Headlines

ಶಾಸಕ ಜಮೀರ್‌ಗೆ ಸಚಿವ ಪಟ್ಟ ನೀಡಲು ಆಗ್ರಹ: ಶಿರಾಳಕೊಪ್ಪದಲ್ಲಿ ಪ್ರತಿಭಟನೆಯ ಅಬ್ಬರ…

The Siasat News - Images

ಶಿರಾಳಕೊಪ್ಪ : 8/6/2026

ಶಾಸಕ ಬಿ.ಝೆಡ್ ಜಮೀರ್‌ ಅಹಮ್ಮದ್ ಖಾನ್‌ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಸೋಮವಾರ ಜಮೀರ್ ಅಹ್ಮದ್ ಅಭಿಮಾನಿಗಳ ಬಳಗದ ತಾಲ್ಲೂಕು ಅಧ್ಯಕ್ಷ ಹಾರೂನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಬಸ್ಟ್ಯಾಂಡ್ ವೃತ್ತ ದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಜಮೀರ್ ಅಹಮ್ಮದ್‌ ರವರ ಭಾವಚಿತ್ರ ಮತ್ತು ಬ್ಯಾನರ್ ಗಳನ್ನು ಹಿಡಿದು ಜೈಕಾರ ಕೂಗಿದರು.

ಈ ಸಂಧರ್ಭದಲ್ಲಿ ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿದ ಶಿರಾಳಕೊಪ್ಪ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಸದ್ದು ಬೆಳ್ಳಿಗಾವಿ ಹಿಂದುಳಿದ, ಅಲ್ಪ ಸಂಖ್ಯಾತ ಸಮಾಜದ ಪ್ರಭಾವಿ ನಾಯಕ ಜಮೀರ್ ಅಹ್ಮದ್ ರವರನ್ನು ಉದ್ದೇಶ ಪೂರ್ವಕ ವಾಗಿ ಅವರ ಮೇಲೆ ಸುಳ್ಳು ಆರೋಪ ಹೋರಿಸಿ ಉಪ ಮುಖ್ಯಮಂತ್ರಿ ಸ್ಥಾನದಿಂದ ವಂಚಿತರಾಗಿಸಿದ್ದು ಈ ಸಮಾಜಗಳಿಗೆ ಮಾಡಿದ ಅನ್ಯಾಯವಾಗಿದೆ.

ಕಾಂಗ್ರೆಸ್ ಹೈಕಮಾಂಡ್ ಕೂಡಲೇ ಇವರನ್ನು ಉಪಮುಖ್ಯಮಂತ್ರಿ ಸ್ಥಾನ ನೀಡಿ ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ನ್ಯಾಯ ಒದಗಿಸಿ ಕೊಡಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಕಾಂಗ್ರೆಸ್ ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆಯಲಿವೆ ಎಂದು ಎಚ್ಚರಿಕೆ ನೀಡಿದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ, ಹಿರಿಯ ಮುಸ್ಲಿಂ ಮುಖಂಡ ಭಾಷಾ ಸಾಬ್ ಅನವಟ್ಟಿ ಮಾತನಾಡಿ ಜಮೀರ್ ಅಹ್ಮದ್ ರವರು ಕರ್ನಾಟಕ ರಾಜ್ಯದಲ್ಲಿರುವ ಮುಸಲ್ಮಾನ್ ಸಮಾಜದ ಭರವಸೆ, ಪಕ್ಷದಲ್ಲಿ ಕೆಲವರು ಮುಸ್ಲಿಂ ಮುಖಂಡರಿಗೆ ಒಬ್ಬರ ಮೇಲೆ ಮತ್ತೊಬ್ಬರಿಗೆ ಎತ್ತಿ ಕಟ್ಟಿ ಸಮಾಜ ವನ್ನು ಒಡೆಯುವ ಹುನ್ನಾರ ನಡೆಸಿದ್ದಾರೆ. ಈ ತರದ ಚಾಳಿಗಳು ಬಿಡಬೇಕು ಹಾಗೂ ಹಿರಿಯ ಶಾಸಕ, ಸಮುದಾಯದ ಪ್ರಭಾವಿ ಮುಖಂಡ ಬಿ ಜೀಡ್ ಝಮೀರ್ ಅಹ್ಮದ್ ಖಾನ್ ರವರನ್ನು ಕ್ಯಾಬಿನೆಟ್ ನಲ್ಲಿ ಸೊಕ್ತ ಮತ್ತು ಹಿರಿಯ ಸ್ಥಾನ ನೀಡಿ ಗೌರವಿಸ ಬೇಕೆಂದು ಆಗ್ರಹ ವ್ಯಕ್ತ ಪಡಿಸಿದರು.

ಪ್ರತಿಭಟನೆಯಲ್ಲಿ ಶಿಕಾರಿಪುರ ಎನ್ ಎಸ್ ಯು ಐ ನಗರ ಅಧ್ಯಕ್ಷ ಹುಸೇನ್, ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಭಿಮಾನಿ ಬಳಗದ ಎಂ ಹಬೀಬ್, ವಸೀಮ್. ಸುಫಿಯಾನ್, ತಾಹ, ಇಸ್ರಾರ್, ಬಸವಣ್ಯಪ್ಪ, ಜಬಿ ಚಿಕ್ಕ ಜಂಬೂರು ಮತ್ತಿತರರು ಇದ್ದರು.

ವರದಿ:ನವೀದ್ ಶಿರಾಳಕೊಪ್ಪ 9538633929

Share the news!

Leave a Reply

Your email address will not be published. Required fields are marked *