಎಸ್‌ ಮಾದರಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು “ಎಕ್ಸಾಂಲೋಕ” ಮಾದರಿಯ ಪರೀಕ್ಷೆ ಮಕ್ಕಳಿಗೆ ಮೆಟ್ಟಿಲಾಗುತ್ತದೆ ಎಂದರು.

Share the news!

Leave a Reply

Your email address will not be published. Required fields are marked *